ಮೈಸೂರು: ಸೋಲಿನ ಭೀತಿಯಿಂದ ಕಾಂಗ್ರೆಸ್ ಆಡಳಿತ ದುರುಪಯೋಗ ಪಡಿಸಿ ಕೊಳ್ಳುತ್ತಿರು ವುದಲ್ಲದೆ, ಗೂಂಡಾಗಿರಿ ಮಾಡುತ್ತಿರುವುದರಿಂದ ನಿಷ್ಪ$ಕ್ಷಪಾತ ಚುನಾವಣೆ ನಡೆಸಲು ಎರಡೂ ಕ್ಷೇತ್ರಗಳಿಗೆ ಅರೆ ಸೇನಾಪಡೆ ಕಳುಹಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿರು ವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರಿಗೆ ಎರಡೂ ಕ್ಷೇತ್ರಗಳಲ್ಲಿ ಸೋಲಿನ ಭೀತಿ ಶುರು ವಾಗಿರು ವುದರಿಂದ ಹತಾಶರಾಗಿ ಕಾರ್ಯಕರ್ತರ ಮೂಲಕ ಬಿಜೆಪಿ ಬೆಂಬಲಿಗರನ್ನು ಗುರಿ ಯಾಗಿಸಿ ಕೊಂಡು ಗೂಂಡಾಗಿರಿ ಮಾಡಿಸುತ್ತಾ, ಬಿಜೆಪಿ ಕಾರ್ಯ ಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
ಎರಡೂ ಕ್ಷೇತ್ರಗಳಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯುವುದು ಅನುಮಾನವಾಗಿದೆ. ಈ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೂ ತಂದಿ ದ್ದೇವೆ. ಎರಡೂ ಕ್ಷೇತ್ರಗಳಿಗೆ ಅರೆ ಸೇನಾಪಡೆ ನಿಯೋ ಜನೆ ಮಾಡುವಂತೆ ಕೋರಿದ್ದೇವೆ ಎಂದರು.
ಕ್ಷಮೆಯಾಚಿಸಲಿ: ಎಂ. ಮಹದೇವು ಬದುಕಿದ್ದಾಗ ಅವರ ಕುತ್ತಿಗೆಪಟ್ಟಿ ಹಿಡಿದು ಎಳೆ ದಾಡಿ ಅವಮಾನ ಮಾಡಿದ್ದ ಸಿದ್ದರಾಮಯ್ಯ, ಉಪ ಚುನಾವಣೆಯಲ್ಲಿ ಮಹದೇವು ಕುಟುಂಬದ ಬೆಂಬಲಪಡೆಯಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ.
ಮೂರ್ಖತನ: ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯದ ಸಚಿವರು ನೂರಾರು ಕೋಟಿ ರೂ, ಕಪ್ಪ ಕಾಣಿಕೆ ನೀಡಿರುವುದಾಗಿ ತಾವು ಮಾಡಿರುವ ಆರೋಪ ನೂರಕ್ಕೆ ನೂರರಷ್ಟು ಸತ್ಯ. ಗೋವಿಂದರಾಜು ಮನೆಯಲ್ಲಿ ಸಿಕ್ಕಿರುವ ಡೈರಿ ನಕಲಿ ಎಂದು ವಿಧಿವಿಜಾnನ ಪ್ರಯೋಗಾಲಯ ವರದಿ ನೀಡಿದೆ ಎನ್ನುವುದು ಮೂರ್ಖತನದ ಪರಮಾವಧಿ.
ಈ ವಿಚಾರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ತಲೆ ಬುಡವಿಲ್ಲದ ರೀತಿ ಮಾತನಾಡು ತ್ತಿದ್ದಾರೆ. ಸ್ಟೀಲ್‌ಬಿಡ್ಜ್ ಕಾಮಗಾರಿ ಗುತ್ತಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯರ ಕುಟುಂಬ ಸದಸ್ಯರಿಗೆ 65 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿರುವುದು ಗೋವಿಂದರಾಜು ಡೈರಿಯಲ್ಲಿ ಉಲ್ಲೇಖವಾಗಿದೆ. ಇದರಿಂದ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ. ಅವರಿಗೆ ತಾಕತ್ತಿದ್ದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಸವಾಲು ಹಾಕಿದರು.