ಹೊಸದಿಲ್ಲಿ: ಭಾರತೀಯ ವನಿತಾ ಕ್ರಿಕೆಟಿನ ಇತಿಹಾಸವನ್ನು ಒಳಗೊಂಡಿರುವ ಪುಸಕ್ತ “ದಿ ಫಯರ್ ಬರ್ನ್ಸ್ ಬ್ಲೂ: ಎ ಹಿಸ್ಟರಿ ಆಫ್ ವುವೆನ್ಸ್ ಕ್ರಿಕೆಟ್ ಇನ್ ಇಂಡಿಯಾ’ನವೆಂಬರ್ 30ರಂದು ಬಿಡುಗಡೆಗೊಳ್ಳಲಿದೆ ಎಂದು ವೆಸ್ಟ್‌ಲ್ಯಾಂಡ್ ಪ್ರಕಾಶನ ತಿಳಿಸಿದೆ.
ಈ ಪುಸ್ತಕವನ್ನು ಕ್ರೀಡಾ ಪತ್ರಕರ್ತೆಯರಾದ ಕಾರುಣ್ಯ ಕೇಶವ್ ಹಾಗೂ ಸಿದ್ಧಾಂತಾ ಪಾಠಕ್ ಜಂಟಿಯಾಗಿ ರಚಿಸಿದ್ದಾರೆ.
ಕ್ರಿಕೆಟ್‌ನ ವಿಸ್ತಾರವಾದ ನಿರೂಪಣೆ, ವನಿತಾ ಕ್ರಿಕೆಟ್ ಹುಟ್ಟಿನಿಂದ ಮೊದಲ್ಗೊಂಡು ಇಂದಿನ ವರೆಗಿನ ವಿಚಾರಗಳು, ಅಮೂಲ್ಯ ಛಾಯಾಚಿತ್ರಗಳು ಇದರಲ್ಲಿವೆ. ಈ ಪುಸ್ತಕ ವನಿತಾ ಕ್ರಿಕೆಟ್ ಲೆಜೆಂಡ್‌ಗಳಾದ ಶಾಂತಾ ರಂಗಸ್ವಾಮಿ- ಡಯಾನಾ ಎಡುಲ್ಜಿ ಕಾಲದಿಂದ ಮೊದಲ್ಗೊಂಡು ಸಮಕಾಲೀನ ವನಿತಾ ಕ್ರಿಕೆಟ್ ಸಮಗ್ರ ಇತಿಹಾವನ್ನು ತೆರೆದಿಡಲಿದೆ.
“ವನಿತಾ ಕ್ರಿಕೆಟಿಗರ ಪಯಣ ಸ್ಫೂರ್ತಿದಾಯಕ ಹಾಗೂ ಮನೋರಂಜನೀಯ. ಕ್ರಿಕೆಟ್‌ನಂತಹ ಕ್ರೀಡೆಯಲ್ಲಿ ಬದಲಾವಣೆಯಾದಾಗ ಸಮಾಜದಲ್ಲಿ ವನಿತೆಯರ ಸ್ಥಾನಮಾನದಲ್ಲೂ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ವನಿತಾ ಕ್ರಿಕೆಟಿಗರ ಜೀವನವನ್ನು ನಾವು ಸಂಭ್ರಮಿಸಬೇಕು ಹಾಗೂ ಅವರ ಸಾಧನೆಗಳು ನೆನಪಿನಲ್ಲಿ ಇರಿಸಿಕೊಳ್ಳಬಬೇಕು’ ಎಂದು ಕಾರುಣ್ಯ ಕೇಶವ್ ಹೇಳಿದ್ದಾರೆ.