Advertisement
ಬರಪೀಡಿತ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಕುಡಿಯುವ ನೀರನ್ನು ನೀಡಲು ಅರಬ್ಬಿ ಸಮುದ್ರ ಸೇರುತ್ತಿದ್ದ ಕೆಂಪು ಹೊಳೆ, ಎತ್ತಿನಹೊಳೆ ನೀರನ್ನು ಪೂರ್ವಾಭಿ ಮುಖವಾಗಿ ತಿರುಗಿಸಿ ನೀರು ಪೂರೈಕೆ ಮಾಡಲು ಸುಮಾರು 13 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನ ಹಲವೆಡೆ ನಡೆಸಲಾಗುತ್ತಿದೆ.
Related Articles
Advertisement
ಬತ್ತುತ್ತಿರುವ ನದಿಗಳು: ನೀರಿನ ಹೆಸರಿನಲ್ಲಿ ರಾಜ ಕಾರಣಿಗಳ, ಅಧಿಕಾರಿಗಳ, ಗುತ್ತಿಗೆದಾರರ ಜೇಬು ತುಂಬಿಸುವ ಈ ಯೋಜನೆಯ ಪರಿಣಾಮ ಧರ್ಮಸ್ಥಳದ ಮಂಜುನಾಥನಿಗೂ ತೊಂದರೆಯುಂಟಾಗಿದ್ದು ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಧರ್ಮಸ್ಥಳದ ಧರ್ಮದರ್ಶಿ ವಿರೇಂದ್ರ ಹೆಗ್ಗಡೆಯವರೇ ಭಕ್ತಾದಿಗಳೇ ನಿಮ್ಮ ಪ್ರವಾಸವನ್ನು ಮುಂದೂಡಿ ಎಂದು ಹೇಳುವ ಪರಿಸ್ಥಿತಿ ಉಂಟಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತೊಂದರೆಗಳು ಉದ್ಭವವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಲೆನಾಡಿನ ಸ್ಥಿತಿ ಚಿಂತಾಜನಕ: ಎತ್ತಿನಹೊಳೆ ಎಂಬ ಅವೈಜ್ಞಾನಿಕ ಯೋಜನೆಗೆ ಮಲೆನಾಡಿನ ಪರಿಸರ ಸಂಪೂರ್ಣವಾಗಿ ಹದಗೆಟ್ಟಿದೆ. ಕರಾ ವಳಿಯ ಜನ ಈ ಯೋಜನೆಯನ್ನು ವಿರೋಧಿಸಿ ದರೂ ಸಹ ಮಲೆನಾಡಿನ ಜನ ಈ ಯೋಜನೆಯ ವಿರುದ್ಧ ಸಾಂಘಿಕ ಹೋರಾಟ ನಡೆಸದ ಪರಿಣಾಮ ಯೋಜನೆಯನ್ನು ಅನುಷ್ಠಾನ ಮಾಡಲು ಅವಕಾಶ ನೀಡಿದ ಪರಿಣಾಮ ಮಲೆನಾಡಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಚಿಂತಾಜನಕವಾಗುತ್ತಿದೆ. ನಾಯಿಕೊಡೆಗಳಂತೆ ಹುಟ್ಟುತ್ತಿರುವ ರೆಸಾರ್ಟ್‌ಗಳು ಹಾಗೂ ಪವರ್ ಪ್ರಾಜೆಕ್ಟ್ಗಳು ಈ ಮಟ್ಟದಲ್ಲಿ ಪರಿಸರ ಹಾನಿ ಮಾಡಿರಲಿಲ್ಲ. ಆದರೆ ಎತ್ತಿನಹೊಳೆ ಯೋಜನೆ ಯಿಂದ ಮಲೆನಾಡು ತನ್ನ ಸಹಜ ವಾತಾವರಣ ವನ್ನು ಕಳೆದುಕೊಂಡಿದೆ. 24 ಟಿಎಂಸಿಯಷ್ಟು ನೀರನ್ನು ಈ ಯೋಜನೆಯಿಂದ ಹರಿಸುತ್ತೇವೆ ಎನ್ನುತ್ತಿರುವ ಈ ಯೋಜನೆಯಲ್ಲಿ 2 ಟಿಎಂಸಿ ಯಷ್ಟು ನೀರನ್ನು ಸಂಗ್ರಹ ಮಾಡಲು ಇನ್ನು ಸಾಧ್ಯವಾಗಿಲ್ಲ.
ಅಭಿವೃದ್ಧಿ ಮರೀಚಿಕೆ: ಎತ್ತಿನಹೊಳೆ ಯೋಜನೆ ಯಿಂದ ತಾಲೂಕಿನ ಹಲವಡೆ ಸಿಮೆಂಟ್ ರಸ್ತೆಗಳು ಆಗಿರುವುದು ಬಿಟ್ಟರೆ ತಾಲೂಕಿನ ಅಭಿ ವೃದ್ಧಿಗೆ ಇನ್ನೇನು ಸಿಕ್ಕಿಲ್ಲ. ಒಂದು ಕಡೆ ಹಾಸನ- ಮಂಗಳೂರು ನಡುವೆ ಚತುಷ್ಟಥ ರಸ್ತೆಗಾಗಿ ಮರ ಗಳನ್ನು ಕಡಿದು ಬೋಳು ಮಾಡಲಾಗಿದ್ದು ಮತ್ತೂಂದು ಕಡೆ ಎತ್ತಿನಹೊಳೆ ಯೋಜನೆಯಿಂದ ಮಲೆನಾಡು ತನ್ನ ಸಹಜತೆಯನ್ನು ಕಳೆದು ಕೊಳ್ಳುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಮಲೆ ನಾಡು ಉತ್ತರ ಕರ್ನಾಟಕದ ಭಾಗಗಳಂತೆ ಆಗು ವುದರಲ್ಲಿ ಯಾವುದೇ ಅನುಮಾನವಿಲ್ಲದಾಗಿದೆ.
ಈ ನಿಟ್ಟಿನಲ್ಲಿ ಕೂಡಲೇ ಸರ್ಕಾರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಪರಿಸರಕ್ಕೆ ಮಾರಕವಾಗುವ ಯೋಜನೆಗಳನ್ನು ಇಲ್ಲಿಗೆ ತರುವುದನ್ನು ನಿಲ್ಲಿಸಿ ಅರಣ್ಯ ಉಳಿಸಿ ಬೆಳೆಸಲು ಕ್ರಮ ಕೈಗೊಳ್ಳಬೇಕಾಗಿದೆ ಇಲ್ಲದಿದ್ದಲ್ಲೆ ನಮ್ಮ ಮುಂದಿನ ಪೀಳಿಗೆಗೆ ಮಲೆನಾಡಿನ ವೈಭವ ಹೀಗಿತ್ತು ಎಂದು ಕಥೆ ಹೇಳಬೇಕಾಗುತ್ತದೆ.
● ಸುಧೀರ್ ಎಸ್.ಎಲ್