Advertisement

ಚುನಾವಣೆ ಅಕ್ರಮಕ್ಕೆ ನಿರ್ದಾಕ್ಷಿಣ್ಯ ಕ್ರಮ: ಹೆಪ್ಸಿಬಾ

12:30 AM Mar 03, 2019 | |

ಉಡುಪಿ: ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳಿಂದ ಮತದಾರರ ಮೇಲೆ ಪ್ರಭಾವ ಬೀರುವ ಅಕ್ರಮಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರಗಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಅವರು ಶನಿವಾರ ರಜತಾದ್ರಿಯ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ವಿವಿಧ ಹಂತದ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾರದರ್ಶಕ, ಮುಕ್ತ, ನ್ಯಾಯ ಸಮ್ಮತ ರೀತಿಯಲ್ಲಿ ಹಾಗೂ ಮತ ದಾರರು ಯಾವುದೇ ಪ್ರಲೋಭನೆಗೆ ಒಳಗಾಗದೇ ಮತ ಚಲಾಯಿಸುವುದು ಪ್ರಜಾಪ್ರಭುತ್ವದ ಆಶಯ ಎಂದರು.

ಚುನಾವಣೆ ಘೋಷಣೆಯಾದ ತತ್‌ಕ್ಷಣವೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದ್ದು ಅನಂತರದ 24 ಗಂಟೆಯೊಳಗೆ ಸಾರ್ವಜನಿಕ ಸ್ಥಳಗಳಲ್ಲಿರುವ ಎಲ್ಲ ಪ್ರಚಾರದ ವಸ್ತುಗಳನ್ನು ತೆರವುಗೊಳಿಸಬೇಕು. ಸಾರ್ವಜನಿಕರು ತಮ್ಮ ಮನೆಗಳ ಮುಂದೆ ಪಕ್ಷಗಳ ಬ್ಯಾನರ್‌, ಧ್ವಜ ಅಳವಡಿಸಿದ್ದರೂ ತೆರವುಗೊಳಿಸ ಬೇಕೆಂದು ಹೇಳಿದರು.

50,000 ರೂ. ಮಿಕ್ಕಿ
ನಗದು ಸಾಗಾಟ ನಿರ್ಬಂಧ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಮಾತನಾಡಿ, ಅಕ್ರಮ ಚಟುವಟಿಕೆ ಕಂಡುಬಂದಲ್ಲಿ ವಿಳಂಬ ಮಾಡದೆ ಕೇಸು ದಾಖಲಿಸಬೇಕು, ಸಮರ್ಪಕ ದಾಖಲೆಗಳಿಲ್ಲದೆ 50,000 ರೂ. ಮಿಕ್ಕಿ ನಗದು ಕೊಂಡೊ ಯ್ಯುವಂತಿಲ್ಲ ಎಂದರು.
ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಮಾತನಾಡಿ, ಅಧಿಕಾರಿಗಳು ಹಿಂಜರಿಕೆ ಇಲ್ಲದೆ ಕರ್ತವ್ಯ ನಿರ್ವಹಿ ಸಬೇಕು ಎಂದರು.

Advertisement

ಆಯೋಗದ ವಿವಿಧ ಆ್ಯಪ್‌ಗ್ಳನ್ನು ಬಳಸುವ ಬಗ್ಗೆ ಮತ್ತು ವಿವಿಧ ಸಮಿತಿಗಳು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತಂತೆ ಮಾಹಿತಿ ಮತ್ತು ತರಬೇತಿ ನೀಡಲಾಯಿತು.

ಮತದಾರರ ಪಟ್ಟಿಗೆ ಸೇರ್ಪಡೆ: ಡಿಸಿ ಅರ್ಜಿ
ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಮಿಂಚಿನ ನೋಂದಣಿ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಅವರು ಶನಿವಾರ ಅಜ್ಜರಕಾಡು ವಿವೇಕಾನಂದ ಸ. ಹಿ. ಪ್ರಾ. ಶಾಲೆಗೆ ತೆರಳಿ ತಮ್ಮ ಹೆಸರು ಸೇರ್ಪಡೆಗಾಗಿ ಸ್ಥಳೀಯ ಬಿಎಲ್‌ಒ ಅವರಿಗೆ ಅರ್ಜಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next