Advertisement
ಪ್ರಸ್ತುತ ಗೋಶಾಲೆಯಲ್ಲಿ ಮಲೆನಾಡು ಗಿಡ್ಡ, ಅಮೃತ್ ಮಹಲ್ ಮೊದಲಾದ ದೇಶಿ ತಳಿಗಳ ಜತೆಗೆ ಜೆರ್ಸಿ, ಎಚ್‌ಎಫ್ ಮೊದಲಾದ ವಿದೇಶಿ ಹಾಗೂ ಕ್ರಾಸ್ ತಳಿಗಳು ಕೂಡ ಇದ್ದವು. ಇವುಗಳನ್ನು ಗೋಶಾಲೆಯಿಂದ ಬೇರೆ ಗೋಶಾಲೆಗಳಿಗೆ ಅಥವಾ ಇತರೆ ಹೈನುಗಾರರಿಗೆ ನೀಡಲಾಗುತ್ತಿದೆ. ವಿದೇಶಿ ತಳಿಗಳನ್ನು ಬೇರೆಡೆಗೆ ನೀಡುವ ಪ್ರಕ್ರಿಯೆ ಕಳೆದ ಎ.25ರಂದು ರಾಮನವಮಿ ಸಂದರ್ಭದಲ್ಲಿ ಆರಂಭಗೊಂಡಿತ್ತು. ಮೊದಲು ಹೋರಿಗಳನ್ನು ಬೇರೆಡೆಗೆ ಸಾಗಿಸಲಾಯಿತು.
ರಾಜಸ್ಥಾನದಿಂದ ರಾಟಿ, ಸಾಯಾÌಳ್ ತಳಿಯ 7 ಕರು ಹಾಗೂ ಒಂದು ಹೋರಿಯನ್ನು ಈಗಾಗಲೇ ಶ್ರೀಕೃಷ್ಣಮಠದ ಗೋಶಾಲೆಗೆ ತರಲಾಗಿದೆ. ಇವುಗಳು ಅಪ್ಪಟ ದೇಸೀ ತಳಿಗಳು. ಕರ್ನಾಟಕದ ತಳಿಗಳಿಗಿಂತ ಸ್ವಲ್ಪ ಹೆಚ್ಚು ಹಾಲು ಕೊಡುತ್ತವೆ.
Related Articles
ಗೋ ಶಾಲೆಗೆ ಗೋ ಉತ್ಪನ್ನದಿಂದಲೇ ತಯಾರಾದ ರಾಸಾಯನಿಕ ರಹಿತವಾದ ಪೈಂಟ್ ನೀಡುವ ಪ್ರಕ್ರಿಯೆ ಶೀಘ್ರ ಆರಂಭಗೊಳ್ಳಲಿದೆ. ಆರೂರಿನ ಪುಣ್ಯಕೋಟಿ ಗೋಶಾಲೆಯಲ್ಲಿ ಗೋಮೂತ್ರ, ಗೋಮಯ, ಸುಣ್ಣ, ಮಣ್ಣು, ಮಜ್ಜಿಗೆ ಮತ್ತು ಸಸ್ಯಗಳ ಮಿಶ್ರಣದಿಂದ ತಯಾರಿಸಲಾದ ಪೈಂಟ್‌ನ್ನು ತರಿಸಲಾಗಿದೆ. ಇದರಲ್ಲಿ ರಾಸಾಯನಿಕ ತೀರಾ ಕಡಿಮೆ ಎಂದು ಗೋಶಾಲೆಯ ಮೇಲ್ವಿಚಾರಕರು ತಿಳಿಸಿದ್ದಾರೆ.
Advertisement
ಸುವ್ಯವಸ್ಥಿತ ಗೋಶಾಲೆ ಯೋಜನೆಪ್ರಸ್ತುತ ಗೋಶಾಲೆಯ ಒಳಗೆ ಸುಮಾರು 55ರಷ್ಟು ದನಗಳಿವೆ. ಅದಕ್ಕಿಂತ ಹೆಚ್ಚು ದನಗಳನ್ನು ಸಾಕಲು ಸ್ಥಳಾವಕಾಶವಿಲ್ಲ. ಒಂದು ವೇಳೆ ಶ್ರೀಕೃಷ್ಣ ಮಠದ ಪಕ್ಕದ 2 ಕಿ.ಮೀ ದೂರದಲ್ಲಿ ಸುಮಾರು 3 ಎಕರೆಯಷ್ಟು ಜಾಗ ಲಭ್ಯವಾದರೆ ಸುವ್ಯವಸ್ಥಿತವಾದ ಗೋಮಾಳ ಮಾಡಬಹುದು ಎನ್ನುತ್ತಾರೆ ಗೋಶಾಲೆಯ ಮೇಲುಸ್ತುವಾರಿ ಶ್ರೀನಿವಾಸ ಪೆಜತ್ತಾಯ ಅವರು. ಜೂ.2: ಗೋವುಗಳ ಸಮ್ಮಿಲನ
ಸುವರ್ಣ ಗೋಪುರ ಸಮರ್ಪಣೋತ್ಸವದ ಪ್ರಯುಕ್ತ ಜೂ.2ರಂದು ರಥಬೀದಿಯಲ್ಲಿ 200ಕ್ಕೂ ಅಧಿಕ ದೇಸೀ ಗೋವುಗಳ ಸಮ್ಮಿಲನ ನಡೆಯಲಿದೆ. ಕೊಳಲು ವಾದನದೊಂದಿಗೆ ಗೋವುಗಳ ನಡುವೆ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಉತ್ಸವ ಜರಗಲಿದೆ. ಅಂದು ಗೋವುಗಳ ಕುರಿತಾದ ಸಮಗ್ರ ಮಾಹಿತಿಯನ್ನೊಳಗೊಂಡ ಗೋಷ್ಠಿಗಳು, ಸಂವಾದ, ಗೋ ಉತ್ಪನ್ನಗಳ ಸಮಗ್ರ ಪ್ರದರ್ಶನ ನಡೆಯಲಿದೆ. ಹೈನುಗಾರರು, ಇತರ ರೈತರಿಗೆ ಪೂರಕವಾದ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ದೇಸೀ ಗೋವುಗಳ ಪ್ರಯೋಜನ, ಗೋ ಉತ್ಪನ್ನದ ಔಷಧೀಯ ಬಳಕೆಯ ಬಗ್ಗೆ ಸಮ್ಮಿಲನ ಬೆಳಕು ಚೆಲ್ಲಲಿದೆ.