Advertisement
ಜಗದೇವರಾವ್ ನಿಧನಾ ನಂತರ 1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ, ಸಚಿವರೂ ಆಗಿ ಒಳ್ಳೆ ಆಡಳಿತ ನೀಡಿದ್ದರು. ಚುನಾವಣೆಗೂ ಮುನ್ನ ಅವರನ್ನು ಭೇಟಿ ಮಾಡಿದ್ದೆ. ಆರೋಗ್ಯ ಸ್ಥಿತಿ ಸರಿ ಇಲ್ಲದಿದ್ದರೂ ಲವಲವಿಕೆಯಿಂದ ಇದ್ದರು. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಅಭಿಮಾನಿಗಳಿಗೆ, ಕುಟುಂಬ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಎ.ಎಸ್. ಪಾಟೀಲ ನಡಹಳ್ಳಿ ಜನ್ಮದಿನ. ಹೀಗಾಗಿ ಮತಕ್ಷೇತ್ರದ ವಿವಿಧೆಡೆ ಅವರ ಅಭಿಮಾನಿಗಳು ಶಾಸಕರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮ ಏರ್ಪಡಿಸಿದ್ದರು. ವಿಮಲಾಬಾಯಿ ನಿಧನದ ಹಿನ್ನೆಲೆ ಶಾಸಕರು ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದರು. ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನಕ್ಕೆ ಪತ್ನಿ ಮಹಾದೇವಿ ಅವರೊಂದಿಗೆ ತೆರಳಿ ಪೂಜೆ ಸಲ್ಲಿಸುವುದಕ್ಕೆ ಸೀಮಿತಗೊಳಿಸಿದರು. ಎಂಜಿವಿಸಿ ಕಾಲೇಜಿನಲ್ಲಿ ದರ್ಶನ ವ್ಯವಸ್ಥೆ: ವಿಮಲಾಬಾಯಿ ಅವರು ಇಲ್ಲಿನ ಎಂಜಿವಿಸಿ ಕಾಲೇಜು ಆಡಳಿತದ ಎಸ್‌ಜಿವಿಸಿ ಟ್ರಸ್ಟ್ ಧರ್ಮದರ್ಶಿಯಾಗಿದ್ದರಿಂದ ಕಾರ್ಯಾಧ್ಯಕ್ಷ ಅಶೋಕ ತಡಸದ ನೇತೃತ್ವದಲ್ಲಿ ಆಡಳಿತ ಮಂಡಳಿ ಸದಸ್ಯರು, ಕಾಲೇಜುಗಳ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಸಂತಾಪ ಸಭೆ ನಡೆಸಿದರು.
Related Articles
Advertisement
ಸಂತಾಪ: ದೇಶಮುಖ ಮನೆತನದ ಸಂಬಂಧಿಯೂ ಆಗಿರುವ ಮಾಜಿ ಸಚಿವ ಸಿ.ಎಸ್. ನಾಡಗೌಡ, ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ನಾಲತವಾಡ ಪಪಂ ಅಧ್ಯಕ್ಷ ಪೃಥ್ವಿರಾಜ್ ನಾಡಗೌಡ, ಜೆಡಿಎಸ್ ಧುರೀಣೆಮಂಗಳಾದೇವಿ ಬಿರಾದಾರ, ಜಿಪಂ ಮಾಜಿ ಸದಸ್ಯ ಮುನ್ನಾಧಣಿ ನಾಡಗೌಡ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡ, ಬಿಜೆಪಿ ಧುರೀಣ ಎಂ.ಎಸ್. ಪಾಟೀಲ, ಗೋವಾ ವಿಮೋಚನಾ ಹೋರಾಟಗಾರ ಬಿ.ಎಚ್. ಮಾಗಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಜೆ.ಎ. ಚಿನಿವಾರ, ಶಂಕರರಾವ್ ದೇಶಮುಖ, ಗುರುಪ್ರಸಾದ ದೇಶಮುಖ, ನಾನಾಸಾಹೇಬ್ ದೇಶಮುಖ, ಪಾವಡೆಪ್ಪಗೌಡ ಹವಾಲ್ದಾರ್ ಸೇರಿದಂತೆ ಹಲವರು ವಿಮಲಾಬಾಯಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ ರಮೇಶಕುಮಾರ ಅಂತಿಮ ನಮನ ನಾಲತವಾಡ: ವಿಧಾನ ಸಭಾಧ್ಯಕ್ಷ ರಮೇಶಕುಮಾರ ಅವರು ರವಿವಾರ ರಾತ್ರಿ ಇಲ್ಲಿನ ದೇಶಮುಖರ ವಾಡೆಗೆ ಸರ್ಕಾರದ ಪ್ರತಿನಿಧಿಯಾಗಿ ಭೇಟಿ ಕೊಟ್ಟು ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅವರ ಪಾರ್ಥಿವ ಶರೀರಕ್ಕೆ ಹೂಮಾಲೆ ಅರ್ಪಿಸಿ ಅಂತಿಮ ದರ್ಶನ ಪಡೆದರು. ಈ ವೇಳೆ ಅನೌಪಚಾರಿಕವಾಗಿ ಮಾತನಾಡಿ, ತಮ್ಮ ಮತ್ತು ದಿ| ಜೆ.ಎಸ್. ದೇಶಮುಖ, ದಿ| ವಿಮಲಾಬಾಯಿ ದೇಶಮುಖರ ರಾಜಕೀಯ ಒಡನಾಟ ನೆನಪಿಸಿಕೊಂಡರು. ತಾವು ಸಹಿತ ಹಿಂದೆ ಜನತಾ ಪಾರ್ಟಿ ಮತ್ತು ಜನತಾದಳ ಪಕ್ಷಗಳಲ್ಲಿ ಇದ್ದಾಗಿನ ಅನುಭವಗಳನ್ನು ಹಂಚಿಕೊಂಡರು. ಸ್ಥಳೀಯ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಮಾಜಿ ಸಚಿವ ನಾಡಗೌಡ, ಜಿಲ್ಲಾಡಳಿತದ ಪ್ರತಿನಿಧಿಯಾಗಿ ಆಗಮಿಸಿದ್ದ ವಿಜಯಪುರ ಉಪ ವಿಭಾಗಾಧಿ ಕಾರಿ ಡಾ| ಶಂಕರ ವಣಿಕ್ಯಾಳ, ಶಂಕರರಾವ್ ದೇಶಮುಖ ಸೇರಿದಂತೆ ಹಲವರು ಇದ್ದರು.