ಮುಂಬಯಿ: “ಕೇವಲ ವಿಪಕ್ಷಗಳ ಮೇಲೆ ಆರೋಪ ಮಾಡುವುದ ರಿಂದ ಆರ್ಥಿಕತೆ ಹಳಿಗೆ ಬರುವುದಿಲ್ಲ. ಕೇಂದ್ರ ಸರಕಾರವು ಪ್ರತಿ ಪಕ್ಷಗಳನ್ನು ದೂರುವುದರಲ್ಲೇ ನಿರತವಾ ಗಿರುವ ಕಾರಣ, ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅದಕ್ಕೆ ಸಾಧ್ಯವಾಗುತ್ತಿಲ್ಲ.’
ಹೀಗೆಂದು ಹೇಳಿರುವುದು ಮಾಜಿ ಪ್ರಧಾನಿ ಡಾ.| ಮನಮೋಹನ್ ಸಿಂಗ್. ಮುಂಬಯಿನಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. “ಡಾ| ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ, ರಘುರಾಂ ರಾಜನ್ ಆರ್‌ಬಿಐ ಗವರ್ನರ್ ಆಗಿದ್ದಾಗ ದೇಶದ ಬ್ಯಾಂಕುಗಳು ಕೆಟ್ಟ ದಿನಗಳನ್ನು ಅನುಭವಿಸಿದವು’ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಸಿಂಗ್ ತಿರುಗೇಟು ನೀಡಿದ್ದಾರೆ.
ಆರಂಭದಲ್ಲಿ, “ನಿರ್ಮಲಾ ಹೇಳಿಕೆಗೆ ನಾನು ಪ್ರತಿ ಕ್ರಿಯಿಸುವುದಿಲ್ಲ’ ಎಂದು ಹೇಳಿದ ಮಾಜಿ ಪಿಎಂ ಸಿಂಗ್, ಅನಂತರ ಸರಕಾರದ ನೀತಿಗಳನ್ನು ಟೀಕಿಸುತ್ತಾ, ನಿರ್ಮಲಾ ಹೇಳಿಕೆಗೂ ಪ್ರತ್ಯುತ್ತರ ಕೊಟ್ಟರು.
“ಜನ ಕೇಂದ್ರಿತ ನೀತಿಗಳನ್ನು ಜಾರಿ ಮಾಡುವಲ್ಲಿ ಸರಕಾರ ವಿಫಲವಾಗಿರುವುದು, ನಿರ್ಮಲಾ ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತಿದೆ. ಬಿಕ್ಕಟ್ಟಿನಲ್ಲಿರುವ ಆರ್ಥಿಕತೆ ಯನ್ನು ಸರಿಪಡಿಸಬೇಕೆಂದರೆ, ಮೊದಲು ಸರಕಾರ ಆ ಸಮಸ್ಯೆಯ ಮೂಲ ಮತ್ತು ಕಾರಣವನ್ನು ಪತ್ತೆ ಹಚ್ಚ ಬೇಕು. ಆದರೆ, ಸರಕಾರ ಮಾತ್ರ ವಿಪಕ್ಷಗಳನ್ನು ಹಳಿ ಯು ವುದರಲ್ಲೇ ಕಾಲಹರಣ ಮಾಡುತ್ತಿದೆ. ಹೀಗಾಗಿ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ’ ಎಂದು ಸಿಂಗ್ ಹೇಳಿದರು.
ಪಿಎಂಸಿ ಬ್ಯಾಂಕ್ ಹಗರಣ ಕುರಿತೂ ಮಾತನಾಡಿದ ಅವರು, ಕೇಂದ್ರ ಸರಕಾರ ಮತ್ತು ಆರ್‌ಬಿಐ ಕೂಡಲೇ 16 ಲಕ್ಷ ಠೇವಣಿದಾರರಿಗೆ ನ್ಯಾಯ ಒದಗಿಸ ಬೇಕು. ಸರಕಾರದ ಕೆಟ್ಟ ನೀತಿಗಳು ಭಾರತೀಯರ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಮಹಾರಾಷ್ಟ್ರದಲ್ಲಿ ಅನೇಕ ಫ್ಯಾಕ್ಟರಿಗಳು ಬಾಗಿಲು ಮುಚ್ಚಿವೆ, ನಿರುದ್ಯೋಗ ತಾಂಡವವಾಡುತ್ತಿದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳು ತ್ತಿದ್ದಾರೆ ಎಂದೂ ಸಿಂಗ್ ಆರೋಪಿಸಿದರು.
370ನೇ ವಿಧಿಗೆ ಕಾಂಗ್ರೆಸ್ ಬೆಂಬಲ: 370ನೇ ವಿಧಿ ರದ್ದು ವಿಧೇಯಕದ ಪರವೇ ಕಾಂಗ್ರೆಸ್ ಮತ ಚಲಾಯಿಸಿದೆ. ಆದರೆ, ಇದೊಂದು ತಾತ್ಕಾಲಿಕ ಕ್ರಮ ಎಂದು ನಾವು ಭಾವಿಸುತ್ತೇವೆ. ಬದಲಾವಣೆ ತರ ಬೇಕೆಂದರೆ, ಅದು ಕಾಶ್ಮೀರದ ಜನರ ಸದ್ಭಾವನೆ ಯೊಂದಿಗೆ ತರಬೇಕು ಎಂದ ಸಿಂಗ್, ಬಿಜೆಪಿ ಮತ್ತು ಆರೆಸ್ಸೆಸ್‌ನಿಂದ ಕಾಂಗ್ರೆಸ್ ದೇಶಭಕ್ತಿಯ ಪ್ರಮಾಣಪತ್ರ ಪಡೆಯಬೇಕಾಗಿಲ್ಲ ಎಂದರು.