Advertisement

ಮಾಸ್ತಿಯ ಹುಲಿ ಉಳಿಸೋ ಹೋರಾಟ

11:48 AM May 12, 2017 | |

ಆರಂಭದಿಂದಲೂ ಕುತೂಹಲ ಮೂಡಿಸಿದ್ದ “ಮಾಸ್ತಿಗುಡಿ’ ಚಿತ್ರ ಇಂದು ತೆರೆಕಾಣುತ್ತಿದೆ. ದುನಿಯಾ ವಿಜಯ್‌ ಹಾಗೂ ಅಮೂಲ್ಯ ಅಭಿನಯದ ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಅದರಲ್ಲಿ ಪ್ರಮುಖವಾಗಿದ್ದು ಹುಲಿಗಳನ್ನು ಸಂರಕ್ಷಣೆ ಕುರಿತ ವಿಷಯ. 

Advertisement

ಹೌದು, ಕಾಡಿನಲ್ಲಿರುವ ಹುಲಿಗಳನ್ನು ರಕ್ಷಿಸಿದರೆ ನೀರು ಸಿಗುತ್ತೆ ಎಂಬುದೇ ವಿಶೇಷ ಸಂದೇಶ. ಇದು ಎಷ್ಟರಮಟ್ಟಿಗೆ ನಿಜ ಎಂಬ ಪ್ರಶ್ನೆಗೆ ಸ್ಟಾರ್‌ ನಟರೊಬ್ಬರು, ಚಿತ್ರದಲ್ಲಿ ವಿವರ ಕೊಟ್ಟಿದ್ದಾರಂತೆ. ಅದೇನೆ ಇರಲಿ, “ಮಾಸ್ತಿಗುಡಿ’ಯೊಳಗೆ ಏನೆಲ್ಲಾ ಇದೆ, ಯಾರೆಲ್ಲಾ ಇರುತ್ತಾರೆ, ಏನೇನು ಅಂಶಗಳಿವೆ ಎಂಬುದಕ್ಕೆ “ಮಾಸ್ತಿಗುಡಿ’ ನೋಡಿದರೆ ಉತ್ತರ ಸಿಗಲಿದೆ.

1998 ರಲ್ಲಿ ಬಿಳಿಗಿರಿ ರಂಗನಬೆಟ್ಟದಲ್ಲಿ ನಡೆದ ಒಂದು ಘಟನೆಯೇ ಚಿತ್ರದ ಕಥಾವಸ್ತು. ಆ ಕಾಡಲ್ಲಿ ಹುಲಿಗಳ ಹತ್ಯೆ ನಡೆಯುತ್ತಲೇ ಇರುತ್ತೆ. ಯಾಕೆ ಹುಲಿಗಳು ಸಾಯುತ್ತಿವೆ, ಅದಕ್ಕೆ ಕಾರಣವೇನು, ಯಾರ ಪಾತ್ರವಿದೆ ಎಂಬಿತ್ಯಾದಿ ವಿಷಯಗಳು ಇಲ್ಲಿ ಅಡಗಿವೆ ಎಂಬುದು ಚಿತ್ರತಂಡದ ಮಾತು. 

ನಿರ್ದೇಶಕ ನಾಗಶೇಖರ್‌ ಇಲ್ಲಿ  ಹುಲಿಯ ಚರ್ಮ, ಹಲ್ಲು, ಉಗುರು ಹೀಗೆ ಕೆಲ ಭಾಗಗಳನ್ನು ಮಾರಾಟ ಮಾಡಿ ಕೋಟಿ ಸಂಪಾದಿಸುವ ದುಷ್ಟರನ್ನು ಸಂಹರಿಸುವ ಕಥೆಯನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದಾರಂತೆ. ದುನಿಯಾ ವಿಜಯ್‌ ಇಲ್ಲಿ ಐದು ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಸುಂದರ್‌ ಪಿ.ಗೌಡ ನಿರ್ಮಿಸಿದ್ದಾರೆ. ಸಾಧುಕೋಕಿಲ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next