Advertisement

ಗುರುಗಳು ವಿದೇಶಿ ಬಟ್ಟೆ ಸುಟ್ಟ ಸ್ಥಳದಲ್ಲಿ ಶಿಷ್ಯನ ಅಂತಿಮ ದರ್ಶನ

10:05 AM Dec 31, 2019 | sudhir |

ಉಡುಪಿ: ಪೇಜಾವರ ಶ್ರೀಗಳ ಗುರು ಶ್ರೀ ವಿಶ್ವಮಾನ್ಯತೀರ್ಥರು ಸ್ವಾತಂತ್ರ್ಯ ಹೋರಾಟದಲ್ಲಿ ಆಸಕ್ತಿ ಹೊಂದಿದ್ದರು. ಕೊನೆಗೆ ಗಾಂಧೀಜಿಯವರಿಗೆ ಪತ್ರ ಬರೆದು ಮಠಾಧಿಕಾರವನ್ನು ಶಿಷ್ಯ ಶ್ರೀವಿಶ್ವೇಶತೀರ್ಥರಿಗೆ ಒಪ್ಪಿಸಿ ಸಾಬರಮತಿಗೆ ಹೋಗಿ ನೆಲೆಸಿದ್ದರು.

Advertisement

ಶ್ರೀ ವಿಶ್ವಮಾನ್ಯತೀರ್ಥರು ಆ ಕಾಲದಲ್ಲಿ ವಿದೇಶೀ ಬಟ್ಟೆಗಳನ್ನು ಸುಟ್ಟಿದ್ದರು. ಉಡುಪಿಯಲ್ಲಿ ಅಜ್ಜರಕಾಡು ಸ್ವಾತಂತ್ರ್ಯ ಹೋರಾಟಗಾರರ ಒಂದು ಪ್ರಮುಖ ತಾಣ. ಪ್ರತಿಭಟನೆಗಳು ನಡೆಯುತ್ತಿದ್ದುದೂ ಅಲ್ಲಿ ಅಥವಾ ಈಗಿನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಎದುರಿನ ಜಟ್ಕಾ ನಿಲ್ದಾಣದಲ್ಲಿ.

ಗುರುಗಳು ವಿದೇಶೀ ಬಟ್ಟೆಗಳನ್ನು ಸುಟ್ಟಿದ್ದರು ಎಂಬುದನ್ನು ಶ್ರೀ ವಿಶ್ವೇಶತೀರ್ಥರು ಹೇಳುತ್ತಿದ್ದರು. ಆದರೆ ಅವರಿಗೆ ಎಲ್ಲಿ ಅನ್ನುವುದು ಗೊತ್ತಿರಲಿಲ್ಲ. ಇಂತಹ ಚಟುವಟಿಕೆಗಳು ನಡೆಯುತ್ತಿದ್ದ ತಾಣ ಅಜ್ಜರಕಾಡು ಮೈದಾನವಾದ ಕಾರಣ ಅವರು ವಿದೇಶೀ ಬಟ್ಟೆಗಳನ್ನು ಅಲ್ಲಿಯೇ ಸುಟ್ಟಿದ್ದರು ಎಂದು ಭಾವಿಸಬಹುದು. ಗುರುಗಳಂತೆ ಶಿಷ್ಯನೂ ಅಪ್ಪಟ ದೇಸೀ ವಾದಿ, ರಾಷ್ಟ್ರವಾದಿ. ಈಗ ಶಿಷ್ಯ ಶ್ರೀ ವಿಶ್ವೇಶತೀರ್ಥರ ಅಂತಿಮ ದರ್ಶನವನ್ನು ಸಾರ್ವಜನಿಕರು ಅಜ್ಜರಕಾಡು ಮೈದಾನದಲ್ಲಿ ಪಡೆಯುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next