Advertisement

ಕನ್ನಡಕ್ಕೆ 12 ರಾಷ್ಟ್ರಪ್ರಶಸ್ತಿಗಳ ಗರಿ!

08:32 AM Aug 12, 2019 | Sriram |

ನವದೆಹಲಿ: ಸ್ಯಾಂಡಲ್‌ವುಡ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾಗಳು 12 ರಾಷ್ಟ್ರೀಯ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿವೆ.

Advertisement

ದೆಹಲಿಯಲ್ಲಿ 2018ನೇ ಸಾಲಿನ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಪ್ರಾದೇಶಿಕ ವಿಭಾಗದಲ್ಲಿ ನಾತಿಚರಾಮಿ ಸಿನಿಮಾ ಅತ್ಯುತ್ತಮ ಪ್ರಶಸ್ತಿ ಪಡೆದಿದೆ. ಉತ್ತಮ ಆ್ಯಕ್ಷನ್‌ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್ ಪಾತ್ರವಾಗಿದೆ. ನಾತಿಚರಾಮಿ ಸಿನಿಮಾ ಹಲವು ವಿಭಾಗಗಳಲ್ಲಿ ಪುರಸ್ಕಾರ ಪಡೆದಿದ್ದು, ಇಡೀ ಪ್ರಶಸ್ತಿ ಪಟ್ಟಿಯಲ್ಲೇ ಗಮನ ಸೆಳೆದಿದೆ.

ನಾತಿಚರಾಮಿ ಸಿನಿಮಾದ ‘ಮಾಯಾವಿ ಮನವೆ’ ಹಾಡಿನ ರಚನೆಗೆ ಸಿನಿಮಾ ನಿರ್ದೇಶಕರೂ ಆಗಿರುವ ಮಂಸೋರೆ ಹಾಗೂ ಇದೇ ಹಾಡಿನ ಗಾಯನಕ್ಕೆ ಬಿಂದುಮಾಲಿನಿ ಪ್ರಶಸ್ತಿ ಗಳಿಸಿದ್ದಾರೆ. ನಾತಿಚರಾಮಿ ಸಿನಿಮಾದ ಸಂಕಲನ ವಿಭಾಗದ ಜೊತೆಗೆ ನಾಯಕಿ ನಟಿ ಶ್ರುತಿ ಹರಿಹರನ್‌ಗೆ ಜ್ಯೂರಿ ಕಮಿಟಿಯ ವಿಶೇಷ ಉಲ್ಲೇಖಾರ್ಹ ಪ್ರಶಸ್ತಿ ಲಭಿಸಿದೆ. ನಾತಿಚರಾಮಿ ಸಿನಿಮಾ ಒಂದೇ ಐದು ಪುರಸ್ಕಾರಗಳನ್ನು ಬಾಚಿಕೊಂಡಿದೆ.

ಉಳಿದಂತೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ಗೆ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಲಭಿಸಿದೆ. ಕೆಜಿಎಫ್ ಸಿನಿಮಾ ಎರಡು ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ. ಆಕ್ಷನ್‌ ಸಿನಿಮಾ ವಿಭಾಗದಲ್ಲಿ ಪುರಸ್ಕರಿಸಲ್ಪಟ್ಟಿರುವುದರ ಜೊತೆಗೆ, ಸ್ಪೆಷಲ್ ಎಫೆಕ್ಟ್ಗಾಗಿ ತೆಲುಗಿನ ಅವೆ ಚಿತ್ರದ ಜೊತೆಗೆ ಪ್ರಶಸ್ತಿ ಹಂಚಿಕೊಂಡಿದೆ. ಉತ್ತಮ ಶೈಕ್ಷಣಿಕ ಚಿತ್ರವಾಗಿ ಸರಳ ವಿರಳ ಪ್ರಶಸ್ತಿ ಪಡೆದಿದೆ.

ವಿಕ್ಕಿ ಕೌಶಲ್, ಆಯುಷ್ಮಾನ್‌ ಖುರಾನ ಉತ್ತಮ ನಟ

ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಹಲವು ಪುರಸ್ಕಾರಗಳನ್ನು ಒಂದಕ್ಕಿಂತ ಹೆಚ್ಚು ಜನರಿಗೆ ನೀಡಲಾಗಿದೆ. ಸ್ಪರ್ಧೆ ಅತ್ಯಂತ ತುರುಸಿನದಾದ್ದರಿಂದ ನಿರ್ಧಾರ ಕೈಗೊಳ್ಳುವುದು ಸವಾಲಾಗಿತ್ತು ಎಂದು ತೀರ್ಪುಗಾರರು ಹೇಳಿದ್ದಾರೆ. ಉತ್ತಮ ನಟ ಪುರಸ್ಕಾರವನ್ನು ‘ಉರಿ- ದಿ ಸರ್ಜಿಕಲ್ ಸ್ಟ್ರೈಕ್‌’ ಸಿನಿಮಾದ ನಾಯಕ ನಟ ವಿಕ್ಕಿ ಕೌಶಲ್ ಪಡೆದುಕೊಂಡರೆ, ಅಂಧಾಧುನ್‌ ಸಿನಿಮಾಗೆ ಆಯುಷ್ಮಾನ್‌ ಖುರಾನ ಪ್ರಶಸ್ತಿ ಪಡೆದಿದ್ದಾರೆ. ಮಹಾನಟಿ ಸಿನಿಮಾದಲ್ಲಿ ನಟಿಸಿದ ಕೀರ್ತಿ ಸುರೇಶ್‌ ಉತ್ತಮ ನಟಿಯಾಗಿದ್ದಾರೆ. ಇನ್ನು ಉತ್ತಮ ಸಿನಿಮಾ ಪ್ರಶಸ್ತಿಯನ್ನು ಗುಜರಾತಿ ಸಿನಿಮಾ ಹೆಲ್ಲಾರೋ ಪಡೆದಿದೆ.
ಈ ಪ್ರಶಸ್ತಿಯನ್ನು ಕನ್ನಡ ಸರ್ಕಾರಿ ಶಾಲೆ ಮಕ್ಕಳಿಗೆ ಅರ್ಪಿಸುತ್ತೇನೆ. ಪ್ರಶಸ್ತಿಯ ಕನಸು ಕಂಡಿರಲಿಲ್ಲ. ಆಸ್ಕರ್‌ ಗಿಂತಲೂ ಈ ಪ್ರಶಸ್ತಿ ಶ್ರೇಷ್ಠ.
– ರಿಷಭ್‌ಶೆಟ್ಟಿ, ನಿರ್ದೇಶಕ, ಸ.ಹಿ.ಪ್ರಾ.ಶಾಲೆ ಕಾಸರಗೋಡು

ನನಗೆ ಈ ರಾಷ್ಟ್ರಪ್ರಶಸ್ತಿ ಹೊಸದಲ್ಲ. ಆದರೆ, ‘ನಾತಿಚರಾಮಿ’ಗೆ ಐದು ಪ್ರಶಸ್ತಿಗಳು ಲಭಿಸಿರುವುದು ಹೊಸದು. ನಿರೀಕ್ಷಿಸಿರಲಿಲ್ಲ.
-ಮಂಸೋರೆ, ನಿರ್ದೇಶಕ, ‘ನಾತಿಚರಾಮಿ’.

ಪ್ರಶಸ್ತಿಗಳು
1. ಅತ್ಯುತ್ತಮ ಸಾಹಸ ಸಿನಿಮಾ:ಕೆಜಿಎಫ್
2. ರಾಷ್ಟ್ರೀಯ ಏಕತೆ ವಿಭಾಗ:ಒಂದಲ್ಲಾ ಎರಡಲ್ಲಾ
3. ಅತ್ಯುತ್ತಮ ಬಾಲ ಕಲಾವಿದ:ಮಾಸ್ಟರ್‌ ರೋಹಿತ್‌(ಒಂದಲ್ಲಾ ಎರಡಲ್ಲಾ)
4. ಅತ್ಯುತ್ತಮ ಮಕ್ಕಳ ಚಿತ್ರ:ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ ಕಾಸರಗೋಡು
5. ಅತ್ಯುತ್ತಮ ಪ್ರಾದೇಶಿಕ ಚಿತ್ರ:ನಾತಿಚರಾಮಿ
6. ಅತ್ಯುತ್ತಮ ಗಾಯಕಿ:ಬಿಂದುಮಾಲಿನಿ (ನಾತಿಚರಾಮಿ)
7. ಅತ್ಯುತ್ತಮ ಸಾಹಿತ್ಯ: ನಾತಿಚರಾಮಿ
8. ಅತ್ಯುತ್ತಮ ಸಂಕಲನ: ನಾತಿಚರಾಮಿ
9. ವಿಶೇಷ ಉಲ್ಲೇಖಾರ್ಹ ಪ್ರಶಸ್ತಿ:ಶ್ರುತಿ ಹರಿಹರನ್‌ (ನಾತಿಚರಾಮಿ)
10. ಅತ್ಯುತ್ತಮ ವಿಎಫ್ಎಕ್ಸ್‌:ಕೆಜಿಎಫ್
11. ರಾಷ್ಟ್ರೀಯ ಸಾಧಕರು/ರಾಷ್ಟ್ರೀಯಆಕೈìವ್ಸ್‌ ಗೌರವ: ಮೂಕಜ್ಜಿ
12. ಉತ್ತಮ ಶೈಕ್ಷಣಿಕ ಸಿನಿಮಾ ಸರಳ ವಿರಳ
Advertisement
Advertisement

Udayavani is now on Telegram. Click here to join our channel and stay updated with the latest news.

Next