Advertisement

ಅಪ್ಪ ಎಎಸ್ಐ, ಮಗ ಲ್ಯಾಪ್ ಟಾಪ್ ಕಳ್ಳ! ಮೂವರು ಪೊಲೀಸರ ಬಲೆಗೆ

06:03 PM Apr 26, 2017 | Sharanya Alva |

ಬೆಂಗಳೂರು: ಲ್ಯಾಪ್ ಟಾಪ್ ಗಳನ್ನು ಕದ್ದು ಒಎಲ್ಎಕ್ಸ್ ನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಎಚ್ ಎಎಲ್ ಪೊಲೀಸರು ಬಂಧಿಸಿದ್ದು, ಇದರಲ್ಲಿ ಪ್ರಮುಖವಾದ ಅಂಶವೆನೆಂದರೆ ಬಂಧಿತರಾದವರಲ್ಲಿ ಎಎಸ್ಐ ಮಗನೊಬ್ಬ ಸೇರಿದ್ದಾನೆ!

Advertisement

ಎಚ್ಎಎಲ್ ಠಾಣಾ ವ್ಯಾಪ್ತಿಯ ಪಿಜಿಗಳಲ್ಲಿ ಲ್ಯಾಪ್ ಟಾಪ್ ಮತ್ತು ಮೊಬೈಲ್ ಕಳ್ಳತನವಾಗುತ್ತಿರುವ ಬಗ್ಗೆ ದೂರು ಬಂದಿದ್ದವು. ಸುಮಾರು 20ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು.

ಈ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದ ತಂಡ ಸುಮಾರು ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಲ್ಯಾಪ್ ಟಾಪ್ ಕಳ್ಳತನ ಮಾಡುತ್ತಿದ್ದವ ಎಎಸ್ಐ ಮಗ ಎಂಬುದು ಪತ್ತೆಯಾಗಿತ್ತು!

ಲ್ಯಾಪ್ ಟಾಪ್ ಕಳ್ಳತನ ಆರೋಪದಡಿಯಲ್ಲಿ ಎಎಸ್ಐ ಪುತ್ರ ಚೇತನ್, ಶರವಣ ಹಾಗೂ ಮುಕ್ತಿಯಾರ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 50 ಲ್ಯಾಪ್ ಟಾಪ್, ಮೊಬೈಲ್ ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next