Advertisement

ತಂಬಾಕು ಸೇವನೆಯಿಂದ ದುಷ್ಪರಿಣಾಮ: ಡಾ|ಚಂದ್ರಶೇಖರ್‌ ಅಡಿಗ

11:56 PM May 31, 2019 | Sriram |

ಉಡುಪಿ: ತಂಬಾಕಿನಲ್ಲಿ 300ಕ್ಕೂ ಹೆಚ್ಚು ವಿಷಕಾರಿ ಅಂಶಗಳಿದ್ದು ತಂಬಾಕು ಸೇವನೆಯ ಪರಿಣಾಮ ನೇರ ವಾಗಿ ದೇಹದ ಪ್ರತಿಯೊಂದು ಪ್ರಮುಖ ಅಂಗದ ಮೇಲೆ ಪರಿಣಾಮ ಬೀರುತ್ತದೆ ಎಂದು ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ| ಚಂದ್ರಶೇಖರ್‌ ಅಡಿಗ ತಿಳಿಸಿದ್ದಾರೆ.

Advertisement

ಅವರು ಶುಕ್ರವಾರ ಜಿಲ್ಲಾ ಆರೋಗ್ಯ ಇಲಾಖೆ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಅಸ್ಪತ್ರೆ, ಎನ್‌.ಟಿ.ಸಿ.ಪಿ ಮತ್ತು ಎನ್‌.ಪಿ.ಸಿ.ಡಿ.ಸಿ.ಎಸ್‌ ವಿಭಾಗ, ದಂತ ವೈದ್ಯಕೀಯ ವಿಭಾಗ, ಭಾರತೀಯ ವೈದ್ಯಕೀಯ ಮಂಡಳಿ ಕರಾವಳಿ, ಭಾರತೀಯ ದಂತ ವೈದ್ಯಕೀಯ ಮಂಡಳಿ, ರೋಟರಿ ಕ್ಲಬ್‌ ಅಂಬಲಪಾಡಿ ಉಡುಪಿ ಇವುಗಳ ಸಹಯೋಗದೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ತಂಬಾಕು ಸೇವನೆ ವಿರುದ್ಧ ಜಾಗೃತಿ ಜಾಥಾ ಮತ್ತು ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಯಿ ಕ್ಯಾನ್ಸರ್‌ ಗುಣಪಡಿಸಬಹುದು
ಬಾಯಿ ಕ್ಯಾನ್ಸರ್‌ ಅನ್ನು ಮೊದಲ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಶೇ. 90 ಗುಣಪಡಿಸ ಬಹುದು. ನಾಲ್ಕನೇ ಹಂತದಲ್ಲಿ ಕ್ಯಾನ್ಸರ್‌ ಪತ್ತೆ ಹಚ್ಚಿದಲ್ಲಿ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಬಾಯಿ ಕ್ಯಾನ್ಸರ್‌ಗೆ ಸರ್ಜರಿ, ರೇಡಿಯೇಶನ್‌, ಕಿಮೋಥೆರಪಿ ಚಿಕಿತ್ಸೆಗಳಿದ್ದು ಸರ್ಜರಿ ಮೂಲಕ ಸಂಪೂರ್ಣ ಗುಣಪಡಿಸಬಹುದು ಎಂದರು.

ಸರಕಾರವು ತಂಬಾಕು ನಿಷೇಧಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ, ಧೂಮಪಾನ ನಿಷೇಧ ಹಾಗೂ ತಂಬಾಕು ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ, ತಂಬಾಕು ಸೇವನೆ ಪ್ರಚೋದಿಸುವ ಜಾಹೀರಾತು ನಿಷೇಧಕ್ಕೆ ಬಹಳಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ಒಂದೊಂದು ಘೋಷವಾಕ್ಯದೊಂದಿಗೆ ತಂಬಾಕು ರಹಿತ ದಿನಾಚರಣೆಯನ್ನು ಆಚರಿಸುತ್ತದೆ. ಈ ವರ್ಷ ಶ್ವಾಸಕೋಶದ ಆರೋಗ್ಯಕ್ಕೆ ಮಹತ್ವವನ್ನು ನೀಡಲಾಗಿದೆ ಎಂದರು.

ಮಕ್ಕಳು ಬಲಿ: ಕಳವಳ
ತಂಬಾಕು ಸೇವನೆ ಬಹುದೊಡ್ಡ ಸಮಸ್ಯೆಯಾಗಿದ್ದು ಇದಕ್ಕೆ ಹೆಚ್ಚಾಗಿ ಬಲಿಯಾಗು ತ್ತಿರುವವರು 15ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು. ಇದು ಬಹಳ ಅಪಾಯಕಾರಿ. ಮೋಜು, ಮಸ್ತಿಗಾಗಿ ಆರಂಭವಾಗಿ ಅದೊಂದು ಚಟವಾಗಿ ಪರಿವರ್ತನೆ ಯಾಗುತ್ತದೆ. ತಂಬಾಕು ಸೇವನೆಗೆ ಇತ್ತೀಚೆಗೆ ಯುವಜನತೆ ಹೆಚ್ಚಾಗಿ ಬಲಿ ಯಾಗುತ್ತಿದ್ದು ತಂಬಾಕು ಸುಲಭವಾಗಿ ಸಿಗದಂತೆ ಮಾಡಬೇಕು ಎಂದರು.

Advertisement

ಮುಖ್ಯ ಅತಿಥಿಯಾಗಿದ್ದ ಅಂಬಲ ಪಾಡಿ ರೋಟರಿ ಕ್ಲಬ್‌ ಅಧ್ಯಕ್ಷ ಖಲೀಲ್ ಅಹ್ಮದ್‌ ಮಾತನಾಡಿ, ತಂಬಾಕು ರಹಿತ ದಿನಾಚರಣೆಯು ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಪ್ರತಿನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಸೇವನೆ ಮಾಡುವುದು ಕಂಡುಬಂದಲ್ಲಿ ತಂಬಾಕು ಸೇವನೆ ಮಾಡಿದವರಿಗೆ ಮಾತ್ರವಲ್ಲದೆ ಅವರ ಸಮೀಪವಿರುವರಿಗೂ ಕಾಯಿಲೆ ಬರುವ ಸಾಧ್ಯತೆ ಇರುವುದರಿಂದ ಖಂಡಿಸಬೇಕು ಎಂದು ಹೇಳಿದರು.

ಭಾರತೀಯ ದಂತ ವೈದ್ಯಕೀಯ ಸಂಘ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ| ಮನೋಜ್‌ ಮ್ಯಾಕ್ಸಿಮ್‌ ಡಿ. ಲೀಮಾ ಮಾತನಾಡಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಬಾಯಿಯ ಕ್ಯಾನ್ಸರ್‌ ಕುರಿತು ಅರಿವು ಮೂಡಿಸಬೇಕು. ಕ್ಯಾನ್ಸರ್‌ನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಸಂಪೂರ್ಣವಾಗಿ ಗುಣ ಪಡಿಸಬಹುದು ಎಂದು ಹೇಳಿದರು.

ಮಣಿಪಾಲ ದಂತ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಓರಲ್ ಕ್ಯಾನ್ಸರ್‌ ಸ್ಪೆಷಲಿಷ್ಟ್ ಡಾ| ಆದರ್ಶ ಕುಡ್ವ ತಂಬಾಕಿನ ದುಷ್ಪರಿಣಾಮ ಮತ್ತು ಓರಲ್ ಕ್ಯಾನ್ಸರ್‌ ಕುರಿತು ಉಪನ್ಯಾಸ ನೀಡಿದರು. ತಂಬಾಕಿನಿಂದ ಆಗುವ ದುಷ್ಪರಿಣಾಮದ ಕುರಿತು ಕಿರು ಬೀದಿ ನಾಟಕ ನಡೆಯಿತು.

ಬೋರ್ಡ್‌ ಹೈಸ್ಕೂಲ್ನಿಂದ ಜಿಲ್ಲಾಸ್ಪತ್ರೆಯವರೆಗೆ ತಂಬಾಕು ಮತ್ತು ಶ್ವಾಸಕೋಶದ ಕಾಯಿಲೆಗಳು ಎಂಬ ಘೋಷವಾಕ್ಯದೊಂದಿಗೆ ನಡೆದ ಜಾಥಾಕ್ಕೆ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ಪ್ರಶಾಂತ್‌ ಭಟ್ ಚಾಲನೆ ನೀಡಿದರು.

ಉಡುಪಿ ತಾಲೂಕು ಆರೋಗ್ಯಾಧಿಕಾರಿ (ಪ್ರಭಾರ) ಡಾ| ಸುರೇಶ್‌ ನಾಯಕ್‌ ಕಾರ್ಯಕ್ರಮ ಉದ್ಘಾಟಿಸಿದರು. ಭಾರತೀಯ ವೈದ್ಯಕೀಯ ಮಂಡಳಿ ಸದಸ್ಯ ಶಶಿಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು. ಆಪ್ತ ಸಮಾಲೋಚಕಿ ಕೃತಿ ಸ್ವಾಗತಿಸಿ ಮನು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next