Advertisement

ಮನೆಯ ಹಿರಿಯರಿಗಿನ್ನು ಮಕ್ಕಳೇ “ಗುರುಗಳು’

09:10 AM Nov 05, 2018 | Team Udayavani |

ಜೈಪುರ: ಮನೆಯಲ್ಲಿರುವ ಅನಕ್ಷರಸ್ಥ ಹಿರಿಯರಿಗೆ ಮಕ್ಕಳೇ ಕಲಿಸಿಕೊಡುವಂಥ ಹೊಸ ಅಭಿಯಾನವೊಂದನ್ನು ಸದ್ಯದಲ್ಲೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಆರಂಭಿಸಲಿದೆ ಎಂದು ಸಚಿವ ಪ್ರಕಾಶ್‌  ಜಾವಡೇಕರ್‌ ತಿಳಿಸಿದ್ದಾರೆ. 

Advertisement

ಈ ಅಭಿಯಾನದಡಿ 6ರಿಂದ 10ನೇ ತರಗತಿ ವಿದ್ಯಾರ್ಥಿಗಳನ್ನು ಬಳಸಿಕೊಂಡು, ಮನೆಯಲ್ಲಿನ ಅನಕ್ಷರಸ್ಥ ಸದಸ್ಯರನ್ನು ಅಕ್ಷರಸ್ಥರನ್ನಾಗಿಸುವಂತೆ ಉತ್ತೇಜಿಸಲಾಗುತ್ತದೆ. “ಪಡ್ನಾ-ಲಿಖಾ°’ ಎಂಬ ಹೆಸರಿನ ಈ ಅಭಿಯಾನದಲ್ಲಿ ತಮ್ಮ ಹಿರಿಯರಿಗೆ ಮಕ್ಕಳೇ “ಗುರು’ಗಳಾಗಿರುತ್ತಾರೆ. ಅದಕ್ಕೆ ಬೇಕಾದ ಪರಿಕರಗಳನ್ನು ನಾವೇ ಮಕ್ಕಳಿಗೆ ಒದಗಿಸುತ್ತೇವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಜಾವಡೇಕರ್‌ ಜೈಪುರದ ಒಂದು ಕುಟುಂಬವನ್ನು ಭೇಟಿಯಾದ ವೇಳೆ ಆ ಮನೆಯ ಹಿರಿಯರಿಗೆ ಅಕ್ಷರಾಭ್ಯಾಸ ಮಾಡಿಸುವಂತೆ ಮಕ್ಕಳಿಗೆ ಸೂಚಿಸಿದರು. ನಂತರ, ಇದರ ಮೂಲಕ ಈ ಯೋಜನೆಗೆ ಅನೌಪಚಾರಿಕ ಚಾಲನೆ ನೀಡಿದ್ದೇನೆ. ಎರಡು ತಿಂಗಳಲ್ಲೇ ಇದು ಅಧಿಕೃತವಾಗಿ ಜಾರಿಗೆ ಬರಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next