ಮುಂಡರಗಿ: ತಾಲೂಕಿನ ಬರದೂರು ಗ್ರಾಮದಲ್ಲಿ ಮಕ್ಕಳು, ಹಿರಿಯರು ಮಣ್ಣೆತ್ತಿನ ಅಮಾವಾಸ್ಯೆಯಂಗವಾಗಿ ಮಣ್ಣಿನ ಎತ್ತುಗಳನ್ನು ತಯಾರಿಸಿ ಮನೆ-ಮನೆಗೆ ತೆರಳಿ ಭಕ್ತಿಯಿಂದ ಧಾನ್ಯ, ಹಣವನ್ನು ಸ್ವೀಕರಿಸಿದರು. ಹೀಗೆ ಎಲ್ಲೆಡೆ ಮೆರವಣಿಗೆ ನಡೆಯಿತು. ನಂತರ ಪೂಜೆ ಸಲ್ಲಿಸಿ ಮಣ್ಣೆತ್ತುಗಳನ್ನು ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು.
Advertisement
ಅಲ್ಲದೇ ಪ್ರತಿ ಗ್ರಾಮದಲ್ಲೂ ಮಣ್ಣಿನ ಎತ್ತುಗಳ ಮೂರ್ತಿ ತಯಾರಿಸಿ ಮೆರವಣಿಗೆ ಮಾಡಿ ಭಕ್ತಿ ಪ್ರದರ್ಶಿಸಲಾಯಿತು.
ಜಲಾಶಂಕರನಿಗೆ ವಿಶೇಷ ಪೂಜೆ:
ಮಣ್ಣೆತ್ತಿನ ಅಮಾವಾಸೆ ಅಂಗವಾಗಿ ಮಂಗಳವಾರ ತಾಲೂಕಿನ ನಾಗಾವಿ ತಾಂಡದ ಬಳಿಯಿರುವ ಜಲಾಶಂಕರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಗ್ಗೆ ಜಲಾಶಂಕರ ಮೂರ್ತಿಗೆ ರುದ್ರಾಭಿಷೇಕ, 1008 ಬಿಲ್ವಾರ್ಚನೆ, ಮಂಗಳಾರತಿ ನಂತರ ಮಹಾಪ್ರಸಾದ ವಿತರಿಸಲಾಯಿತು. ಜಲಶಂಕರ ಅರ್ಚಕ ಮಲ್ಲಯ್ಯಸ್ವಾಮಿ ಅಂಗಡಿ ಹಿರೇಮಠ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಗ್ರಾಮದ ಪ್ರಮುಖರಾದ ಶೇಖರ ಪವಾರ, ರಮೇಶ ಚವ್ಹಾಣ, ಲೋಕೇಶ ಪವಾರ, ಅರ್ಜನ ರಾಠೊಡ, ಉಲ್ಲಾಸ ಚವಡಿಮನಿ, ಶೇಖರ ಚವ್ಹಾಣ, ಲಕ್ಷ್ಮಣ ಪವಾರ, ಪ್ರಕಾಶ ಚವ್ಹಾಣ, ಲಾಲಪ್ಪ ಚವ್ಹಾಣ, ಪಾಂಡು ಲಮಾಣಿ, ಕುಮಾರ ಚವ್ಹಾಣ, ಉಮೇಶ ಪವಾರ, ರವಿ ಚವ್ಹಾಣ, ಸುರೇಶ ಭೋಜಪ್ಪ ಗುಡಿಮನಿ, ತುಳಸಪ್ಪ ಪವಾರ, ಶಂಭುಲಿಂಗಯ್ಯ ಕಲ್ಮಠ, ಶ್ರೀಕಾಂತಸಾ ಮೇರವಾಡೆ, ರಾಘವೇಂದ್ರಸಾ ಮೇರವಾಡೆ, ಶಾಂತಬಾಯಿ ಮಾಳಗಿಮನಿ, ಪ್ರಕಾಶ ಕಮ್ಮಾರ, ವೀರಪ್ಪ ಕಮ್ಮಾರ ಇದ್ದರು.