Advertisement

Desi Swara: ಹಬ್ಬದ ವಾತಾವರಣದಲ್ಲಿ ರಂಗೇರಿದ ಆಡಳಿತ ಮಂಡಳಿಯ ಚುನಾವಣೆ

02:51 PM Mar 16, 2024 | Nagendra Trasi |

ಮ್ಯೂನಿಕ್‌: ಇಲ್ಲಿನ ಐನೆವೆಲ್ಟ್ ಹೌಸ್‌ ಪುರಸಭೆಯಲ್ಲಿ ಫೆ.24ರಂದು ಸಿರಿಗನ್ನಡ ಕೂಟ ಮ್ಯೂನಿಕ್‌ ಛಿ.V.ಯ ಎರಡನೇ ಅವಧಿಯ ಪದಾಧಿಕಾರಿಗಳ ಆಯ್ಕೆಯ ಚುನಾವಣೆ ಮೊದಲನೇ ಅವಧಿಯ ಅಧ್ಯಕ್ಷರಾದ ಕಾರ್ತಿಕ್‌ ಮಂಜುನಾಥ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಎರಡು ವರ್ಷಕೊಮ್ಮೆ ಆಡಳಿತ ಮಂಡಳಿ ಚುನಾವಣೆ ನಡೆಸಲಾಗುವುದು. 2024-26ನೇ ಸಾಲಿನ ಅವಧಿಗಾಗಿ ನಡೆದ ಈ ಚುನಾವಣೆಯಲ್ಲಿ, ಚುನಾವಣ ಅಧಿಕಾರಿಗಳಾಗಿ ಮ್ಯೂನಿಕ್‌ ತಮಿಳು ಸಂಘ ಪ್ರತಿನಿಧಿ ಅಂಗೈಶ್ವರನ್‌ ತಂಗಸ್ವಾಮಿ ಮತ್ತು ಮಹಾರಾಷ್ಟ್ರ ಮಂಡಲ್‌ ಮ್ಯೂನಿಕ್‌ ಪ್ರತಿನಿಧಿಗಳಾದ ಗೌರವ್‌ ಪೊಟೊ#àದೆ, ವಿಜಯ ಕುಮಾರ್‌ ಕುಲ್ಕರ್ಣಿ ಚುನಾವಣೆಯ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತು ಸಂಪೂರ್ಣ ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕವಾಗಿ ನಡೆಸಿಕೊಟ್ಟರು.

ಚುನಾವಣ ಅಧಿಕಾರಿಗಳಿಂದ ದೀಪ ಬೆಳಗುವುದರ ಮೂಲಕ, ವೈಷ್ಣವಿ ಕಾರ್ತಿಕ್‌ ಅವರ ಇಂಪಾದ ಗಣೇಶ ಸ್ತೋತ್ರದ ಆಲಿಕೆಯಿಂದ ಕಾರ್ಯಕ್ರಮದ ಶುಭಾರಂಭವಾಯಿತು.

ಚುನಾವಣ ಪ್ರಕ್ರಿಯೆ ಆರಂಭವಾಗುವುದಕ್ಕೂ ಮುನ್ನ ಸಂಘದ ಅಧ್ಯಕ್ಷರಾಗಿದ್ದ ಕಾರ್ತಿಕ್‌ ಮಂಜುನಾಥ್‌ ಅವರ ಅಧ್ಯಕ್ಷತೆಯಲ್ಲಿ, ಕಾರ್ಯದರ್ಶಿಗಳಾಗಿದ್ದ ಸುಹಾಸ್‌ ಅವರು ಸಂಘದ 2023ನೇ ವರ್ಷದ 2ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ, ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತು ವಾರ್ಷಿಕ ವರದಿಯನ್ನು ನೀಡಿದರು.

ಸಂಘದ ಉಪಾಧ್ಯಕ್ಷೆಯಾದ ದೀಪಿಕಾ ಕೊಂಡಜ್ಜಿ ಹಾಗೂ ಆಡಳಿತ ಮಂಡಳಿಯ ಇತರ ಸದಸ್ಯರುಗಳಾದ ಅರವಿಂದ ಸುಬ್ರಹ್ಮಣ್ಯ, ಗಿರೀಶ್‌ ರಾವಂದೂರು, ಲೋಕೇಶ್‌ ದೇವರಾಜ್‌ ಮತ್ತು ರಾಜ್‌.ಜಿ.ಎಸ್‌. ಅವರು ಉಪಸ್ಥಿತರಿದ್ದರು.
2022-2023ನೇ ಸಾಲಿನ ಆಡಳಿತ ಮಂಡಳಿಯ ನೇತೃತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ವಿವರಿಸುತ್ತಾ ಕೂಟವು ಸುಮಾರು 26 ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟುತು.

Advertisement

ನಮ್ಮನಾಡಿನ ಹಬ್ಬಗಳಾದ ಸಂಕ್ರಾಂತಿ, ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ ಜತೆಗೆ ಕನ್ನಡಿಗರ ಹಬ್ಬ ಕರ್ನಾಟಕ ರಾಜ್ಯೋತ್ಸವ, ಸ್ವಾತಂತ್ರೊéàತ್ಸವದ ಸಲುವಾಗಿ ಸೈಕಲ್‌ ಸವಾರಿ, ಹೊರದೇಶಕ್ಕೆ ಕಾಲಿಟ್ಟ ಹೊಸಬರ ಸಹಾಯಕ್ಕೆ ನಮಸ್ಕಾರ ನ್ಯೂಬೀಸ್‌ ಕಾರ್ಯಕ್ರಮಗಳು, ರಾಜ್ಯೋತ್ಸವದ ಅಂಗವಾಗಿ ಆನ್‌ಲೈನ್‌ ರಸಪ್ರಶ್ನೆ ಕಾರ್ಯಕ್ರಮಗಳು, ಛಾಯಾಚಿತ್ರಣ ಕಾರ್ಯಾಗಾರಗಳು, ಚಾರಿಟಿಗಾಗಿ ಸೈಕಲ್‌ ಸವಾರಿ ಮತ್ತು ಯಕ್ಷಗಾನ ಪ್ರದರ್ಶನ, ಪಂಡಿತ್‌ ಪ್ರವೀಣ್‌ ಗೋಡ್ಕಿಂಡಿ ಅವರ ಕೊಳಲು ವಾದನ ಕಾರ್ಯಕ್ರಮ, ಸಾಹಿತ್ಯಾಸಕ್ತರಿಗೆ ವೇದಿಕೆಯಾಗಿ ಕನ್ನಡ ಕಹಳೆ ಕಾರ್ಯಕ್ರಮ, ಉಪನ್ಯಾಸ ಕಾರ್ಯಕ್ರಮ ಹೀಗೆ ಸಿರಿಗನ್ನಡ ಕೂಟ ಮ್ಯೂನಿಕ್‌ .V. ವಿವಿಧ ರೀತಿಯ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಕನ್ನಡಾಂಬೆಯ ಸೇವೆಯಲ್ಲಿ ತನ್ನನು ತೊಡಗಿಸಿಕೊಂಡಿತು.

ನಮ್ಮ ಸಿರಿಗನ್ನಡ ಕೂಟ ಪ್ರಜಾಸತ್ತಾತ್ಮಕವಾಗಿ ಕೂಟದ ಸದಸ್ಯರೆಲ್ಲರೂ ಸೇರಿ ತಮ್ಮ ಮತಗಳ ಮೂಲಕ ಆಡಳಿತ ಮಂಡಳಿಯನ್ನ ಚುನಾಯಿಸುವ ಪ್ರಕ್ರಿಯೆ ಪಾಲಿಸುವ ಕೆಲವೇ ಕೂಟಗಳಲ್ಲಿ ಒಂದು ಎನಿಸಿಕೊಳ್ಳುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೊಂದು ಕೂಟದ ಹಬ್ಬವೇ ಸರಿ ಎನ್ನುವ ಮಟ್ಟಿಗೆ ಚುನಾವಣೆಯ ದಿನ ಸಜ್ಜಾಗಿತ್ತು.

ಚುನಾವಣೆಯ ಸ್ವಯಂ ಸೇವಕ ಸಮಿತಿಯಲ್ಲಿ ಕೂಟದ ಸದಸ್ಯರಾದ ದೀಪಕ್‌ ಆರ್‌.ಜೆ., ಮಯೂರ್‌ ಜಲವಾಡಿ, ಪಣಿಕಿರಣ್‌ ಪಿರಿಯಾಪಟ್ಟಣ, ಸಚಿನ್‌, ಸಂಜಯ್‌ ಪಾಟೀಲ್‌, ಕಾರ್ತಿಕ್‌, ಚುನಾವಣೆಯ ಎಲ್ಲ ಭಾಗಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಚುನಾವಣೆ ಸಕ್ರಿಯವಾಗಿ ನಡೆಯುವಲ್ಲಿ ಮುಖ್ಯ ಪಾತ್ರ ವಹಿಸಿದರು. ಕೂಟದ ಪ್ರಾಯೋಜಕರಲ್ಲಿ ಒಬ್ಬರಾದ ಇಂಡಿಯನ್‌ ಮ್ಯಾಂಗೋ, ದಿನದ ಲಘು ಉಪಹಾರದ ವ್ಯವಸ್ಥೆ ಅಚ್ಚುಕಟ್ಟಾಗಿ, ರುಚಿಕರವಾಗಿ ಮಾಡಿಕೊಟ್ಟರು. ವಿಕಾಸ್‌ ತಪನ್‌ ಅವರು ಸ್ವಯಂ ಸೇವಕರಾಗಿ ತೊಡಗಿಸಿಕೊಂಡಿದ್ದಕ್ಕೆ ಕೂಟ ಆಭಾರವನ್ನ ವ್ಯಕ್ತ ಪಡಿಸುತ್ತುದೆ.

ಸಂಘದ 2ನೇ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶ್ರೀಧರ್‌ಲಕ್ಷ್ಮಾಪುರ, ಉಪಧ್ಯಕ್ಷೆಯಾಗಿ ವೈಷ್ಣವಿ ಕುಲಕರ್ಣಿ, ಕಾರ್ಯದರ್ಶಿಯಾಗಿ ಸೀತಾರಾಮ ಶರ್ಮ, ಖಜಾಂಜಿ ಮತ್ತು ಮಾಹಿತಿ ತಂತ್ರಜ್ಞಾನದ ಅಧಿಕಾರಿಯಾಗಿ ಮಹೇಂದ್ರ ಭದ್ರಣ್ಣನವರ್‌, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಚಂದನ ಮಾವಿನಕೆರೆ, ಸಾಂಸ್ಕೃತಿಕ ಮತ್ತು ಕ್ರೀಡಾಧಿಕಾರಿಯಾಗಿ ದಿವ್ಯಾ ಎಚ್‌.ಎನ್‌. ಹಾಗೂ ಶಿಕ್ಷಣ ಮತ್ತು ಸಾಹಿತ್ಯ ಮೇಲುಸ್ತುವಾರಿಯನ್ನು ಕಮಲಾಕ್ಷ ಎಚ್‌.ಎ. ಅವರುಗಳು ಚುನಾಯಿತರಾಗಿದ್ದಾರೆ.

ಚುನಾವಣೆ ಪ್ರಕ್ರಿಯೆಯಲ್ಲಿ 145 ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಮತ ಚಲಾಯಿಸಿ, ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ – ಕೂಟದ ಪರವಾಗಿ ಇವರೆಲ್ಲರಿಗೂ ಅಭಿನಂದನೆಗಳು. ಕೂಟವನ್ನು 2 ವರ್ಷ ನಡೆಸುವಲ್ಲಿ, ಪ್ರತಿನಿಧಿಸುವಲ್ಲಿ, ಹೊಸ 7 ಮಂದಿಯಲ್ಲಿ ತಮ್ಮ ವಿಶ್ವಾಸ, ಹರಕೆ, ನಂಬಿಕೆಯನ್ನ ಪ್ರದರ್ಶಿದ್ದಾರೆ.
ಅವರೆಲ್ಲರೂ ಇದೇ ರೀತಿ ಮುಂದೆ 2 ವರ್ಷ ಕೈ ಹಿಡಿದು, ಆಡಳಿತ ಮಂಡಳಿಗೆ ತಮ್ಮ ಬೆಂಬಲ ನೀಡಬೇಕು ಎಂದು ಕೂಟ ಕೇಳಿಕೊಂಡಿದೆ. ಇದೇ ಸಂದರ್ಭದಲ್ಲಿ ಕೂಟದ ಧ್ವನಿಯಾದ ಹೊನ್ನುಡಿ ಪತ್ರಿಕೆಯ 3ನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

ಮೊದಲನೇ ಅವಧಿಯ ಆಡಳಿತ ಮಂಡಳಿ ಸದಸ್ಯರು ನೂತನ ಚುನಾಯಿತರಿಗೆ ಶುಭ ಹಾರೈಸಿದರು ಮತ್ತು ಮುಂಬರುವ ದಿನಗಳಲ್ಲಿ ಸಂಪೂರ್ಣ ಮಾಹಿತಿ ಸಮೇತ ಅಧಿಕಾರ ವರ್ಗಾವಣೆ ಮಾಡಲಾಗುವುದಾಗಿ ತಿಳಿಸಿದರು.

ವರದಿ: ಕಮಲಾಕ್ಷ ಎಚ್‌.ಎ.
ಚಿತ್ರ ಕೃಪೆ: ಅಮಿತ್‌ ಕಡಸೂರ್‌, ರಜತ್‌ ಶೆಣೈ

 

Advertisement

Udayavani is now on Telegram. Click here to join our channel and stay updated with the latest news.

Next