Advertisement

ರೈತ ಸಾಲಗಾರನಲ್ಲ , ಸರ್ಕಾರವೇ ಬಾಕಿದಾರ: ಪಾಟೀಲ

05:12 PM Jul 04, 2018 | |

ಕಲಘಟಗಿ: ರೈತ ಸಾಲಗಾರನಲ್ಲ, ಸರ್ಕಾರವೇ ಬಾಕಿದಾರವಾಗಿವೆ. ಪ್ರಸಕ್ತ ಬಜೆಟ್‌ನಲ್ಲಿ ರೈತ ಕುಲವನ್ನು ಋಣಮುಕ್ತಗೊಳಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೆಜ್ಜೆ ಇಡಬೇಕೆಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಬಿ.ಸಿ. ಪಾಟೀಲ ಆಗ್ರಹಿಸಿದರು. ಇಲ್ಲಿನ ಎಪಿಎಂಸಿ ಆವರಣದಲ್ಲಿ ತಾಲೂಕಿನ ರೈತ ಪ್ರಮುಖರ ಸಭೆ ನಡೆಸಿ, ಬಳಿಕ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಕೆಎಎಸ್‌ಪ್ರೊಬೆಶನರಿ ತಹಶೀಲ್ದಾರ್‌ ಯಲ್ಲಪ್ಪ ಗೋಣೆಣ್ಣವರ ಅವರಿಗೆ ಸಲ್ಲಿಸಿ ಅವರು ಮಾತನಾಡಿದರು.

Advertisement

1989ರಲ್ಲಿ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಜರುಗಿದ್ದ ಬೃಹತ್‌ ರೈತ ಸಮಾವೇಶದಲ್ಲಿ ಪ್ರೊ| ನಂಜುಂಡಸ್ವಾಮಿಯವರು ರೈತರ ಒಕ್ಕೊರಲಿನ ಕೂಗಾಗಿ ‘ರೈತ ಸಾಲಗಾರನಲ್ಲ, ಸರ್ಕಾರವೇ ಬಾಕಿದಾರ’ ಎಂಬ ಘೋಷಣೆ ಕೂಗಿದ್ದಾರೆ. ಆದರೆ ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳು ಕಣ್ಮುಚ್ಚಿ ಕುಳಿತಿವೆ. ಈಗಲಾದರೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಸಂಪೂರ್ಣ ಸಾಲಮನ್ನಾ ಮಾಡುವುದರೊಂದಿಗೆ ತಾವು ರೈತಪರ ಎಂಬುದನ್ನು ನಿರೂಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಲಘಟಗಿಗೆ ಸಮಗ್ರ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಕಾಳಿ, ಬೇಡ್ತಿ ಮತ್ತು ಶಾಲ್ಮಲಾ ನದಿಗಳ ನೀರನ್ನು ತಾಲೂಕಿಗೆ ಹರಿಸುವ ಯೋಜನೆಗಳಿಗೆ ಮಂಜೂರಾತಿ ನೀಡಬೇಕು. ನೀರಸಾಗರ ಕೆರೆಯ ಒಡಲನ್ನು ಬರಿದಾಗಿಸಲಾಗಿದೆ. ತಕ್ಷಣ ಆ ಕೆರೆಯ ಹೂಳು ತೆಗೆಸಿ ಕೆರೆ ಮರುಭರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಎಪಿಎಂಸಿ ಅಧ್ಯಕ್ಷ ಮುತ್ತಣ್ಣ ಅಂಗಡಿ, ನಿಂಗಪ್ಪ ದೀವಟಗಿ, ಶಂಕ್ರಪ್ಪ ತಿಪ್ಪಣ್ಣವರ, ಶಂಕ್ರಪ್ಪ ಮಡಿವಾಳರ, ಮಲ್ಲಯ್ಯ ಕುಂದಗೋಳ, ಚನ್ನಯ್ಯ ಹಂಚಿನಮನಿ, ಸಹದೇವಪ್ಪ ಕೆಲಗೇರಿ, ದ್ಯಾಮಣ್ಣ ನಿಗದಿ, ಅಜ್ಜಯ್ಯ ಹಿರೇಮಠ, ಜ್ಯೋತಿಬಾ ಹುಲಕೊಪ್ಪ, ನಾಗನಗೌಡಾ ಪಾಟೀಲ, ತಮ್ಮಾಸಾ ಹುಲಕೊಪ್ಪ, ನಿಂಗಪ್ಪ ಬಿಸರಳ್ಳಿ, ರಾಚಯ್ಯ ಚಿಕ್ಕಮಠ, ನಾರಾಯಣ ಪಾಟೀಲ, ಶಿವಪ್ಪ ದಾನ್ವೇನವರ, ವಿ.ಎಸ್‌. ಶಿವನಗೌಡ್ರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next