Advertisement
ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಪ್ರತೀ ಮುಂಗಡ ಪತ್ರದಲ್ಲೂ ಕೃಷಿಗೆ ಸಿಂಹಪಾಲನ್ನು ಮೀಸಲಿಡುತ್ತಿವೆ. ಕೃಷಿಕರನ್ನು ತಮ್ಮತ್ತ ಸೆಳೆಯಲು ವಿವಿಧ ರಾಜಕೀಯ ಪಕ್ಷಗಳು ಕೃಷಿಕರ ವಿಚಾರವಾಗಿ ರಸ್ತೆಗಿಳಿಯುತ್ತಿವೆ. ಈ ಎಲ್ಲ ಭರವಸೆ, ಆಶ್ವಾಸನೆಗಳ ನಡುವೆಯೂ ಕೃಷಿಯನ್ನು ಪೂರ್ಣಪ್ರಮಾಣದ ಉದ್ಯಮವ ನ್ನಾಗಿ ಸ್ವೀಕರಿಸಲು ಯುವಕರು ಹಿಂದೇಟು ಹಾಕುತ್ತಿದ್ದಾರೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಕೃಷಿಯನ್ನು ಕೈಹಿಡಿಯುವವರು ಅಧಿಕವೇ ಹೊರತು ಸ್ವಯಂ ಆಸಕ್ತಿಯಿಂದ ಕೈಹಿಡಿಯು ವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಈ ಬಗ್ಗೆ ಗಂಭೀರವಾಗಿ ಯಾರೂ ಚಿಂತಿಸುತ್ತಿಲ್ಲ. ರಾಜಕೀಯ ಪಕ್ಷಗಳ “ಕೃಷಿ ಕಾಳಜಿ’ ಕೇವಲ ಮತದ ಮೇಲೆ ಕೇಂದ್ರೀಕೃತವಾದರೆ; ಕೃಷಿ ಕ್ಷೇತ್ರದ ತಜ್ಞರು ಸುಧಾರಣ ಭಾಷಣ, ಬರವಣಿಗೆಯಲ್ಲಿಯೇ ಮಗ್ನರಾಗುತ್ತಾರೆ. ಕೃಷಿ ಯಲ್ಲಿ ತೊಡಗಿಸುವಂತೆ ಪ್ರೇರೇಪಿಸುವ ಯಾವ ಯೋಜನೆಗಳತ್ತಲೂ ವಿದ್ಯಾವಂತ ಯುವಕರಲ್ಲಿ ವಿಶ್ವಾಸ ಮೂಡುತ್ತಿಲ್ಲ.
ಮೊದಲನೆಯದಾಗಿ ಕೃಷಿ ಕುರಿತಂತೆ ವಿದ್ಯಾವಂತ ಯುವಕರನ್ನು ನಿರುತ್ಸಾಹಿಗಳನ್ನಾಗಿ ಮಾಡುವ ಪರಿಸರಕ್ಕೆ ಮಂಗಳ ಹಾಡಬೇಕು. ಸರಕಾರಿ ಅಥವಾ ಖಾಸಗಿ ಕ್ಷೇತ್ರಗಳಲ್ಲಿ ದುಡಿಯುವವರಷ್ಟೇ ಗೌರವದ ವಾತಾವರಣ ಇಲ್ಲಿಯೂ ಮೂಡಬೇಕು. ಒಟ್ಟಿನಲ್ಲಿ ನಮ್ಮ ಮನಃಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು.
Related Articles
Advertisement
ಪ್ರತಿ ಗ್ರಾಮದಲ್ಲೂ ಕೃಷಿ ಭವನ ನಿರ್ಮಾ ಣವಾಗಬೇಕು. ಕೃಷಿ ಭವನಕ್ಕೆ ಸಂಬಂಧಿಸಿ ದಂತೆ ಸ್ಥಳೀಯ ಕೃಷಿಕರ ಸಂಘಟನೆ ಸದಾ ಚಟುವಟಿಕೆಗಳಿಂದ ಕೂಡಿರಬೇಕು. ಅದರ ಉಸ್ತುವಾರಿಗೆ ಸರಕಾರವೇ ಒಬ್ಬ ಅಧಿಕಾರಿ ಯನ್ನು ನೇಮಿಸಬೇಕು. ಕೃಷಿಗೆ ಸಂಬಂಧಿಸಿದ ಅಂತರ್ಜಾಲದ ಮಾಹಿತಿ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪತ್ರಿಕೆಗಳು, ಪುಸ್ತಕಗಳು ಈ ಭವನದ ಮೂಲಕ ಕೃಷಿಕರಿಗೆ ಸುಲಭವಾಗಿ ಲಭಿಸುವಂತಾಗಬೇಕು.
ವಿವಿಧ ವಿಚಾರಗಳ ಬಗೆಗಿನ ಗೋಷ್ಠಿ ಗಳು ಇಂದು ಕಾಲೇಜು ಮತ್ತು ವಿಶ್ವವಿದ್ಯಾ ನಿಲಯಗಳಿಗಷ್ಟೇ ಸೀಮಿತವಾಗಿದೆ. ಸರಕಾರವೂ ಅದಕ್ಕೆ ಅಗತ್ಯ ಆರ್ಥಿಕ ಸಹಾಯ ನೀಡುತ್ತದೆ. ಗ್ರಾಮೀಣ ಮಟ್ಟದಲ್ಲೂ ಕೃಷಿ ಭವನಗಳು ಇಂಥ ಚಟುವಟಿಕೆಗಳಿಗೆ ನೆಲೆ ಕಲ್ಪಿಸಬೇಕು. ಪ್ರತೀ ವಾರ ಅಥವಾ ತಿಂಗಳಿಗೊಮ್ಮೆ ವಿವಿಧ ಕ್ಷೇತ್ರದ ತಜ್ಞರಿಂದ ಮಾಹಿತಿ, ಉಪನ್ಯಾಸ, ಕಾರ್ಯಾಗಾರ, ಸಂಕಿರಣ ಮೊದಲಾದ ಚಟುವಟಿಕೆಗಳು ನಡೆಯಬೇಕು. ಕೃಷಿಕರನ್ನು ಒಗ್ಗೂಡಿಸಿ ವರ್ಷಕ್ಕೊಮ್ಮೆಯಾದರೂ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಕೃಷಿ ಭವನಗಳು ಆಯೋಜಿಸಬೇಕು. ಇದರಿಂದ ಕೃಷಿ ಕಾಯಿದೆಗಳಂಥ ಸಂಕೀರ್ಣ ವಿಚಾರಗಳ ಬಗೆಗೆ ರೈತರಿಗೆ ಸೂಕ್ತ ಮಾಹಿತಿ ದೊರೆಯುತ್ತದೆ. ಗ್ರಾಮೀಣ ಭಾಗದ ಕೃಷಿಕರಿಗೂ ಇದರಿಂದ ಒಂದು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪರಿಸರ ನಿರ್ಮಾಣವಾಗುತ್ತದೆ.
ಕೃಷಿಕರಿಗೆ ಸರಕಾರವು ವಿವಿಧ ಸವಲತ್ತುಗಳನ್ನು ನೀಡುತ್ತಿದೆ. ಆದರೆ ಕೆಲವೇ ಕೃಷಿಕರು ಇದರ ಸದುಪಯೋಗ ಪಡೆಯುತ್ತಾರೆ. ಅನೇಕರಿಗೆ ಈ ಬಗ್ಗೆ ಅರಿವೇ ಇಲ್ಲ. ಇದ್ದರೂ ಆ ಸವಲತ್ತುಗಳನ್ನು ಪಡೆಯುವುದು ಅವರ ಪಾಲಿಗೆ ಗಗನ ಕುಸುಮ. ಕೃಷಿಕರಿಗೆ ನೀಡಲಾಗುತ್ತಿರುವ ಈ ಸವಲತ್ತುಗಳನ್ನು ಅರ್ಹರೆಲ್ಲರೂ ಪಡೆಯು ವಂತೆ ಸರಳ ವಿಧಾನವನ್ನು ಸರಕಾರವು ರೂಪಿ ಸಬೇಕು. ಕೃಷಿ ಭವನದ ಸಭೆಗಳಲ್ಲಿ ಈ ಬಗ್ಗೆ ಚರ್ಚೆಯಾಗಬೇಕು. ಅಲ್ಲಿಂದಲೇ ಅರ್ಜಿ ಸ್ವೀಕರಿಸುವ ಹಾಗೂ ಅದರ ಪ್ರಯೋಜನವನ್ನು ರೈತರಿಗೆ ತಲುಪಿಸುವ ಕೆಲಸವಾಗಬೇಕು.
ಈ ಯೋಚನೆಗಳು ಎಲ್ಲರಲ್ಲೂ ಹಲವು ವರ್ಷಗಳಿಂದ ಇರಬಹುದು. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?. ಕೃಷಿಕರ ಬಗ್ಗೆ ಈ ತೆರನಾದ ಕಾಳಜಿಗೆ ಯಾರು ಸ್ಪಂದಿಸಿಯಾರು? ಬರಿದೆ ಯುವಕರನ್ನು ದೂರಿ ಪ್ರಯೋಜನವಿಲ್ಲ. ನಮ್ಮನ್ನೂ ನಾವು ಆತ್ಮವಿಮರ್ಶೆ ಮಾಡಿ ಕೊಳ್ಳಬೇಕು. ಸರಕಾರ ಹಾಗೂ ಸಮಾಜ ಕೈಜೋಡಿಸಿದಾಗ ಮಾತ್ರ ನಿಜವಾದ ಅರ್ಥದಲ್ಲಿ ಸುಧಾರಣೆ ಸಾಧ್ಯವಲ್ಲವೇ?.
ಡಾ| ಶ್ರೀಕಾಂತ್ ಸಿದ್ದಾಪುರ