Advertisement
ನಗರ, ಪಟ್ಟಣ ಸೇರಿದಂತೆ ಗ್ರಾಮಗಳ ಪ್ರದೇಶದಲ್ಲಿ ಫಾಗಿಂಗ್ ಮೂಲಕ ಸೊಳ್ಳೆ ನಿಯಂತ್ರಣ ಮಾಡಬೇಕೆನ್ನುವ ಉದ್ದೇಶವನ್ನು ಹೊಂದಿರಲಾಗುತ್ತದೆ. ಅದರಂತೆ ನೆರೆ ಪ್ರದೇಶದ ಬಹುತೇಕ ಕಡೆ ಫಾಗಿಂಗ್ ಮಾಡುವ ಮೂಲಕ ಸೊಳ್ಳೆ ನಿಯಂತ್ರಣ ನಡೆಸಲಾಗುತ್ತಿದೆ. ಪ್ರತಿನಿತ್ಯ ಎರಡು ಬಾರಿ ಸಾಂಕ್ರಾಮಿಕ ರೋಗ ತಡೆಗೆ ಫಾಗಿಂಗ್ ಮಾಡಲಾಗುತ್ತಿದೆ. ಆದರೆ ಅವೈಜ್ಞಾನಿಕವಾಗಿ ಫಾಗಿಂಗ್ ಕಾರ್ಯ ನಡೆದರೆ ಸಾರ್ವಜನಿಕರಿಗೆ ತೊಂದರೆ ಕಟ್ಟಿಟ್ಟ ಬುತ್ತಿಯಾಗಲಿದೆ.
Related Articles
Advertisement
ಗಬ್ಬೆದ್ದು ನಾರುವ ಪ್ರವಾಹ ಪೀಡಿತ ಪ್ರದೇಶ: ಕಳೆದೆರಡು ದಿನಗಳಿಂದ ಪ್ರವಾಹ ಕಡಿಮೆಯಾಗಿ ಮೊದಲಿನ ಸ್ಥಿತಿಗೆ ಬರಲು ಹೆಜ್ಜೆ ಹಾಕುತ್ತಿದೆ. ಬಹುತೇಕ ಜಲಾವೃತವಾದ ಮನೆಗಳಲ್ಲಿ ನೀರು ಸರಿದಿದೆ. ಆದರೆ, ಹಲವಾರು ದಿನಗಳಿಂದ ನಿಂತ ನೀರಿನಲ್ಲಿ ಹಲವಾರು ಕೆಟ್ಟ ಅಂಶಗಳನ್ನು ಬಿಟ್ಟು ಹೋಗಿರುತ್ತದೆ. ಗ್ರಾಮದ ಕೆಲ ಪ್ರದೇಶ ಜಲಾವೃತದಿಂದ ಇಳಿಮುಖವಾಗಿ ನೀರು ಸರಿದು ಆ ಪ್ರದೇಶ ಗಬ್ಬೆದ್ದು ನಾರುತ್ತಿವೆ.
ವಾಸನೆ ಇಡಿ ಊರನ್ನೆ ಆವರಿಸಿದ್ದು ಜನತೆ ಅನಾರೋಗ್ಯಕ್ಕೆ ತುತ್ತಾಗುವ ಮೊದಲೇ ಸ್ಥಳೀಯ ಸಂಸ್ಥೆಗಳು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಲು ಸೂಕ್ತ ನಿರ್ದೆಶನ ನೀಡಬೇಕು. ನೆರೆ ಪೀಡಿತ ಕೆಲ ಗ್ರಾಮಗಳಲ್ಲಿ ಮೊದಲಿನ ಪ್ರದೇಶ ಬಿಟ್ಟು ಬೇರೆಡೆ ಸ್ಥಳಾವಕಾಶ ನೀಡಿ ಎನ್ನುವ ಬೇಡಿಕೆಯೇ ಹೆಚ್ಚಾಗಿದೆ. ಹಿರಿಯ ಅಧಿಕಾರಿಗಳೆಲ್ಲ ಸುತ್ತಲಿನ ಗ್ರಾಮಗಳಲ್ಲಿ ಸೂಕ್ತ ಜಾಗೆಗಾಗಿ ಹುಡುಕಾಟ ನಡೆಸಿದ್ದು. ಜಾಗೆ ನೋಡಿ ಗುರುತಿಸುವವರೆಗೂ ತಾತ್ಕಾಲಿಕವಾಗಿ ಇರುವ ವ್ಯವಸ್ಥೆಯಲ್ಲಿಯೇ (ಪರಿಹಾರ ಕೇಂದ್ರದಲ್ಲಿ) ವಾಸಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಜಲಾವೃತವಾದ ಪ್ರದೇಶದಲ್ಲಿ ನೀರು ಇಳಿಮುಖವಾದರೂ ಜನತೆ ವಾಸವಿರುವುದಿಲ್ಲ ಎನ್ನುವ ನೆಪವಿಟ್ಟು ಸ್ವಚ್ಛತೆಗೆ ಮುಂದಾಗದಿದ್ದಲ್ಲಿ ಆಮಲಿನ ಪ್ರದೇಶ ಇಡಿ ಊರಿನ ಜನರ ನೆಮ್ಮದಿ ಕಸಿಯಲು ಸಾಧ್ಯವಾಗುತ್ತದೆ. ಆ ಪ್ರದೇಶದಲ್ಲಿ ಜನ ವಾಸಿಸದಿದ್ದರೂ ಸ್ವಚ್ಛತೆ ಕಾರ್ಯ ಮಾತ್ರ ಅಚ್ಚುಕಟ್ಟಾಗಿ ನಡೆಯಬೇಕು ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.
ಫಾಗಿಂಗ್‌ಗೆ ಹುಳು ಸಾಯುತ್ತವೆಯೇ?: ಅಷ್ಟಕ್ಕೂ ಈ ಫಾಗಿಂಗ್ ಕಾರ್ಯ ನಡೆಸುವುದರಿಂದ ಹುಳು ಸಾಯುತ್ತವೆ ಎನ್ನುವುದೇ ಹೆಚ್ಚು. ಆದರೆ, ಬಹುತೇಕ ಹೆಚ್ಚು ಶಕ್ತಿಯುವಾಗಿರುವ ಹುಳು ಫಾಗಿಂಗ್‌ನಿಂದ ತಪ್ಪಿಸಿಕೊಳ್ಳಲು ಆ ಪ್ರದೇಶ ಬಿಟ್ಟು ಹೋಗುತ್ತವೆ. ಇನ್ನೂ ವೃದ್ಧ ಹುಳುಗಳ ಶಕ್ತಿ ಕುಂದಿದ ಪರಿಣಾಮ ಫಾಗಿಂಗ್‌ಗೆ ಬಲಿಯಾಗುತ್ತವೆ. ಒಟ್ಟಾರೆ ಫಾಗಿಂಗ್ ಕಾರ್ಯ ಮಾಡುವ ಸ್ಥಳೀಯ ಸಂಸ್ಥೆಗಳು ಅದರಲ್ಲಿ ಬಿಡುವ ರಾಸಾಯನ ಅಂಶದ ಕುರಿತು ಹೆಚ್ಚಿನ ನಿಗಾ ವಹಿಸುವುದು ಅವಶ್ಯಕವಾಗಿದೆ ಎನ್ನುತ್ತಾರೆ ನಾಗರಿಕರು.
ನಿಡಗುಂದಿ: ಪ್ರವಾಹ ಪೀಡಿತ ಹೊಳೆ ಮಸೂತಿಯಲ್ಲಿ ಗ್ರಾಪಂದಿಂದ ಫಾಗಿಂಗ್ ಮಾಡುತ್ತಿರುವುದು. ಹೊಳೆ ಮಸೂತಿಯಲ್ಲಿ ಪ್ರವಾಹ ಇಳಿಕೆಯಾದ ಪ್ರದೇಶದಲ್ಲಿ ನಡೆದಿರುವ ಸ್ವಚ್ಛತಾ ಕಾರ್ಯ.
•ವಿಶೇಷ ವರದಿ