Advertisement
ಅವರು ಪಿ.ವಿ. ಐತಾಳರ 20ನೇ ಸಂಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಪಣಂಬೂರು ಕುಳಾಯಿಯ ಮಾಜಿ ಶಾಸಕ, ಖ್ಯಾತ ನಾಟಕಕಾರ, ಯಕ್ಷಗಾನ ಕಲಾವಿದರೂ ಆದ ಪಿ.ವಿ. ಐತಾಳರ ಬಗ್ಗೆ ಕರ್ಣಾಟಕ ಬ್ಯಾಂಕಿನ ಪಿ. ಜಯರಾಂ ಭಟ್ ಮಾತನಾಡಿ, ಐತಾಳರ ಮಕ್ಕಳೆಲ್ಲರೂ ಜತೆ ಸೇರಿ ತಂದೆಯವರ ಕಾರ್ಯಕ್ರಮ ನೆನಪಿನಲ್ಲಿ ಉಳಿಯುವಂತೆ ಮಾಡುವ ಮೂಲಕ ಯಕ್ಷಗಾನ ಸೇವಾ ಕೈಂಕರ್ಯವನ್ನು ಮುಂದುವರಿಸುತ್ತಿರುವುದು ಶ್ಲಾಘ ನೀಯ ಎಂದರು.
ಹಿರಿಯ ಕಲಾವಿದ ಉಮೇಶ್ ಶೆಟ್ಟಿ ನಿಡ್ಡೋಡಿ ಅವರಿಗೆ ವೆಂಕಟ ರತ್ನ ಪ್ರಶಸ್ತಿ, 20 ಸಾ.ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಕಲಾವಿದ ಕುರ್ನಾಡು ಶಿವಣ್ಣ ಆಚಾರ್ಯ ಅವರನ್ನು ಗೌರವಿಸಲಾಯಿತು. ಯಕ್ಷಗಾನ ಕಲಾವಿದ ಹರಿಪ್ರಸಾದ್ ಕಾರಂತ್ ಮತ್ತು ಬಳಗ ಪ್ರಾರ್ಥಿಸಿದರು. ಡಾ| ಪಿ. ಸತ್ಯಮೂರ್ತಿ ಐತಾಳರು ಸ್ವಾಗತಿಸಿದರು. ಕಾರ್ಯಕ್ರಮದ ಆಯೋಜಕ ಪಿ. ಸಂತೋಷ್ ಐತಾಳರು ಪ್ರಸ್ತಾವಿಸಿದರು. ಪಿ. ಸುರೇಶ್ ಐತಾಳ್ ವಂದಿಸಿದರು. ಶಂಕರನಾರಾಯಣ ಮೈರ್ಪಾಡಿ ನಿರ್ವಹಿಸಿದರು.
ಚೂಡಾಮಣಿ ಪ್ರಸಂಗದ ಕಲಾವಿದರಿಗೆ ಪಿ. ಶ್ರೀಧರ್ ಐತಾಳ್ ಅವರು ಸ್ಮರಣಿಕೆ ನೀಡಿದ ರು.