Advertisement
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಂಜಾರಾ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘ, ಬಂಜಾರಾ ಸಮುದಾಯದ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ಬಂಜಾರಾ ಸಮಾಜ, ಹಿಂದುಳಿದ ಸಮಾಜದವರು ಪಕ್ಷ ಬೇಧ ಮರೆತು ಸನ್ಮಾನ ಮಾಡಿರುವುದು ನನಗೆ ದೊಡ್ಡ ಜವಾಬ್ದಾರಿ ತಂದುಕೊಟ್ಟಿದೆ.ಸಾರ್ವಜನಿಕರಿಗಾಗಿ ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದರು.
Related Articles
Advertisement
ಸೋನ್ಯಾಲಗಿರಿ ಭೇಡಸೂರಿನ ಪರ್ವತಲಿಂಗ ಪರಮೇಶ್ವರ ಮಹಾರಾಜ, ಮುಗುಳನಾಗಾಂವ ಯಲ್ಲಾಲಿಂಗೇಶ್ವರ ಪುಣ್ಯಾಶ್ರಮದ ಜೇಮಸಿಂಗ್ ಮಹಾರಾಜ್, ಗೊಬ್ಬೂರವಾಡಿ ಶ್ರೀ ಸಂತ ಸೇವಾಲಾಲ ಪುಣ್ಯಾಶ್ರಮದ ಬಳಿರಾಮ ಮಹಾರಾಜ, ಚೌಡಾಪುರ ಶಕ್ತಿಪೀಠದ ಮುರಾಹರಿ ಮಹಾರಾಜ್ ಹಾಗೂ ಕೆಸರಟಗಿ ಭಾಗ್ಯವಂತಿ ದೇವಿ ಅವರ ವರಪುತ್ರಿ ಲತಾ ಮಾತಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ ಸುಭಾಷ ವಿ. ರಾಠೊಡ, ಅರವಿಂದ ಚವ್ಹಾಣ, ಹೀರಾಬಾಯಿ ರಾಮಚಂದ್ರ, ಹೀರಾಬಾಯಿ ಬಾಬು ಸೇಠ, ವಿಠ್ಠಲ ಜಾಧವ್, ಲತಾ ರವಿ ರಾಠೊಡ, ರೇಣುಕಾ ಅಶೋಕ ಚವಾಣ, ರಾಮಚಂದ್ರ ಜಿ. ಜಾಧವ, ಪ್ರೇಮಕುಮಾರರಾಠೊಡ, ದೇವಲಾ ನಾಯಕ, ಪಿ.ಜಿ. ರಾಠೊಡ, ಛತ್ರು ರಾಠೊಡ, ಎಸ್.ಎಂ. ರಾಠೊಡ, ಬಿ.ಬಿ. ನಾಯಕ, ಬಿ.ಎಸ್. ಚವ್ಹಾಣ, ಪ್ರೇಮಸಿಂಗ್ ಚವ್ಹಾಣ ಮತ್ತಿತರರು ಪಾಲ್ಗೊಂಡಿದ್ದರು. ಸನ್ಮಾನ ಕಾರ್ಯಕ್ರಮಕ್ಕೂ ಮುನ್ನ ನಗರದ ನಗರೇಶ್ವರ ಶಾಲೆಯಿಂದ ಸೂಪರ್ ಮಾರ್ಕೆಟ್ ಮಾರ್ಗವಾಗಿ ವೀರಶೈವ ಕಲ್ಯಾಣ ಮಂಟಪದವರೆಗೆ ಡಾ| ಉೃೆುàಶ ಜಾಧವ ಅವರ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಬಂಜಾರಾ ಸಮಾಜದ ಹೆಣ್ಣು ಮಕ್ಕಳು, ಪುರುಷರು ಬಂಜಾರಾ ಶೈಲಿಯ ನೃತ್ಯ ಮಾಡಿದರು. ಬಂಜಾರಾ ಸಮಾಜವು ಯಾವತ್ತೂ ಪಕ್ಷಕ್ಕೆ ಪ್ರಾಧಾನ್ಯತೆ ನೀಡಿಲ್ಲ. ಎಲ್ಲರಿಗೂ ಸಮಾಜವೇ ಅತ್ಯಂತ ಶ್ರೇಷ್ಠವಾಗಿದೆ. ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಆತ್ಮೀಯರಾಗಿರುವ ಡಾ| ಉಮೇಶ ಜಾಧವ್ ಬಂಜಾರಾ ಸಮಾಜದ ಅಭಿವೃದ್ಧಿಗಾಗಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ದಿವಂಗತ ಧರಂಸಿಂಗ್ ಅವರೊಂದಿಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಇವರು ಬೀದರ ಜಿಲ್ಲೆಯ ಹುಮ್ನಾಬಾದಿನ ಸೋನ್ಯಾಲಗಿರಿಯಲ್ಲಿ ಟ್ರೆ„ಬಲ್ ಪಾರ್ಕ್ ನಿರ್ಮಾಣ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಶ್ರಮ, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸೇವಾಲಾಲ ಅಧ್ಯಯನ ಅಧ್ಯಯನ ಪೀಠ ಸ್ಥಾಪನೆ, ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಿಸಲು ಪ್ರಯತ್ನ, ಬಂಜಾರರ ಕಾಶಿ ಎಂದೇ ಪ್ರಖ್ಯಾತವಾಗಿರುವ ಪೌರಾಗಡದಲ್ಲಿ ರೈಲು ನಿಲ್ದಾಣ ಸ್ಥಾಪನೆ ಹಾಗೂ ಶ್ರೀ ಸಂತ ಸೇವಾಲಾಲರ ಜನ್ಮಸ್ಥಳವಾದ ಸೂರಗೊಂಡನಕೊಪ್ಪವನ್ನು ಅಭಿವೃದ್ಧಿ ಪಡಿಸಲು, ತಾಂಡಾಗಳನ್ನು ಅಭಿವೃದ್ಧಿ ಪಡಿಸಲು ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ಪ್ರಯತ್ನಿಸಿದ್ದಾರೆ. ರೇವು ನಾಯಕ ಬೆಳಮಗಿ, ಮಾಜಿ ಸಚಿವ