Advertisement

ದುರ್ಗಾದೇವಿ-ಮೃತ್ಯುಂಜಯ ಮೂರ್ತಿ ವಿಸರ್ಜನೆ

06:14 PM Dec 10, 2021 | Team Udayavani |

ರಾಣಿಬೆನ್ನೂರ: ನಗರ ಹೊರವಲಯದ ಲ್ಲಿರುವ ಹಿರೇಮಠದ ಶನೇಶ್ವರ ಸ್ವಾಮಿ ಮಂದಿರದ 9ನೇ ವಾರ್ಷಿಕೋತ್ಸವ, ಲೋಕ ಕಲ್ಯಾಣಾರ್ಥ ಹಾಗೂ ಪ್ರದೇಶಾ ಭಿವೃದ್ಧಿಗಾಗಿ 384 ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಪೂಜೆಗೊಂಡ ದುರ್ಗಾದೇವಿ ಮತ್ತು ಮೃತ್ಯುಂಜಯರ ಮಣ್ಣಿನ ಮೂರ್ತಿಗಳನ್ನು ಮೆರವಣಿ ಗೆಯಲ್ಲಿ ಕೊಂಡೊಯ್ದು ಕುದರಿಹಾಳ ಬಳಿಯ ತುಂಗಭದ್ರ ನದಿಯಲ್ಲಿ ವಿಸರ್ಜಿಸಲಾಯಿತು.

Advertisement

ಬುಧವಾರ ರಾತ್ರಿ ಸಕಲ ವಾದ್ಯಮೇಳ, ಭಜನೆಯೊಂದಿಗೆ ಮೆರವಣಿಗೆ ಮೂಲಕ ಕೊಂಡೊಯ್ದು ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು. ಶನೇಶ್ವರ ಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದುರ್ಗಾ ಮೂರ್ತಿ ಯಿಂದ ಒಟ್ಟು 6ಲಕ್ಷ ಜಪ, ಮೃತ್ಯುಂಜಯ ಮೂರ್ತಿಯಿಂದ 16ಲಕ್ಷ ಮಂತ್ರ, ಮಹಾಮೃತ್ಯುಂಜಯದಿಂದ 1ಕೋಟಿ ಜಪಗಳನ್ನು ಭಕ್ತರಿಂದ ಮಾಡಿಸಲಾಗಿತ್ತು.

ಮೂರ್ತಿಗಳ ವಿಸರ್ಜನೆಗೂ ಮೊದಲು ಎರಡೂ ಮೂರ್ತಿಗಳಿಗೆ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಈ ವೇಳೆ ಮಾತನಾಡಿದ ಮಂದಿರದ ಶಿವಯೋಗಿ ಶಿವಚಾರ್ಯ ಮಹಾಸ್ವಾಮಿಗಳು, ಕಳೆದ 393 ದಿನಗಳಿಂದ ಪ್ರತಿದಿನ ನಡೆಯುತ್ತಿದ್ದ ಮೂರ್ತಿಗಳ ಪೂಜೆ ಇಂದಿಗೆ ಕೊನೆಗೊಂಡಿದ್ದು ಮನಸ್ಸಿಗೆ ನೋವಾಗಿದೆ. ಆದರೂ ಪ್ರತಿಷ್ಠಾಪನೆ ಸಂದರ್ಭದಲ್ಲಿ ಈ ಮೂತಿಗಳನ್ನು ಹೇಗೆ ಸ್ವಾಗತಿಸಲಾಗಿತ್ತೋ ಹಾಗೆಯೇ ಇದೀಗ ಅಂತಿಮ ವಿ ವಿಧಾನಗಳನ್ನು ನೆರವೇರಿಸಿ ವಿಸರ್ಜನೆ ಮಾಡುವುದು ಅನಿವಾರ್ಯ ವಾಗಿದೆ ಎಂದು ತಿಳಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಎಸ್‌ಎಸ್‌ ರಾಮಲಿಂಗಣ್ಣನವರ, ಬಸವರಾಜ ಸವಣೂರ, ರವೀಂದ್ರಗೌಡ ಪಾಟೀಲ, ಸಿದ್ದಪ್ಪ ಚಿಕ್ಕಬಿದರಿ, ಡಿಳ್ಳೆಪ್ಪ ಸತ್ಯಪ್ಪನವರನ ಸೇರಿದಂತೆ ಸಮಿತಿಯ ಸದಸ್ಯರುಗಳು, ಶಾಸ್ರಿ¤ಗಳು, ಪಾಠಶಾಲೆ ವಟುಗಳು, ಮಹಿಳೆಯರು ಭಕ್ತರು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next