Advertisement

ನಿಜಾಮರ ವಿರುದ್ಧದ ಹೋರಾಟ ರೋಮಾಂಚನಕಾರಿ

11:34 AM Aug 13, 2018 | Team Udayavani |

ಕಲಬುರಗಿ: ನಿಜಾಮರ ನಾಡಿನಲ್ಲಿ ನಡೆದ ಸ್ವಾತಂತ್ರ್ಯಾ ಹೋರಾಟ ಹಾಗೂ ಏಕೀಕರಣ ಚಳವಳಿ ಇತಿಹಾಸ ಮೈನವಿರೇಳಿಸುವ ಒಂದು ರೋಚಕ ಕಥೆ. ಹೈಕ ಭಾಗವನ್ನು ನಿಜಾಮನ ಕಪಿಮುಷ್ಠಿಯಿಂದ ಸ್ವತಂತ್ರಗೊಳಿಸಲು ಅನೇಕರು ತ್ಯಾಗ-ಬಲಿದಾನ ಮಾಡಿದ್ದಾರೆ. ಅವರ ಸ್ಮರಣೆ ನಿರಂತರ ನಡೆಯಲಿ ಎಂದು ಕರ್ನಾಟಕ ಗೃಹ ರಕ್ಷಕ ದಳದ ಕಮಾಂಡೆಂಟ್‌ ಸಂತೋಷ ಪಾಟೀಲ ಸರಡಗಿ ಹೇಳಿದರು.

Advertisement

ಭಾರತೀಯ ವಿದ್ಯಾ ಕೇಂದ್ರದಲ್ಲಿ ಸ್ವಾತಂತ್ರ್ಯೊತ್ಸವ ಸವಿನೆನಪಿಗಾಗಿ ವಿಶ್ವಜ್ಯೋತಿ ಪ್ರತಿಷ್ಠಾನ, ಶಿರಪುರ ಪ್ರಕಾಶನ, ಕನ್ನಡನಾಡು ಲೇಖಕರ ಹಾಗೂ ಓದುಗರ ಸಹಕಾರ ಸಂಘದ ಸಹಯೋಗದೊಂದಿಗೆ ಕಳೆದ 10 ದಿನಗಳಿಂದ ನಡೆಸಲಾಗುತ್ತಿರುವ ಸ್ವಾತಂತ್ರ್ಯೊಕ್ಕಾಗಿ… ಸಾವಿರದ ಹೋರಾಟಗಾರರ ಸರಣಿ ಉಪನ್ಯಾಸ ಮಾಲಿಕೆ ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಅವರು ಮಾತನಾಡಿದರು.

ಹಿರಿಯ ಸಾಹಿತಿ ಡಾ| ಸ್ವಾಮಿರಾವ್‌ ಕುಲಕರ್ಣಿ ಮಾತನಾಡಿ, ಸ್ವಾತಂತ್ರ್ಯೊ ಹೋರಾಟಗಾರ ಜಗನ್ನಾಥರಾವ್‌ ಚಂಡ್ರಿಕಿ
ಹೈಕ ಜನರ ಮನ ಗೆದ್ದ ನಾಯಕರಾಗಿದ್ದರು. ಇವರು ಕೇವಲ ಒಬ್ಬ ವ್ಯಕ್ತಿಯಾಗಿರದೇ ಹೈಕ ಭಾಗದ ಶಕ್ತಿಯಾಗಿದ್ದರು.
ದೇಶಪ್ರೇಮಿ, ಗಾಂಧೀವಾದಿ ಹಾಗೂ ನೇರ-ನುಡಿಯನ್ನು ಅಳವಡಿಸಿಕೊಂಡಿದ್ದ ಇವರು ಇಂದಿನ ಪೀಳಿಗೆಗೆ ಆದರ್ಶರು
ಎಂದರು. ಭಾರತೀಯ ವಿದ್ಯಾ ಕೇಂದ್ರದ ಚನ್ನವೀರಪ್ಪ ಗುಡ್ಡಾ ಅಧ್ಯಕ್ಷತೆ ವಹಿಸಿದ್ದರು.

ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ , ರವೀಂದ್ರಕುಮಾರ ಭಂಟನಳ್ಳಿ, ಶರಣರಾಜ ಛಪ್ಪರಬಂದಿ, ಜಗದೀಶ ಮರಪಳ್ಳಿ, ಪರಮೇಶ್ವರ ಶಟಕಾರ, ಶ್ರೀಕಾಂತ ಪಾಟೀಲ ತಿಳಗೂಳ, ಶಿವಾನಂದ ಮಠಪತಿ, ರಾಜಶೇಖರ ಯಾಳಗಿ, ಸವಿತಾ ಪಾಟೀಲ ಸೊಂತ, ಜ್ಯೋತಿ ಹಿರೇಮಠ, ಪ್ರಭುಲಿಂಗ ಯಳವಂತಗಿ ಹಾಜರಿದ್ದರು. ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ಸಹಕಾರದಿಂದ ಸಂಗೀತ ಕಲಾವಿದ ಮಹೇಶಕುಮಾರ ಬಡಿಗೇರ ದೇಶಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಪುಸ್ತಕ ಪದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next