Advertisement
ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ, ರಾಜ್ಯ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ ಹಾಗೂ ಸುದಾನ ವಸತಿಯುತ ಶಾಲೆಯ ಆಶ್ರಯದಲ್ಲಿ ರಾಜ್ಯ ಮಟ್ಟದ ಯುವಜನ ಮೇಳ 2017-18 ನೆಹರೂನಗರದ ಸುದಾನ ವಸತಿಯುತ ಶಾಲೆಯಲ್ಲಿ ಫೆ. 1ರಿಂದ 4ರತನಕ ನಡೆಯಲಿದೆ.
Related Articles
ಸುಮಾರು 5760 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. 17 ಪ್ರಕಾರಗಳ ಸ್ಪರ್ಧೆಗಾಗಿ ಮೂರು ವೇದಿಕೆಗಳನ್ನು
ನಿರ್ಮಿಸಲಾಗಿದೆ. ಒಂದು ಪ್ರಮುಖ ವೇದಿಕೆಯಿದ್ದು, ಇನ್ನೊಂದು ವೇದಿಕೆಯನ್ನು ಸುದಾನ ಶಾಲೆ ಹಿಂಭಾಗದಲ್ಲಿ
ನಿರ್ಮಿಸಲಾಗಿದೆ.
Advertisement
ಪಕ್ಕದಲ್ಲೇ ಇರುವ ಬಿಇಎಂ ಶಾಲೆಯಲ್ಲಿ ಮತ್ತೂಂದು ವೇದಿಕೆ ತಲೆ ಎತ್ತಿದೆ. ಪ್ರಮುಖ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಹಾಗೂ ದೊಡ್ಡ ಮಟ್ಟಿನ ಸ್ಪರ್ಧೆಗಳು ನಡೆಯಲಿವೆ. ಇಲ್ಲಿ ಸುಮಾರು 3 ಸಾವಿರ ಮಂದಿ ಏಕಕಾಲದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಆಕರ್ಷಕ ವೇದಿಕೆ ನಿರ್ಮಿಸಿದ್ದು, ಸಭೆಗೆ ಫ್ಯಾನ್ ಅಳವಡಿಸಿರುವುದು ವಿಶೇಷ. ಸ್ಪರ್ಧಿಗಳು, ತೀರ್ಪು ಗಾರರು, ಅಧಿಕಾರಿಗಳು, ಸ್ವಯಂ ಸೇವಕರು, ಪ್ರೇಕ್ಷಕರು ಸಹಿತ 7 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ರಾಜ್ಯಮಟ್ಟದ ಯುವಜನ ಮೇಳ ಇದಾಗಿರುವ ಕಾರಣ, ಸಾಕಷ್ಟು ವಿಶೇಷತೆಗಳು ಇಲ್ಲಿರಲಿವೆ.
ಅಂತಿಮ ಹಂತದ ಸಿದ್ಧತೆರಾಜ್ಯಮಟ್ಟದ ಯುವಜನ ಮೇಳದ ಅಂತಿಮ ಹಂತದ ಸಿದ್ಧತೆ ನಡೆಯುತ್ತಿವೆ. ಗುರುವಾರ ಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸ್ಪರ್ಧಾಳುಗಳನ್ನು ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣದಿಂದ ಕರೆತರಲು ವ್ಯವಸ್ಥೆ ಮಾಡಲಾಗುತ್ತಿದೆ. ಬಳಿಕ ನೋಂದಣಿ ಮಾಡಿಸಿ, ವಸತಿ ವ್ಯವಸ್ಥೆ ಮಾಡಲಾಗುವುದು. ನಂತರ ಮಧ್ಯಾಹ್ನ 3 ಗಂಟೆಗೆ ನಡೆಯುವ ಮೆರವಣಿಗೆಗೆ ಸೇರಿಕೊಳ್ಳಲಿದ್ದಾರೆ.
– ಮಾಮಚ್ಚನ್,
ತಾಲೂಕು ಯುವಜನ ಕ್ರೀಡಾಧಿಕಾರಿ