Advertisement

ಕೊಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ತರಬೇತಿ

03:33 PM Mar 28, 2017 | Team Udayavani |

ಕಲಬುರಗಿ: ಜಿಲ್ಲಾ ತಂಬಾಕು ನಿಷೇಧ ಕೋಶದಿಂದ ರಾಷ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ತಂಬಾಕು ನಿಷೇಧ ಕೋಶ ಕಲಬುರಗಿಯಲ್ಲಿ ಕೊಟ್ಪಾ ಕಾಯ್ದೆ-2003ರ ಅನ್ವಯ ಪರಿಣಾಮಕಾರಿ ಅನುಷ್ಠಾನ, ಸಾಮರ್ಥ್ಯ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಕುರಿತು ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ಸಹಾಯಕರು ಮತ್ತು ಕ್ಷೇತ್ರ ಆರೋಗ್ಯ ಅಧಿಕಾರಿಗಳಿಗಾಗಿ ಕಲಬುರಗಿ ವಿಭಾಗಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿತ್ತು. 

Advertisement

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಎ.ಎಸ್‌. ರುದ್ರವಾಡಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು. ಎಚ್‌ಸಿಜಿ ಕ್ಯಾನ್ಸ್‌ರ ಆಸ್ಪತ್ರೆ ಕ್ಯಾನ್ಸರ್‌ ತಜ್ಞ ವೈದ್ಯ ನಂದೀಶ ಕುಮಾರ ತಂಬಾಕು, ಧೂಮಪಾನ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ವಿಷಯದ ಕುರಿತು ಮಾತನಾಡಿದರು. 

ಜಿಲ್ಲಾ ಆಸ್ಪತ್ರೆಯ ಕ್ಲಿನಿಕಲ್‌ ಸೈಕಾಲಾಜಿಸ್ಟ್‌ ರೇಣುಕಾ ಬಗಾಲೆ ಅವರು ತಂಬಾಕು ಸೇವನೆಯ ವಿಧಗಳು ಹಾಗೂ ತಂಬಾಕು ಬಿಡುವುದರಿಂದ ಆಗುವ ಲಾಭಗಳ ಕುರಿತು ಮಾತನಾಡಿದರು. ಅದೇ ರೀತಿಯಾಗಿ ಕೊಟ್ಪಾ ಕಾಯ್ದೆ-2003ರ ಕುರಿತು ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾ ಸಲಹೆಗಾರ್ತಿ ಸುಜಾತಾ ಪಾಟೀಲ ಮಾತನಾಡಿದರು. ಗಣೇಶ ಚಿನ್ನಾಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಬಿ. ನಂದಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next