Advertisement

ಬಾತು ಕಿ ಲಡಿ, ಎಂಟು ತಿಂಗಳು ಮುಳುಗಿರುವ ದೇಗುಲ

10:55 AM Dec 17, 2017 | Harsha Rao |

ಹಿಮಾಚಲ ಪ್ರದೇಶದÇÉೊಂದು ವಿಶಿಷ್ಟವಾದ ದೇವಾಲಯವಿದೆ. ಇದು ವರ್ಷದ ಎಂಟು ತಿಂಗಳುಗಳ ಕಾಲ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುತ್ತದೆ. ಹಾಗಾಗಿ, ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದು ವರ್ಷದ ಕೇವಲ ನಾಲ್ಕು ತಿಂಗಳುಗಳು ಮಾತ್ರ! ಈ ದೇವಾಲಯವು ದಶಕಗಳಿಂದ ಇದೇ ವ್ಯವಸ್ಥೆಯನ್ನು ಅನುಸರಿಸಿಕೊಂಡು ಬಂದಿರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ. ಇದುವೇ ಬಾತು ಕಿ ಲಡಿ ದೇವಾಲಯ!

Advertisement

ಈ ದೇವಾಲಯವು ಹಿಮಾಚಲ ಪ್ರದೇಶದ ಕಾಂಗ್ರಾ ಜಿÇÉೆಯ ಜವಳಿ ನಗರಕ್ಕೆ ಸಮೀಪದಲ್ಲಿದ್ದು, ಇತಿಹಾಸ ಕಾಲದ ಹಲವಾರು ರಹಸ್ಯಗಳನ್ನು ತನ್ನೊಳಗೆ ಹುದುಗಿಕೊಂಡಿದೆ. 1970ರಲ್ಲಿ ಮಹಾರಾಣಾ ಪ್ರತಾಪ್‌ ಸಾಗರ್‌ ಜಲಾಶಯಕ್ಕೆ ಕಟ್ಟಲಾದ ಪೋಂಗ್‌ ಅಣೆಕಟ್ಟಿನ ಹಿನ್ನೀರಿನಲ್ಲಿ ಸಂಪೂರ್ಣವಾಗಿ ಜಲಸಮಾಧಿಯಾದ ಸ್ಥಿತಿಯಲ್ಲಿದೆ ಈ ದೇವಾಲಯ. ಸುಮಾರು ಐದು ದಶಕಗಳಿಂದ ಈ ದೇವಾಲಯವು ಮುಳುಗಿದ ಸ್ಥಿತಿಯÇÉೇ ಇದೆ. ಈ ಸಂದರ್ಭದಲ್ಲಿ ಭಕ್ತರು ಇಲ್ಲಿಗೆ ಸಾಗಬೇಕಾದರೆ ಬೋಟ್‌ಗಳ ಮೂಲಕವೇ ತೆರಳಬೇಕಾಗಿದೆ.

ಈ ದೇವಾಲಯಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಒಳಗೆ ಸ್ವರ್ಗಕ್ಕೆ ಸಾಗುವ ಮೆಟ್ಟಿಲುಗಳಿದ್ದು ಇದನ್ನು ಮಹಾಭಾರತದ ಕಾಲದಲ್ಲಿ ಪಾಂಡವರು ನಿರ್ಮಾಣ ಮಾಡಿದರೆಂಬ ಉÇÉೇಖವಿದೆ. ಪಾಂಡವರು ತಮ್ಮ ಅಜ್ಞಾತವಾಸದ ಸಂದರ್ಭದಲ್ಲಿ ಧರ್ಮ ಸಂಸ್ಥಾಪನೆಯ ಉದ್ದೇಶದಿಂದ ಅಲ್ಲಲ್ಲಿ ಶಿವಾಲಯಗಳನ್ನು ನಿರ್ಮಿಸಿ ಅಲ್ಲಿ ಶಿವನನ್ನು ಪ್ರಾರ್ಥಿಸುತ್ತಿದ್ದರು. ಬಾತೂ ಕಿ ಲಡಿ ದೇವಾಲಯದಲ್ಲಿ ಶಿವಾಲಯದೊಂದಿಗೆ ಸ್ವರ್ಗಕ್ಕೆ ಸಾಗುವ ದಾರಿಯನ್ನು ಪಾಂಡವರು ನಿರ್ಮಾಣ ಮಾಡುವ ಸಂದರ್ಭ ಬಂತು. ಆದರೆ, ಈ ನಿರ್ಮಾಣ ಕಾರ್ಯವು ಸೂರ್ಯ ರಶ್ಮಿಯು ಇಲ್ಲಿಗೆ ಪ್ರವೇಶವಾಗುವ ಪೂರ್ವದಲ್ಲಿಯೇ ಪೂರ್ಣವಾಗಬೇಕು. ತ‌ಪ್ಪಿದಲ್ಲಿ ಮತ್ತೆ ಆರು ತಿಂಗಳುಗಳ ಕಾಲ ಅಜ್ಞಾತವಾಸವನ್ನು ಮುಂದುವರಿಸಬೇಕೆಂಬ ನಿಯಮವಿರುತ್ತದೆ. ಶ್ರೀಕೃಷ್ಣನು ಆರು ತಿಂಗಳುಗಳನ್ನು ಜೋಡಿಸಿ ಒಂದು ರಾತ್ರಿಯನ್ನಾಗಿ ಪರಿವರ್ತಿಸಿ ನೆರವಾದನೆಂಬ ಐತಿಹ್ಯವಿದೆ. ಪಾಂಡವರು ಸ್ವರ್ಗಕ್ಕೆ ಇಲ್ಲಿ ಮೆಟ್ಟಿಲುಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಮಹಿಳೆಯೊಬ್ಬಳು ಆಗಾಗ ಪ್ರಕಾಶಮಾನವಾದ ದೀಪವನ್ನು ಹಚ್ಚುತ್ತಿದ್ದಳಂತೆ. ಇದನ್ನು ನೋಡಿ ಸೂರ್ಯೋದಯವಾಗುತ್ತಿದೆ ಎಂದು ತಿಳಿದ ಪಾಂಡವರು ಮೆಟ್ಟಿಲುಗಳ ನಿರ್ಮಾಣ ಕಾರ್ಯವನ್ನು ನಿಲ್ಲಿಸುತ್ತಿದ್ದರು. ಈ ಕಾರಣದಿಂದಾಗಿಯೇ ಈ ದೇವಾಲಯದಿಂದ ಸ್ವರ್ಗಕ್ಕೆ ಮೆಟ್ಟಿಲುಗಳ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳದೇ ಇದ್ದು, ಶ್ರೀಕೃಷ್ಣನ ಆಜ್ಞೆಯಂತೆ ಪಾಂಡವರು ಮತ್ತೆ ಆರು ತಿಂಗಳುಗಳ ಅಜ್ಞಾತ ವಾಸವನ್ನು ಮುಂದುವರಿಸಿದರೆಂಬ ಕಥೆಯನ್ನು ಇಲ್ಲಿನ ಹಿರಿಯರು ಹೇಳುತ್ತಾರೆ.

ಈ ದೇವಾಲಯದ ನಿರ್ಮಾಣದಲ್ಲಿ  ವಿಶಿಷ್ಟವಾದ “ಬಾತೂ’ ಎಂಬ ಕಲ್ಲನ್ನು ಬಳಸಿರುವ ಕಾರಣದಿಂದಾಗಿಯೇ ಈ ದೇವಾಲಯಕ್ಕೆ “ಬಾತೂ ಕಿ ಲಡಿ’ ಎಂಬ ಹೆಸರು ಬಂತೆಂಬ ಉÇÉೇಖವಿದೆ. ಇಲ್ಲಿ ಒಟ್ಟು ಆರು ಶಿಖರಾಕೃತಿಯ ದೇವಾಲಯಗಳಿದ್ದು, ದೇವಾಲಯದ ಇಕ್ಕೆಲಗಳಲ್ಲಿ ಮಹಾದ್ವಾರಗಳಿದ್ದು, ಇದನ್ನು ಪ್ರವೇಶಿಸುತ್ತಿದ್ದಂತೆ ವಿಷ್ಣು, ಭದ್ರಕಾಳಿ ಮತ್ತು ಗಣೇಶನ ದೇವಾಲಯಗಳ ದರ್ಶನವಾಗುತ್ತದೆ. ಇಲ್ಲಿ ಒಂದು ಪ್ರಧಾನ ದೇವಾಲಯವಿದ್ದು ಇದರಲ್ಲಿ ಪರಮಶಿವನ ಲಿಂಗವನ್ನು ಸ್ಥಾಪಿಸಲಾಗಿದೆ. ಈ ದೇವಾಲಯಗಳ ಗುಮ್ಮಟಗಳಲ್ಲಿ ವಿಷ್ಣು ಹಾಗೂ ಶೇಷನಾಗರ ಮುರಿದ ಶಿಲ್ಪಗಳನ್ನು ಕಾಣಬಹುದಾಗಿದ್ದು ಆಗಿನ ಕಾಲದ ಹಿಂದೂ ವಾಸ್ತುಶಿಲ್ಪವು ಎಷ್ಟೊಂದು ಶ್ರೀಮಂತವಾಗಿತ್ತೆಂಬುದನ್ನು ಅರಿಯಬಹುದಾಗಿದೆ.

ಇಲ್ಲಿ ಪ್ರತೀವರ್ಷ ಮಾರ್ಚ್‌ನಿಂದ ಜೂನ್‌ ತಿಂಗಳು ಗಳಲ್ಲಿ ಜಲಾಶಯದ ನೀರಿನ ಮಟ್ಟ ಕೆಳಗಿಳಿದು ಈ ದೇವಾಲಯದ ದರ್ಶನವಾಗುತ್ತಿದ್ದು, ಉಳಿದ ತಿಂಗಳುಗಳಲ್ಲಿ ಸಂಪೂರ್ಣವಾಗಿ ನೀರಿನಲ್ಲಿ ದೇವಾಲಯವು ಮುಳುಗಿರುತ್ತದೆ. ಈ ನಾಲ್ಕು ತಿಂಗಳುಗಳೂ ಸೂರ್ಯಾಸ್ತದ ಸಂದರ್ಭದಲ್ಲಿ ಸೂರ್ಯನ ಕೊನೆಯ ರಶ್ಮಿಗಳು ಇಲ್ಲಿನ ಶಿವಲಿಂಗದ ಪಾದವನ್ನು ಸ್ಪರ್ಶಿಸಿಯೇ ಸೂರ್ಯಾಸ್ತಮಾನವಾಗುವ ರೀತಿಯಲ್ಲಿ ಇಲ್ಲಿನ ದೇವಾಲಯವನ್ನು ವಿಭಿನ್ನವಾಗಿ ನಿರ್ಮಿಸಲಾಗಿದೆ. ಇಲ್ಲಿಂದ ಸುಮಾರು ಏಳು ಕಿ.ಮೀ. ದೂರದಲ್ಲಿ ಭೀಮಸೇನನು ಎಸೆದ ಕÇÉೊಂದಿದ್ದು, ಅವನದನ್ನು ಗಾಯಗೊಳಿಸಿದರೆ ಕಲ್ಲಿನಿಂದ ರಕ್ತ ಸುರಿಯುತ್ತದೆ ಎಂದು ಹಿರಿಯರು ಹೇಳುತ್ತಾರೆ.

Advertisement

ದೇವಾಲಯವು ಮುಳುಗಿರುವ ಸಂದರ್ಭದಲ್ಲಿ ದೇವಾಲಯದ ಎಡಭಾಗದ ಗೋಪುರವನ್ನಷ್ಟೇ ಕಾಣಬಹುದಾಗಿದೆ. ದೇವಾಲಯವು ವರ್ಷದ ಎಂಟು ತಿಂಗಳುಗಳ ಕಾಲ ನೀರಿನಲ್ಲಿ ಮುಳುಗಿದ್ದರೂ ಸ್ವಲ್ಪವೂ ಶಿಥಿಲಗೊಳ್ಳದೇ ಬಣ್ಣವನ್ನು ಕಳೆದುಕೊಳ್ಳದೇ ಸದೃಢವಾಗಿರುವುದು ಆ ಕಾಲದ ವಾಸ್ತುಶಿಲ್ಪ ಶೈಲಿಯ ಗಟ್ಟಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಬಾತೂ ಕಿ ಲಡಿ ದೇವಾಲಯದ ದರ್ಶನಕ್ಕೆ ಹಿಮಾಚಲ ಪ್ರದೇಶದ ಧಮೇಟಾ ಮತ್ತು ನಗ್ರೋಟಾ ನಗರಗಳಿಂದ ಬೋಟ್‌ಗಳ ಮೂಲಕ ಮತ್ತು ಜವಳಿ ನಗರದಿಂದ ರಸ್ತೆ ಮಾರ್ಗದ ಮೂಲಕವೂ ಸಾಗಬಹುದಾಗಿದೆ. ಇಲ್ಲಿಗೆ ಸಮೀಪದÇÉೇ ಜವಾನ್‌ವಾಲಾ ರೈಲ್ವೇ ನಿಲ್ದಾಣ ಹಾಗೂ ಗಾಗ್ಗಲ್‌ ವಿಮಾನ ನಿಲ್ದಾಣಗಳಿವೆ. 

– ಸಂತೋಷ್‌ ರಾವ್‌ ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next