Advertisement

ಸ್ಲಂ ನಿವಾಸಿಗಳ ಧರಣಿ ಅಂತ್ಯ

11:00 AM Feb 22, 2019 | Team Udayavani |

ಯಾದಗಿರಿ: ಮದನಪುರ ಸ್ಲಂ ನಿವಾಸಿಗಳ ಸಂಘ ಯಾದಗಿರಿ ಹಾಗೂ ವೀರಭಾರತಿ ಪ್ರತಿಷ್ಠಾನ ಆಶ್ರಯದಲ್ಲಿ ಮದನಪುರ ಸ್ಲಂ ನಿವಾಸಿಗಳ ಬೇಡಿಕೆಗಳು ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ನಡೆಸಿರುವ ಅನಿರ್ದಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ 17ನೇ ದಿನಕ್ಕೆ ಜಿಲ್ಲಾಧಿಕಾರಿಗಳ ಸ್ಪಷ್ಟ ಭರವಸೆ ಹಾಗೂ ಪ್ರಕರಣದ ತನಿಖೆಗೆ ಅಧಿಕಾರಿಗಳ ತಂಡ ರಚನೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಗುರುವಾರ ಧರಣಿ ಹಿಂದಕ್ಕೆ ಪಡೆಯಲಾಯಿತು.

Advertisement

ಬೆಳಗ್ಗೆಯಿಂದ ಸರಣಿ ಸಭೆಗಳ ನಂತರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಹಾಗೂ ಮದನಪುರ ನಿವಾಸಿಗಳ ಸಭೆಯಲ್ಲಿ ನಿವಾಸಿಗಳ ಅಹವಾಲು ಆಲಿಸಿದ ತರ ಮಾತನಾಡಿದ ಜಿಲ್ಲಾಧಿಕಾರಿಗಳು ಪ್ರಕರಣದ ತನಿಖೆ ನಡೆಸಲಾಗುವುದು ಎಂದು ನಿವಾಸಿಗಳಿಗೆ ಭರವಸೆ ನೀಡಿದರು.

ಸಭೆಯಲ್ಲಿ ಮಾತನಾಡಿದ ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ  ಜನಾಥ ಹಿರೇಮಠ, ಪ್ರಕರಣವನ್ನು ಸಿಒಡಿಗೆ ಒಪ್ಪಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ನಗರಸಭೆ ಮತ್ತು ಸಂಬಂಧಪಟ್ಟ ಇಲಾಖೆಗಳಲ್ಲಿ ಕಳೆದ 50 ವರ್ಷಗಳ ಹಿಂದಿನ ದಾಖಲೆಗಳೇ ಇಲ್ಲ. ಹೀಗಾಗಿ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಳೆದ 50 ವರ್ಷಗಳಿಂದ ಅಂದಿನ ಪುರಸಭೆಗೆ ಇಂದಿನ ನಗರಸಭೆಗೆ ಇಂದಿಗೂ ತೆರಿಗೆ ಪಾವತಿಸುತ್ತಾ ಬಂದಿದ್ದು, ಇವರ ಹಿತ ಕಾಯುವಲ್ಲಿ ಅಂದಿನ ಪುರಸಭೆ ಸಂಪೂರ್ಣ ವಿಫಲವಾಗಿದೆ. ಈ ಹಿಂದೆ ಪುರಸಭೆಯಿಂದ ಆಗಿರುವ ಲೋಪವನ್ನು ಇನ್ನಾದರೂ ಸರಿಪಡಿಸಿಕೊಡಬೇಕು. ಅವಶ್ಯ ಬಿದ್ದರೆ ಸುಪ್ರೀಂಕೋರ್ಟ್‌ಗೆ ಹೋಗಿಯಾದರೂ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು. ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ಮಾತನಾಡಿ, ಶೀಘ್ರ ತನಿಖೆ ನಡೆಸಿ ನಿವಾಸಿಗಳಿಗೆ ನ್ಯಾಯ ಒದಗಿಸಿಕೊಡಬೇಕು. 

ಮದನಪುರ ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ಅವರಿಗೆ ವಾಸಿಸಲು ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಲ್ಲಾಬಕ್ಷ, ಪೌರಾಯುಕ್ತ ಸಂಗಮೇಶ ಉಪಾಸೆ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಶ್ರೀನಿವಾಸ ಮೂರ್ತಿ ಸೇರಿದಂತೆ ಸಂಘದ ಗೌರವಾಧ್ಯಕ್ಷ ಸ್ವಾಮಿನಾಥನ್‌ಅಪ್ಪುಕುಟನ್‌, ಜಯಕೃಷ್ಣ, ಕೃಷ್ಣ ವಾಟ್ಕರ್‌, ವಿಶ್ವನಾಥ ಮಾಣಿಕರೆಡ್ಡಿ, ಶಿವಕುಮಾರ, ಹಂಪಮ್ಮ ರುದ್ರಯ್ಯ ಸ್ವಾಮಿ, ಮಹಮ್ಮದ್‌ ಶಾ ಹುಸೇನ್‌, ಶೇಖ್‌ ಖಾಜಾ, ಅಧ್ಯಕ್ಷ ಆನಂದ, ಸ್ಲಂ ನಿವಾಸಿಗಳಾದ ಜಯಕೃಷ್ಣ, ಗಫೂರಸಾಬ, ಬಸವರಾಜ, ಗಂಗಮ್ಮ, ರುದ್ರಯ್ಯ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next