Advertisement
ನೆರಿಯದ ಎಸ್ಟೇಟ್ ಒಂದರ ಒಳಗಿದ್ದ ಈ ಕುಟುಂಬಗಳು ಮಾಲಕರ ವಿರುದ್ಧ ನಡೆಸಿದ ಹೋರಾಟದ ಫಲವಾಗಿ 1999-2000ದಲ್ಲಿ ಸ್ವತಂತ್ರವಾಗಿದ್ದವು. ಆದರೆ 6 ಕಿ.ಮೀ. ಕೆಟ್ಟ ರಸ್ತೆಯನ್ನೇ ಅವಲಂಬಿಸಬೇಕಿತ್ತು. ಸೇತುವೆಗಳಿಲ್ಲದೆ ಮಳೆಗಾಲದಲ್ಲಿ 6 ತಿಂಗಳು ಹೊರ ಜಗತ್ತು ಕಾಣುವಂತಿರಲಿಲ್ಲ.
ಮಾಜಿ ಶಾಸಕ ವಸಂತ ಬಂಗೇರ ಅವರ ಅವಧಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 2016ರಲ್ಲಿ ರಸ್ತೆ ಮಂಜೂರಾಗಿದ್ದರಿಂದ ಪ್ರಸಕ್ತ 11.66 ಕೋಟಿ ರೂ. ವೆಚ್ಚದಲ್ಲಿ ಕೋಲ್ನ-ಕೋಲೋಡಿಗೆ 5.3 ಕಿ.ಮೀ. ರಸ್ತೆ ಹಾಗೂ ಸೇತುವೆ ನಿರ್ಮಾಣ ಪೂರ್ಣ ಗೊಂಡಿದೆ. 2ನೇ ಹಂತದಲ್ಲಿ ನೆರಿಯ ಎಚ್.ಪಿ. ಪಂಪ್ ಹೌಸ್‌ನಿಂದ 3 ಕೊ.ರೂ. ವೆಚ್ಚದಲ್ಲಿ 2 ಕಿ.ಮೀ. ರಸ್ತೆ ಸೇರಿದಂತೆ ಒಟ್ಟು 14.50 ಕೋ.ರೂ.ಗಳಲ್ಲಿ 7 ದೊಡ್ಡ ಸೇತುವೆ ಸಹಿತ ಮೂಲನಿವಾಸಿಗಳ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಅತೀ ದೊಡ್ಡ ಕಾಂಕ್ರೀಟ್ ರಸ್ತೆಯಾಗಿದೆ. 70 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕನಸು ನನಸಾಗಿದೆ. ಮಳೆಗಾಲದ ವನವಾಸ
ಕೊಲೋಡಿಗೆ ತಾಗಿಕೊಂಡಿರುವ ಪುಲ್ಲಾಜೆಯ ಜನರದ್ದು ಹೇಳಿ ತೀರದ ಸಂಕಷ್ಟ. ನೆರಿಯ ಹೊಳೆಗೆ ಸೇತುವೆ ನಿರ್ಮಾಣವಾಗದೆ 30 ಕುಟುಂಬಗಳು ಮಳೆಗಾಲದಲ್ಲಿ ವನವಾಸ ಅನುಭವಿಸುತ್ತಿವೆ. ತುರ್ತು ಚಿಕಿತ್ಸೆ ಬೇಕಿದ್ದರೆ ರೋಗಿಯನ್ನು 2 ಕಿ.ಮೀ. ಹೊತ್ತು ತರಬೇಕು.
Related Articles
ಕೋಲೋಡಿ ಸ್ಥಳೀಯ ಎಸ್ಟೇಟ್ ಮಾಲಕರ 9 ಸಾವಿರ ಎಕ್ರೆ ಪ್ರದೇಶದ ವ್ಯಾಜ್ಯ ಹೈಕೋರ್ಟ್‌ನಲ್ಲಿದೆ. ಪರಿಣಾಮ ಆದಿವಾಸಿಗಳ ನೆಲೆಗೂ ಸಮಸ್ಯೆ ಎದುರಾಗಬಹುದು. 23 ಕುಟುಂಬಗಳು ಸುಮಾರು 100 ಎಕ್ರೆ ಪಟ್ಟಾ ಜಾಗದ ಹಕ್ಕು ಪಡೆದಿದ್ದರೆ ಉಳಿದ ಕುಟುಂಬಗಳು ಹಕ್ಕುಪತ್ರಕ್ಕಾಗಿ ಹಾತೊರೆಯುತ್ತಿವೆ. ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿ ಇತ್ಯರ್ಥ ಪಡಿಸಬೇಕಿದೆ. ಸರಕಾರ ಮತ್ತು ಮಾಜಿ ಶಾಸಕ ವಸಂತ ಬಂಗೇರ ಅವರು ರಸ್ತೆ ನಿರ್ಮಿಸಿ ಕೋಲೋಡಿ ಜನರ ಪಾಲಿಗೆ ಹೊಸ ಬದುಕು ನೀಡಿದ್ದಾರೆ. ಇನ್ನೂ ಅನೇಕ ಮನೆಗಳಿಗೆ ಅಗತ್ಯ ಸೌಕರ್ಯ, ಬಸ್ ವ್ಯವಸ್ಥೆ, ಹಕ್ಕುಪತ್ರ ವಿತರಣೆಯಾಗಬೇಕು. ಪುಲ್ಲಾಜೆಯಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ಸೇತುವೆಯಿಲ್ಲದೆ ದಿಗ½ಂದನ ಎದುರಿಸುತ್ತಿವೆ.
– ಸುಧಾಕರ, ಕೋಲೋಡಿ ನಿವಾಸಿ
ಹಾಗೂ ನೆರಿಯ ಗ್ರಾ.ಪಂ. ಸದಸ್ಯ
Advertisement
ಬೇಡಿಕೆ-ವಿದ್ಯಾವಂತರಿಗೆ ಸರಕಾರಿ ಉದ್ಯೋಗವಕಾಶ
-ನೆರಿಯದಿಂದ ಬಸ್ ವ್ಯವಸ್ಥೆ
-ಬಾರ್ತಾಜೆ ತೋಡು ಕೋಂಡ್ಲ ರಸ್ತೆ ಮೋರಿ ಸಮಸ್ಯೆ
-ಬಾಕಿ ಉಳಿದಿರುವ 500 ಮೀ ಕಾಂಕ್ರೀಟೀಕರಣಕ್ಕೆ ಬೇಡಿಕೆ
-ಮೊಬೈಲ್ ನೆಟ್‌ವರ್ಕ್ ಸಮಸ್ಯೆ
-ಪುಲ್ಲಾಜೆ ನೆರಿಯ ಹೊಳೆಗೆ ಸೇತುವೆ ಪುಲ್ಲಾಜೆ ಪ್ರದೇಶದ ನೆರಿಯಾ ಹೊಳೆಗೆ ಸೇತುವೆ ನಿರ್ಮಿಸಲು ಈಗಾಗಲೇ 1.ಕೋ.ರೂ.ನ ಪ್ರಸ್ತಾವನೆ ಕಳುಹಿಸಲಾಗಿದೆ. ಬಹುದಿನಗಳ ಬೇಡಿಕೆ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
– ಹರೀಶ್ ಪೂಂಜ, ಶಾಸಕ -ಚೈತ್ರೇಶ್ ಇಳಂತಿಲ