Advertisement
ನಿಜವಾಗಿಯೂ ಅಹಂ ಎಂಬುದು ಬಲು ದೊಡ್ಡ ಮರುಳು. ನಮ್ಮೊಳ ಗಿರುವ ಅಹಮಿಕೆಯ ಹುಚ್ಚಾಟಗಳನ್ನು ಕೇಳ ಬಹುದು, ನೋಡ ಬಹುದು. ತನ್ನಿಂದ ಎಲ್ಲವೂ ಸಾಧ್ಯ ಎಂಬು ದಾಗಿ ಅಹಂ ಭಾವಿಸುತ್ತದೆ. ತಾನು ಪ್ರಕೃತಿ ಯನ್ನು, ಜಗತ್ತನ್ನು, ದೇವರನ್ನು ಕೂಡ ಗೆಲ್ಲಬಲ್ಲೆ ಎಂಬುದು ಅಹಮಿಕೆಯ ಭಾವನೆ. ಅದು ಅಸೀಮ ಮಹತ್ವಾ ಕಾಂಕ್ಷಿ, ಮಹತ್ವಾ ಕಾಂಕ್ಷೆ ಹೆಚ್ಚಿದಷ್ಟು ಅದರ ಹುಚ್ಚಾಟಗಳು ಕೂಡ ಹೆಚ್ಚುತ್ತವೆ.
Related Articles
Advertisement
ಬುದ್ಧ ತನ್ನ ಬಲ ಹಸ್ತವನ್ನು ಮುಂದಕ್ಕೆ ಚಾಚಿದ. ಅದೊಂದು ಕಮಲದ ಎಲೆ ಯಂತೆ ಇತ್ತು. ಬುದ್ಧ ನೋಡುತ್ತಲೇ ಇದ್ದ; ಧನುಸ್ಸಿನಿಂದ ಬಿಟ್ಟ ಬಾಣದಂತೆ ಅತೀವ ವೇಗದಲ್ಲಿ ಮರ್ಕಟ ಆಕಾಶಕ್ಕೆ ನೆಗೆಯಿತು.
ಹಾರುತ್ತ ಹಾರುತ್ತ ಅದು ಆಕಾಶದ ಕೊನೆ ಎಂಬಷ್ಟು ಎತ್ತರಕ್ಕೆ ಸಾಗಿತು. ಅಲ್ಲಿ ಅದಕ್ಕೆ ಐದು ಗುಲಾಬಿ ವರ್ಣದ ಸ್ತಂಭಗಳು ಕಾಣಿಸಿದವು. “ಬಹುಷಃ ಸ್ವರ್ಗದ ದ್ವಾರ ಇದೇ ಇರಬಹುದು. ಇನ್ನು ಹಿಂದಕ್ಕೆ ಹಾರೋಣ’ ಎಂದು ಕೊಂಡ ಅದು ಇದ್ದುದರಲ್ಲಿ ಎತ್ತರದ ಸ್ತಂಭದ ತುದಿಯಲ್ಲಿ “ಕಪಿಗಳಲ್ಲಿಯೇ ಅತ್ಯಂತ ಸಾಮರ್ಥ್ಯಶಾಲಿ ಇಷ್ಟು ಎತ್ತರ ಹಾರಿದ್ದ’ ಎಂದು ಬರೆ ಯಿತು. ಅಷ್ಟೇ ಅಲ್ಲ, ತಿರಸ್ಕಾರ ಭಾವದಿಂದ ಅದೇ ಸ್ತಂಭದ ಬುಡದಲ್ಲಿ ಮೂತ್ರ ವಿಸರ್ಜಿ ಸಿತು. ಬಳಿಕ ಹಿಂದಕ್ಕೆ ಹಾರಿ ಬುದ್ಧನ ಬಲ ಹಸ್ತದ ಇನ್ನೊಂದು ಬದಿಯಲ್ಲಿ ಇಳಿಯಿತು.
“ನಾನು ಗೆದ್ದೆ ‘ ಎಂದಿತು ಕಪಿ. ಬುದ್ಧ ಮುಗುಳ್ನಗುತ್ತ ಹೇಳಿದ, “ನೀನು ನನ್ನ ಹಸ್ತ ದೊಳಗೆಯೇ ಇದ್ದೆ, ಎಲ್ಲೂ ಹೋಗಿರಲಿಲ್ಲ’.ಕಪಿ ಹೇಳಿತು, “ಇಲ್ಲಪ್ಪ, ನಾನು ಬಹಳ ಎತ್ತರಕ್ಕೆ ಹಾರಿದ್ದೆ. ಸ್ವರ್ಗದ ಪ್ರವೇಶದ್ವಾರದ ಸ್ತಂಭಗಳನ್ನು ಕಂಡುಬಂದಿದ್ದೇನೆ. ಅಲ್ಲಿ ಅದನ್ನು ದಾಖಲಿಸಿದ್ದೇನೆ’. ಬುದ್ಧ ನಗುತ್ತ ತನ್ನ ಬಲಹಸ್ತದ ನಡುಬೆರಳನ್ನು ತೋರಿಸಿದ. ಕಪಿ ಬರೆದ ಲೇಖ ಅದರ ತುದಿಯಲ್ಲಿತ್ತು, ಬುಡದಲ್ಲಿ ಮಂಗನ ಮೂತ್ರ ನಾತ ಬೀರುತ್ತಿತ್ತು. ನಮ್ಮ ಅಹಮಿಕೆಯ ಪ್ರತೀಕ ಇದೇ ಮಂಗ. ತಾನು ಎಲ್ಲವನ್ನೂ ಮಾಡಬಲ್ಲೆ ಎಂಬ ಸುಳ್ಳು ಅದರ ಜೀವಾಳ. ನಿಜ ವಾಗಿಯೂ ಅದರ ಸಾಮರ್ಥ್ಯವೇನು ಎಂಬುದರ ಅರಿವು ನಮ್ಮೆಲ್ಲರಲ್ಲೂ ಇದ್ದರೆ ಚೆಂದ. (ಸಾರ ಸಂಗ್ರಹ)