Advertisement
ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮದ ನೇರ ಪ್ರಸಾರ ದೇಶಾದ್ಯಂತ ನಡೆಯಿತು. ಇದರ ಜತೆಗೆ ಸಂವಾದವನ್ನೂ ಏರ್ಪಡಿಸಿದ್ದು, ರಾಜ್ಯದ ಇಬ್ಬರು ರೈತರಿಗೆ ಮಾತ್ರ ಸಂವಾದದಲ್ಲಿ ಮಾತನಾಡುವ ಅವಕಾಶ ಲಭಿಸಿದೆ. ಒಬ್ಬರು ಜನಾರ್ದನ ಭಟ್ಟರಾದರೆ ಇನ್ನೊಬ್ಬರು ತುಮಕೂರಿನ ರೈತ. ಪುತ್ತೂರಿನ ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಜಿಲ್ಲಾ ಮಟ್ಟದ ಸಂವಾದ ಹಾಗೂ ವೆಬ್‌ಕಾಸ್ಟ್ ಏರ್ಪಡಿಸಲಾಗಿತ್ತು.
Related Articles
ಇದೇವೇಳೆ ರವಿವಾರ ತನ್ನ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಓಂಕಾರ್ ಶೆಟ್ಟಿ ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ದೇಶಕ್ಕಾಗಿ ಪ್ರಾಣವನ್ನರ್ಪಿಸಿದ ಯೋಧರಿಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣವಾಗಿದ್ದು, ಫೆ. 25ರಂದು ದಿಲ್ಲಿಯಲ್ಲಿ ಸೇನೆ, ದೇಶಕ್ಕೆ ಸಮರ್ಪಣೆಯಾಗಲಿದೆ ಎಂದು ಮನ್ ಕಿ ಬಾತ್‌ನಲ್ಲಿ ಹೇಳಿದ ಪ್ರಧಾನಿ ಮೋದಿ, “ನರೇಂದ್ರ ಮೋದಿ ಆ್ಯಪ್‌ನಲ್ಲಿ ನ್ಯಾಶನಲ್ ವಾರ್ ಮೆಮೋರಿಯಲ್ ನಿರ್ಮಾಣದ ಬಗ್ಗೆ ಕರ್ನಾಟಕ, ಉಡುಪಿಯ ಶ್ರೀ ಓಂಕಾರ್ ಶೆಟ್ಟಿ ಜೀಯವರು ಸಂತಸ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ್ದಾರೆ.
Advertisement