Advertisement
ನಗರದ 89 ವೃತ್ತಗಳಲ್ಲಿ ವಿವಿಧ ಪ್ರತಿಕೃತಿ ಹಾಗೂ ದೀಪಾಲಂಕಾರ ನೋಡಲು ನೆರೆಯ ಜಿಲ್ಲೆಗಳು ಮಾತ್ರವಲ್ಲದೇ ವಿವಿಧ ರಾಜ್ಯಗಳ ಲಕ್ಷಾಂತರ ಮಂದಿ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದರು. ಪ್ರತಿದಿನ ವಿವಿಧ ಜಿಲ್ಲೆಗಳಿಂದ 20 ಸಾವಿರ ಮಂದಿ ಆಗಮಿಸಿ ದೀಪಾಲಂಕಾರ ಕಣ್ತುಂಬಿಕೊಳ್ಳುತ್ತಿದ್ದರು. ನಗರದ ಮಹಾರಾಜ ಮೈದಾನದ ಬಳಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದ ನೀರಜ್ ಚೋಪ್ರಾ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿತ್ತು.
Related Articles
Advertisement
ಲಕ್ಷಾಂತರ ಜನರಿಂದ ವೀಕ್ಷಣೆ-
ಈ ಸಾಲಿನ ದಸರಾ ಮಹೋತ್ಸವದ ದೀಪಾಲಂ ಕಾರವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ರಾತ್ರಿಯಾಗುತ್ತಿದ್ದಂತೆಯೇ ನಗರದಲ್ಲಿ ಸಂಚಾರ ದಟ್ಟಣೆ ಅಧಿಕವಾಗುತ್ತಿತ್ತು. ಪೊಲೀಸರು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಸತತವಾಗಿ ಮಳೆ ಸುರಿದು ಜನರ ಉತ್ಸಾಹಕ್ಕೆ ತಡೆಯೊಡ್ಡಿತ್ತು. ಬಿಡುವು ನೀಡಿದ ದಿನಗಳಲ್ಲಿ ಜನರು ದೀಪಾಲಂಕಾರ ವೀಕ್ಷಿಸಿ ಖುಷಿಪಟ್ಟರು.