Advertisement
ಕುಂಬಳೆ ಬೆಡಿಗೆ ತಡೆ
Related Articles
Advertisement
ಇದು ಕ್ಷೇತ್ರ ಮತ್ತು ಭಕ್ತರ ಭಾವನೆಗಳಿಗೆ ವಿರುದ್ಧವಾದ ನಿಲುವು ಎಂಬಂತಾಗಿದೆ.ಉತ್ಸವದ ಆಮಂತ್ರಣದಲ್ಲಿ ರಾತ್ರಿ 9.45ರಿಂದ ಬೆಡಿ ಪ್ರದರ್ಶನ ಎಂಬುದಾಗಿದ್ದರೂ ಆ ಮುನ್ನವೇ ಬೆಡಿ ಸಿಡಿಸಲಾಗಿತ್ತು. ಕ್ಷೇತ್ರದ ವತಿಯಿಂದ ಉನ್ನತ ಅಧಿಕಾರಿಗಳ ಆದೇಶವನ್ನು ಪಾಲಿಸಿದ ಕಾರಣ ಕೆಲವು ಭಕ್ತರು ಬೆಡಿ ವೀಕ್ಷಿಸಲು ಆಗಮಿಸುವಷ್ಟರಲ್ಲಿ ಬೆಡಿ ಸಿಡಿದಾಗಿತ್ತು.
ಅಧಿಕಾರಿಗಳ ಬಿಗಿ ನಿಲುವು
ಕುಂಬಳೆ ಪೊಲೀಸ್ ಠಾಣೆಯ ಮುಂದೆಯೇ ಸುಡುಮದ್ದು ಪ್ರದರ್ಶನ ನಡೆಯುವುದು ಕಾನೂನು ಪಾಲಕರಿಗೂ ನುಂಗಲಾರದ ತುತ್ತಾಗಿದೆ.ಪ್ರಖರ ಸ್ಪೋಟದ ಸುಡುಮದ್ದು ಪ್ರದರ್ಶನದಲ್ಲಿ ಏನಾ ದರೂ ಆನಾಹುತವಾದಲ್ಲಿ ಕಾನೂನು ಪಾಲಕರು ಉತ್ತರಿಸಬೇಕೆಂಬ ಭಯದಿಂದ ಅಧಿಕಾರಿಗಳ ಒಪ್ಪಿಗೆಗೆ ತೊಡಾಕಾಗಿದೆ.
ಬೆಡಿ ಪ್ರದರ್ಶನಕ್ಕೆ ತಡೆ
ಜಿಲ್ಲಾ ಎಸ್.ಪಿ ಮತ್ತು ಎ.ಎಸ್.ಪಿ ಯವರು ಖುದ್ದಾಗಿ ಸುಡುಮದ್ದು ಪ್ರದರ್ಶನದ ಚಲನವಲನವನ್ನು ಬೆಳಗ್ಗಿನಿಂದಲೇ ಗಮನಿದರು. ಶಿವಕಾಶಿ ಸಿಡಿಮದ್ದು ಪ್ರದರ್ಶನದಿಂದ ಪರಿಸರ ಮಾಲಿನ್ಯವಾಗುವುದು. ಆದುದರಿಂದ ಕೇವಲ ಚೈನೀಸ್ ಉತ್ಪನ್ನಗಳನ್ನು ಮಾತ್ರ ಸಿಡಿಸಬಹುದು ಎಂಬುದಾಗಿ ತಾಕೀತು ಹಾಕಿದರು. ಉಳಿದ ಭಾರೀ ಸದ್ದಿನ ಗುಂಡುಗಳನ್ನು ಸಿಡಿಸುವುದಕ್ಕೆ ತಡೆ ಒಡ್ಡಲಾಯಿತು. ಸಿಡಿಸಲು ತಂದಿದ್ದ ಭಾರಿ ಸ್ಪೋಟದ ಔಟ್ ಮತ್ತು ಗುಂಡುಗಳನ್ನು ಪೊಲೀಸರು ಸಿಡಿಸಲು ಬಿಡದೆ ಇದಕ್ಕೆ ತಡೆ ಒಡ್ಡಿರುವುದಲ್ಲದೆ ಸಿಡಿಸಿದಲ್ಲಿ ಕ್ಷೇತ್ರಕ್ಕೆ ಸಂಭಂದಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೋಳ್ಳಲಾಗುವುದು.ಮಾತ್ರವಲ್ಲದೆ ಸಿಡಿಮದ್ದು ಪ್ರದರ್ಶನದಾರನ ಪರವಾನಿಗೆ ರದ್ದುಗೊಳಿಸುವುದಾಗಿ ಎಚ್ಚರಿಸಿದರು.ಆದರೆ ಇದೆಲ್ಲವೂ ರಾತ್ರಿಕಾಲದಲ್ಲಿ ನಡೆದು ಹೆಚ್ಚಿನವರ್ಯಾರಿಗೂ ತಿಳಿಯದೆ ಕೇವಲ ಅರ್ಧಗಂಟೆಯಲ್ಲಿ ಬೆಡಿ ಸಿಡಿದು ಹೋಯಿತು.
ಮುಂದೇನು? ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ನಡೆದು ಬರುತ್ತಿದ್ದ ಕುಂಬಳೆ ಬೆಡಿಗೆ ಕಾನೂನಿನ ಬಿಗಿ ನಿಲುವು ಕಂಠಕವಾಗುತ್ತಿರುದನ್ನು ಭಕ್ತರು ಒಪ್ಪುವಂತಿಲ್ಲವೆನ್ಬುತ್ತಾರೆ.ಕಳೆದ ಕೆಲವು ವರ್ಷಗಳ ಹಿಂದೆ ಇದೇ ರೀತಿ ಕಾನೂನಿನ ನೆಪದಲ್ಲಿ ಕುಂಬಳೆ ಬೆಡಿ ಸಿಡಿಸಲು ಬಿಡದ ಪೊಲೀಸರು ಭಾರೀ ಸ್ಫೋಟದ ಸುಡುಮದ್ದುಗುಂಡುಗಳನ್ನು ವಶಪಡಿಸಿ ಕುಂಬಳೆ ಪೊಲೀಸ್ ಠಾಣೆಯ ಜೀಪಿನ ಶೆಡ್ಡಿನಲ್ಲಿ ಶೇಖರಿಸಿದ್ದರು.ಆದರೆ ಪವಾಡವೋ ಎಂಬಂತೆ ಅದೊಂದು ದಿನ ತನ್ನಿಂತಾನೇ ಇದಕ್ಕೆ ಬೆಂಕಿ ತಗಲಿ ಭಾರೀ ಶಬ್ಧದೊಂದಿಗೆ ಸ್ಪೋಟಗೊಂಡು ಅದೃಷ್ಟವಶಾತ್ ಠಾಣೆಯ ಕಟ್ಟಡಕ್ಕೆ ಮಾತ್ರ ಹಾನಿಯಾಗಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ.ಇದು ಕಣಿಪುರ ಗೋಪಾಲಕೃಷ್ಣ ನ ಲೀಲೆ ಎಂಬ ನಿಲುವು ಭಕ್ತರದಾಗಿತ್ತು.ಆದ ಕಾರಣ ಯಾವುದೇ ಕಾರಣಕ್ಕೂ ಬೆಡಿಗೆ ತಡೆಯೊಡ್ಡಬಾರದೆಂಬ ನಿಲುವು ಭಕ್ತರದು.
ಆತಂಕ
ಮುಂದಿನ ದಿನಗಳಲ್ಲಿ ಪಾಲಕುನ್ನು,ಅನಂತಪುರ, ಮಧೂರು,ಐಲ ಮುಂತಾದ ಕ್ಷೇತ್ರಗಳ ವಾರ್ಷಿಕ ಜಾತ್ರೆಯ ಸಂಧರ್ಭದಲ್ಲಿ ಸಿಡಿಮದ್ದು ಪ್ರದರ್ಶನ ನಡೆಯಲಿರುವುದು.ಇದಕ್ಕೂ ಕಾನೂನಿನ ಸಂಚಕಾರ ಬಡಿಯಲಿದ್ದು ಭಕ್ತರು ಆತಂಕ ಪಡುವಂತಾಗಿದೆ.ಆದುದರಿಂದ ಭಕ್ತರ ಭಾವನೆಯನ್ನು ಪರಿಗಣಿಸಿ ಆಡಳಿತ ಮತ್ತು ವಿರೋಧ ಪಕ್ಷಗಳು ಕ್ಷೇತ್ರಗಳ ಆಚಾರಕ್ಕೆ ಭಂಗ ಬಾರದಂತೆ ಸುಗಮ ಬೆಡಿ ಪ್ರದರ್ಶನಕ್ಕೆ ಒಪ್ಪಿಗೆ ದೊರೆಯುವಂತೆ ಸಂಭಂಧಪಟ್ಟವರಲ್ಲಿ ಒತ್ತಡ ತರಬೇಕಾಗಿದೆ. ಇಲ್ಲದಿದ್ದಲ್ಲಿ ಇದು ಮುಂದೆ ಭಾರೀವಿವಾದಕ್ಕೆ ಕಾರಣವಾಗಲಿದೆ.
ಕುಂಬಳೆ ಬೆಡಿ ಕುಂಬಳೆ ಸೀಮೆಗೆೆ ಕಲಶಪ್ರಾಯವಾಗಿದ್ದು ಬೆಡಿ ವಿಫಲವಾಗಲು ಕೆಲವೊಂದು ಅಧಿಕಾರಿಗಳ ಮೇಧಾವಿತ್ವ ಕಾರಣವಾಗಿದೆ. ಚುನಾಯಿತ ಪ್ರತಿನಿಧಿ ಮತ್ತು ಎಲ್ಲ ರಾಜಕೀಯ ಪಕ್ಷಗಳ ನಾಯಕರ ಮೂಲಕ ಅಧಿಕಾರಿಗಳಿಗೆ ಒತ್ತಡ ಹೇರಿ ಬೆಡಿ ಸಫಲಗೊಳಿಸಬಹುದಿತ್ತು.
-ಪುಂಡರೀಕಾಕ್ಷ ಕೆ.ಎಲ್., ಅಧ್ಯಕ್ಷರು ಕುಂಬಳೆ ಗ್ರಾ. ಪಂ.
ಸುಡು ಮದ್ದು ಪ್ರದರ್ಶನಕ್ಕೆ ಸಾಕಷ್ಟು ದಿನಕ್ಕೆ ಮುನ್ನವೇ ಅರ್ಜಿ ಸಲ್ಲಿಸಿದರೂ ಕಾನೂನಿನ ನೆಪದಲ್ಲಿ ಅಧಿಕಾರಿಗಳಿಂದ ಒಪ್ಪಿಗೆ ದೊರೆಯಲಿಲ್ಲ. ಆದುದರಿಂದ ಸುಡು ಮದ್ದು ಪ್ರದರ್ಶನವನ್ನು ನಿರ್ದಿಷ್ಟ ಸಮಯಕ್ಕೆ ಸೀಮಿತಗೊಳಿಸಬೇಕಾಯಿತು.
-ಎಂ.ಟಿ. ರಾಮನಾಥ ಶೆಟ್ಟಿ, ಕ್ಷೇತ್ರ ನಿರ್ವಹಣಾ ಅಧಿಕಾರಿ