Advertisement

ತ.ನಾಡಿನ ಸುಳ್ಳುವಾದ ಬಯಲು ಮಾಡಬೇಕು

06:53 AM Jun 26, 2019 | Lakshmi GovindaRaj |

ಬೆಂಗಳೂರು: “ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳು ನಾಡು ಸರ್ಕಾರ ಪ್ರತಿಬಾರಿಯೂ ಸುಳ್ಳು ಮಾಹಿತಿ ನೀಡುತ್ತದೆ. ಅದನ್ನು ರಾಜ್ಯದ ಪ್ರತಿನಿಧಿಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಬಯಲು ಮಾಡಬೇಕು. ಆಗ ಮಾತ್ರ ರಾಜ್ಯದ ಪರ ವಾದಕ್ಕೆ ಬೆಲೆ ಸಿಗುತ್ತದೆ’ ಎಂದು ಬಿಜೆಪಿ ನಾಯಕರ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಕರ್ನಾಟಕದ ಪ್ರತಿನಿಧಿಗಳು ವಾಸ್ತವ ಸ್ಥಿತಿಯನ್ನು ವಿವರಿಸಬೇಕು. ಕರ್ನಾಟಕಕ್ಕೆ ಮುಂಗಾರು ಜೂನ್‌ ತಿಂಗಳಲ್ಲಿ ಬರುತ್ತದೆ. ತಮಿಳುನಾಡಿನಲ್ಲಿ ನವೆಂಬರ್‌ನಲ್ಲಿ ಮಳೆ ಬರುತ್ತದೆ. ಅದನ್ನೂ ಪ್ರಾಧಿಕಾರ ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಹಿಂದೆ ತಮಿಳುನಾಡು ಸುಳ್ಳು ಮಾಹಿತಿ ನೀಡಿದ್ದನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದಾಗ ರಾಜ್ಯ ಸರ್ಕಾರದ ವಾದಕ್ಕೆ ನ್ಯಾಯ ದೊರೆತಿತ್ತು. ಆ ಕೆಲಸವನ್ನು ರಾಜ್ಯದ ಅಧಿಕಾರಿಗಳು ಮಾಡಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದ್ದಾರೆ.

ಇದೇ ವೇಳೆ, ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದ ವಾಸ್ತವಾಂಶವನ್ನು ಬಿಜೆಪಿ ಬಯಲು ಮಾಡಿದೆ. ಅದರ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟ ಉತ್ತರ ನೀಡದೇ ಹಾರಿಕೆ ಉತ್ತರ ನೀಡಿ ಜಾರಿಕೊಂಡಿದ್ದಾರೆ. ಗ್ರಾಮ ವಾಸ್ತವ್ಯದಿಂದ ಹಣ ಪೋಲಾಗುತ್ತಿದೆ ವಿನಃ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next