Advertisement

ಸಿಎಂ ಹುದ್ದೆಗೆ ಅನುಭವ ಮುಖ್ಯ,ವಯಸ್ಸಲ್ಲ: ಸ್ಮೃತಿ

06:15 AM Apr 29, 2018 | |

ಬೆಳಗಾವಿ: ದೇಶದ ಬಹುತೇಕ ಕಡೆ ಯುವಕರು ಬಿಜೆಪಿ ಪರವಾಗಿದ್ದಾರೆ. ಬಿಜೆಪಿ ಯುವಕರ ಪಕ್ಷ ಎಂಬ ಮಾತುಗಳು ಎಲ್ಲ ಕಡೆ ಕೇಳಿ ಬರುತ್ತಿವೆ. ಹೀಗಿರುವಾಗ ಕರ್ನಾಟಕದಲ್ಲಿ ವಯಸ್ಸಾಗಿರುವ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದು ಏಕೆ..?

Advertisement

ಇಂತಹ ಒಂದು ಪ್ರಶ್ನೆ ಯುವತಿಯಿಂದ ತೂರಿ ಬಂದಾಗ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಒಂದು ಕ್ಷಣ ದಂಗಾದರು. ಉತ್ತರಕ್ಕೆ ಒಂದು ಕ್ಷಣ ಯೋಚನೆ ಮಾಡಿದರು. ಇದು ನಡೆದಿದ್ದು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ. ಬಿಜೆಪಿ ಶನಿವಾರ ಆಯೋಜಿಸಿದ್ದ ಕರುನಾಡ ಮಹಿಳಾ ಜಾಗೃತಿ ಸಂವಾದ ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಎದುರಾದಾಗ ಸಮಯೋಚಿತ ಉತ್ತರ ನೀಡಿದ ಸ್ಮೃತಿ ಇರಾನಿ,ಮುಖ್ಯಮಂತ್ರಿ ಆಗಲು ವಯಸ್ಸು ಮುಖ್ಯವಲ್ಲ. ಅನುಭವ ಬೇಕು ಎಂದು ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಂಡರು.

ಉತ್ತರಪ್ರದೇಶದಲ್ಲಿ ಯುವ ನಾಯಕ ಅಖೀಲೇಶ ಯಾದವ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆದರೆ, ಅವರಿಂದ ಅಭಿವೃದಿಟಛಿ ಕೆಲಸ ಆಗಲೇ ಇಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಒಳ್ಳೆಯ ಕೆಲಸ ಮಾಡಿದರು. ಹೀಗಾಗಿ, ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲಾಯಿತು. ಇಲ್ಲಿ ಅನುಭವ ಬೇಕು. ವಯಸ್ಸಲ್ಲ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರ ನೀಡುವಾಗ ಸ್ಮೃತಿ ಇರಾನಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಹೋದ ಮೇಲೆ ಎಲ್ಲವೂ ಸರಿ ಹೋಗುತ್ತದೆ. ಜನರು ನಿರಾಳವಾಗಲಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಡಾ.ನಿರಂಜನಾ ಮಹಾಂತಶೆಟ್ಟಿ, ಸರಿತಾ ನಾಯ್ಕ, ಆಶಾ ರಜಪೂತ, ಅನ್ವರಾ ಬಾನು ಪಠಾಣ, ಕಸ್ತೂರಿ ಹಾಗೂ ರೂಪಾ ಶೆಟ್ಟರ ಅವರನ್ನು ಸಚಿವೆ ಸ್ಮೃತಿ ಇರಾನಿ ಸನ್ಮಾನಿಸಿ ಗೌರವಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next