Advertisement

ಕೃಷಿ  ಬೆಳೆಗೆ ಮಾರಕವಾದ ಅಂತರಗಂಗೆಯನ್ನು ಬೇರ್ಪಡಿಸಲು ಯುವಕರ ಶ್ರಮ

04:00 AM Jul 10, 2017 | |

ಕೋಟ:  ಅಂತರಗಂಗೆ ಎಂದು ಕರೆಯಲಾಗುವ ಒಂದು ವಿಧದ ಪಾಚಿ ಸಸ್ಯವು ಕೃಷಿ ಬೆಳೆಗೆ ಮಾರಕವಾಗಿದ್ದು, ಕೋಟದ ಗಿಳಿಯಾರು ಸುತ್ತ-ಮುತ್ತ ನೂರಾರು ಎಕ್ರೆ ಕೃಷಿ ಭೂಮಿ ಇದರಿಂದಾಗಿ ಹಾನಿಗೊಳಗಾಗುತ್ತಿದೆ.

Advertisement

ನೆರೆ ನೀರಿನ ಜತೆಗೆ ಗದ್ದೆಗಳಿಗೆ ಲಗ್ಗೆ ಇಟ್ಟು  ಕೃಷಿ ಬೆಳೆಯನ್ನ ನಾಶ ಮಾಡುತ್ತದೆ.  ಹಲವಾರು ದಶಕಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಪರಿಹಾರ ಸಿಗದೆ ಕೃಷಿಕರು ಕಂಗೆಟ್ಟಿದ್ದಾರೆ ಹಾಗೂ ಸ್ಥಳೀಯಾಡಳಿತ  ಸೇರಿದಂತೆ ಹಲವು ಮಂದಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗದಿರುವುದರಿಂದ ಇದೀಗ ಸ್ಥಳೀಯ ಯುವಕರು ಒಟ್ಟಾಗಿ ಶ್ರಮದಾನದ ಮೂಲಕ ಇದನ್ನು   ಬೇರ್ಪಡಿಸಲು ಮುಂದಾಗಿದ್ದಾರೆ.

ಯುವಕರಿಂದ ಶ್ರಮದಾನ
ಗಿಳಿಯಾರು ಸೇತುವೆ ಸಮೀಪ ಹೊಳೆಯ ನೀರಿನಲ್ಲಿ  ನಿಂತಿದ್ದ  ಅಂತರಗಂಗೆಯನ್ನು  ಸ್ಥಳೀಯ ಮುಖಂಡರಾದ, ಸಾಲಿಗ್ರಾಮ ಪ.ಪಂ.  ಸದಸ್ಯ ಭೋಜ ಪೂಜಾರಿಯವರ ನೇತೃತ್ವದಲ್ಲಿ  ವಾರದ ಎರಡು-ಮೂರು ದಿನ ಶ್ರಮದಾನದ ಮೂಲಕ  ಇದನ್ನು ಬೇರ್ಪಡಿಸಲು ಯುವಕರ ತಂಡವೊಂದು ಶ್ರಮಿಸುತ್ತಿದೆ.

ಹಂಡಿಕೆರೆ  ರಾಘವೇಂದ್ರ ಶೆಟ್ಟಿ, ರವೀಂದ್ರ ಗಿಳಿಯಾರು, ರವಿ ಗಿಳಿಯಾರು,  ಬಾಬು  ಮರಕಾಲ ಹಣ್ಸೆಬೆಟ್ಟು, ರಾಘವೇಂದ್ರ ಗಿಳಿಯಾರು, ಮಹೇಶ  ಗಿಳಿಯಾರು, ಪ್ರದೀಪ್‌ ಶೆಟ್ಟಿ ಗುಲ್ವಾಡಿ, ಮುಂತಾದವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶ್ರಮದಾನದಲ್ಲಿ ತೊಡಗಿದ್ದಾರೆ.

ಒಟ್ಟಾರೆ ಕೃಷಿಕರ ತಲೆ ನೋವಿಗೆ ಕಾರಣವಾಗಿರುವ ಈ ಸಮಸ್ಯೆಗೆ ಶಾಶ್ವತ  ಪರಿಹಾರದ ಅಗತ್ಯವಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next