Advertisement

ವಿದ್ಯುತ್‌ ಖಾಸಗೀಕರಣ ವಿರುದ್ಧ ಹೋರಾಟ

05:59 PM Mar 11, 2021 | Team Udayavani |

ಆಳಂದ: ಕೇಂದ್ರ ಸರ್ಕಾರ ವಿದ್ಯುತ್‌ ವಲಯವನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಕ್ರಮವನ್ನು ಕೈಬಿಡದಿದ್ದರೆ ನೌಕರರು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಕೆಪಿಟಿಸಿಎಲ್‌ ನೌಕರರ ಸಂಘದ ಜೆಸ್ಕಾಂ ಕಂಪನಿ ರಾಜ್ಯ ಉಪಾಧ್ಯಕ್ಷ  ಬಾಬು ಕೋರೆ ಎಚ್ಚರಿಸಿದರು. ಪಟ್ಟಣದ ಜೆಸ್ಕಾಂ ಕಚೇರಿ ಆವರಣದಲ್ಲಿ ಜೆಸ್ಕಾಂ ಕಂಪನಿಯ ನೌಕರ ಸಂಘದ ನೂತನ ಪದಾಧಿ ಕಾರಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ವಿದ್ಯುತ್‌ ಖಾಸಗೀಕರಣದಿಂದ ವಿದ್ಯುತ್‌ ವ್ಯವಸ್ಥೆ ಸಂಪೂರ್ಣ ಬಂಡವಾಳಶಾಹಿಗಳ ಪಾಲಾಗುತ್ತದೆ. ಇದರಿಂದ ಬಡವರು, ರೈತರು ಸಾಮಾನ್ಯ ವರ್ಗದ ಗ್ರಾಹಕರಿಗೆ ಹೊರೆಯಾಗಿ, ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಕೇಂದ್ರ ಸರ್ಕಾರ ಖಾಸಗೀಕರಣವನ್ನು ಕೂಡಲೇ ಕೈ ಬಿಟ್ಟು ಯತಾಸ್ಥಿತಿಯಲ್ಲಿ
ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶದ ಜೆಸ್ಕಾಂ ನೌಕರರಿಗೆ ಸಿ ಮತ್ತು ಡಿ ಗುಂಪಿನ ನೌಕರರಿಗೆ ಬಡ್ತಿ ನೀಡುವಲ್ಲಿ 371ನೇ (ಜೆ)ಕಲಂ ಅಡಿಯಲ್ಲಿ ಅನ್ಯಾಯವಾಗಿದೆ. ಕೆಳಹಂತದ ನೌಕರರಿಗೆ ಪರಿಪೂರ್ಣ ಮಾಹಿತಿ ಇಲ್ಲದ ಕಾರಣ 2013ರಲ್ಲಿ 371ನೇ (ಜೆ)ಕಲಂ ಐಚ್ಛಿಕ ಪತ್ರವನ್ನು ಜೆಸ್ಕಾಂ ಕಂಪನಿಯ 4500 ನೌಕರರಲ್ಲಿ ಕೇವಲ ಒಂದು ಸಾವಿರ ನೌಕರರಿಗೆ ಮಾತ್ರ ನೀಡಲಾಗಿದೆ. ಇದರಿಂದ ಇನ್ನುಳಿದ 3500 ನೌಕರರಿಗೆ ಬಡ್ತಿಯಲ್ಲಿ ಅನ್ಯಾಯವಾಗಿದೆ.ಇದನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯನಿರ್ವಾಹಕ ಅಭಿಯಂತರ ಜೆಸ್ಕಾಂ ಗ್ರಾಮೀಣ ವಿಭಾಗ-1ರ ಸಂತೋಷ ಚವ್ಹಾಣ ಉದ್ಘಾಟಿಸಿದರು. ಆಳಂದ ಎಇಇ ಮಾಣಿಕರಾವ ಕುಲಕರ್ಣಿ, ಎಸ್ಸಿ-ಎಸ್ಟಿ ಕಲ್ಯಾಣ ಸಂಸ್ಥೆ ಜೆಸ್ಕಾಂ ಕಂಪನಿ ಉಪಾಧ್ಯಕ್ಷ ಬಿ.ಆರ್‌. ಬುದ್ಧಾ, ನಿಗಮ ಕಚೇರಿ, ಅನಿಲ ಶೇರಿಕಾರ, ಸಂಘದ ಕೇಂದ್ರ ಸಮಿತಿ ಸದಸ್ಯ ಅನಿಲ ಮುಗಳಿ, ಕೆಪಿಟಿಸಿಎಲ್‌ ನೌಕರ ಸಂಘದ ಕೇಂದ್ರ ಸಮಿತಿ ಸದಸ್ಯ ಬಾಬುಗೌಡ ಪಾಟೀಲ, ನಿವೃ ತ್ತ ಅಧಿ ಕಾರಿ ನೀಲಪ್ಪ ದೋತ್ರೆ ನೌಕರರ ಹಿತ ಚಿಂತನೆ ಮತ್ತು ಒಗಟ್ಟಿನ ಕುರಿತು ಮಾತನಾಡಿದರು.

ಗಣಪತಿ ಮರಪಳ್ಳಿ, ಆಳಂದ ನೌಕರ ಸಂಘದ ಅಧ್ಯಕ್ಷ ನಾಗೇಂದ್ರ ತಡಕಲ್‌, ಕಾರ್ಯದರ್ಶಿ ಯಲ್ಲಾಲಿಂಗ ಶಿರೂರ, ಶಸಂಕರ ಪಸರಗಿ, ಡಿ.ಎಲ್‌. ಜಾಧವ, ನಾಗೇಂದ್ರಪ್ಪ, ಇಇ ಬಸವರಾಜ, ನಾಗೇಂದ್ರ ಚಿತಕೋಟಿ, ಸಂಜಯ ಮಠ, ಜೆಇ ಕೇದಾರನಾಥ, ಕೇದಾರ ಭಕರೆ, ರಾಮ ತೋಳೆ, ಪರಮೇಶ್ವರ, ಗುರುಪಾದ, ವಿಜಯಕುಮಾರ ಪೂಜಾರಿ, ಶಶಿಕಾಂತ ಸರಸಂಬಿ, ವಿಜಯಕುಮಾರ ದೊಡ್ಡಿ, ಪ್ರಕಾಶ ಭೂಸಾರೆ, ಚನ್ನವೀರ ದೋತ್ರೆ, ಸಿದ್ಧರಾಮ ಇಟಗಿ, ಗುತ್ತಿಗೆದಾರ ಅನ್ವರಅಲಿ, ಸಿದ್ಧರಾಮ ನಂದಗಾಂವ ಹಾಜರಿದ್ದರು. ಬಸವರಾಜ ಸೊನ್ನದ ನಿರೂಪಿಸಿದರು.

Advertisement

ಸಂಘದ ರಾಜ್ಯ ಉಪಾಧ್ಯಕ್ಷ ಬಾಬು ಕೋರೆ ಹಾಗೂ ಇನ್ನಿತರ ಪದಾ ಧಿಕಾರಿಗಳನ್ನು ಪ್ರಮುಖ ರಸ್ತೆಗಳ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next