Advertisement

ಸಹಾಯಕ್ಕಾಗಿ ಕಾಯುತ್ತಿದೆ ಪಾರ್ಶ್ವವಾಯು ಪೀಡಿತ ಹಿರಿಯ ಜೀವ

06:00 AM Jul 03, 2018 | |

ಉಡುಪಿ: ಚಿಂತಾಜನಕ ಪರಿಸ್ಥಿತಿಯಲ್ಲಿದ್ದ ಸುಮಾರು 75 ವರ್ಷ ಪ್ರಾಯದ ಅಸಹಾಯಕ ಬ್ರಾಹ್ಮಣ ವೃದ್ಧರನ್ನು ಸಮಾಜ ಸೇವಕ ಅಂಬಲಪಾಡಿ ವಿಶು ಶೆಟ್ಟಿಯವರು ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಸದ್ಯ ಅವರು ಚೇತರಿಸಿಕೊಂಡಿದ್ದಾರೆ.

Advertisement

ಪಾರ್ಶ್ವವಾಯು ಪೀಡಿತರಾಗಿರುವ ಅವರು ತನ್ನ ಹೆಸರು ರಮೇಶ್‌ ಭಟ್‌, ಊರು ಪೆರ್ಡೂರು, ತನಗೆ ಪತ್ನಿ, ಮಕ್ಕಳಿಲ್ಲ, ಸಂಬಂಧಿಕರು ಇದ್ದಾರೆ ಎನ್ನುವ ಮಾಹಿತಿ ನೀಡಿದ್ದಾರೆ. ಚಿಕಿತ್ಸೆಗೆ ದಾಖಲಾಗಿ 2 ತಿಂಗಳು ಕಳೆದರೂ ಅವರನ್ನು ಕರೆದುಕೊಂಡು ಹೋಗಲು ಸಂಬಂಧಿಕರು ಯಾರೂ ಬಂದಿಲ್ಲ. ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆ ಮುಗಿದಿದೆ. ಸದ್ಯ ಅವರಿಗೆ ಬೇರೆ ನೆಲೆ ಇಲ್ಲ. ಪ್ರದೀಪ್‌ ಅವರು 2 ತಿಂಗಳ ಕಾಲ ಆಸ್ಪತ್ರೆಯಲ್ಲಿ ವೃದ್ಧರ ಉಚಿತ ಸೇವೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸರಕಾರದ ಯಾವುದೇ ವೃದ್ಧಾಶ್ರಮ ಇಲ್ಲದಿರುವುದರಿಂದ, ಇರುವ ಖಾಸಗಿ ವೃದ್ಧಾಶ್ರಮಗಳು ಸಂಪೂರ್ಣ ಸಸ್ಯಾಹಾರಿಯಾಗಿ ಇರದ ಕಾರಣ ವೃದ್ಧರನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಬ್ರಾಹ್ಮಣರ ಉಸ್ತುವಾರಿಯಲ್ಲಿ ನಡೆಸಲ್ಪಡುವ ಶ್ರೀಸಾಯಿ ನಿಕೇತನದ ವೃದ್ಧಾಶ್ರಮಕ್ಕೆ ದಾಖಲಿಸಲಾಗಿದೆ. ಇಲ್ಲಿ ಮಾಸಿಕ 8 ಸಾವಿರ ರೂ. ರಿಯಾಯಿತಿ ಶುಲ್ಕ ನಿಗದಿಪಡಿಸಲಾಗಿದೆ. ವೃದ್ದರ ಸ್ಥಿತಿಯನ್ನು ಕಂಡು ಮುಂಗಡ ಠೇವಣಿಯನ್ನು ಆಶ್ರಮದ ಉಸ್ತುವಾರಿಗಳು ನಿರಾಕರಿಸಿದ್ದಾರೆ. ವೃದ್ಧರಿಗಾಗಿ ಹಣ ವ್ಯಯಿಸಲಾಗಿದ್ದು ಮುಂದಿನ ಖರ್ಚು ಭರಿಸಲು ಅಸಾಧ್ಯವಾಗಿರುವ ಕಾರಣ ಬ್ರಾಹ್ಮಣ ಸಮಾಜದ ದಾನಿಗಳು, ಸಂಘ ಸಂಸ್ಥೆಗಳು ವೃದ್ಧರ ಸೇವೆಗೆ ಮುಂದೆ ಬರಬೇಕಿದೆ ಎಂದು ವಿಶು ಶೆಟ್ಟಿ ಅವರು ಮನವಿ ಮಾಡಿದ್ದಾರೆ.ಅಸಹಾಯಕ ವೃದ್ಧರಿಗೆ ನೆರವು ನೀಡಲು ಬಯಸುವವರು ಆಶ್ರಮವನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next