Advertisement
ಪಟ್ಟಣದ ಪುರಸಭೆ ಸಭಾಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪುರಸಭೆ ಸದಸ್ಯರಾದ ರಮೇಶ ಕಲ್ಲೂರ್, ಅನಿಲ ಪಲ್ಲರಿ, ಎಸ್.ಎ ಬಾಸಿದ್, ಅಪ್ಸರ್ ಮಿಯ್ನಾ, ರಾಜರೆಡ್ಡಿ, ಅಬ್ದುಲ್ ಗೋರೆಮಿಯ್ನಾ, ವೀರೇಶ ಸೀಗಿ ಸೇರಿದಂತೆ ಇತರೆ ಸದಸ್ಯರು, ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಂಡಿದೆ ಎಂದು ಈ ಹಿಂದಿನ ಪುರಸಭೆ ಅಧಿಕಾರಿ ಕಾಮಗಾರಿ ಹಸ್ತಾಂತರ ಪತ್ರಕ್ಕೆ ಸಹಿ ಹಾಕಿದ್ದಾರೆ. ಅಲ್ಲದೆ, ಜಿಲ್ಲಾಧಿಕಾರಿಗಳಿಗೆ ಬೆಂಗಳೂರಿನ ಕಚೇರಿಗೆ ಹಸ್ತಾಂತರ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.
Related Articles
Advertisement
92 ಹುದ್ದೆ ಖಾಲಿ: ಪುರಸಭೆಯಲ್ಲಿ ಒಟ್ಟಾರೆ 134 ಹುದ್ದೆಗಳು ಹೊಂದಿದ್ದು, ಈ ಪೈಕಿ 42 ಹುದ್ದೆಗಳು ಮಾತ್ರ ಭರ್ತಿ ಇವೆ. 92 ಹುದ್ದೆಗಳು ಖಾಲಿ ಇರುವ ಕಾರಣ ವಿವಿಧ ಕೆಲಸ ಕಾರ್ಯಕ್ಕೆ ಸಮಸ್ಯೆ ಉಂಟಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದರು.
ಇದಕ್ಕೆ ಪುರಸಭೆ ಸದಸ್ಯ ಸುನೀಲ ಪಾಟೀಲ ಮಾತನಾಡಿ, ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಪುರಸಭೆಯ ಸರ್ವ ಸದಸ್ಯರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಬೇಕು. ಕೂಡಲೇ ಖಾಲಿ ಹುದ್ದೆಗಳ ಅವಶ್ಯಕತೆ ಹೆಚ್ಚಿರುವ ಕಾರಣ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸುವಂತೆ ಮನವಿ ಮಾಡಬೇಕು ಎಂದು ತಿಳಿಸಿದರು. ಇದಕ್ಕೆ ಸರ್ವ ಸದಸ್ಯರು ಕೂಡ ಧ್ವನಿಗೂಡಿಸಿದರು. ಕೂಡಲೇ ಜಿಲ್ಲಾಧಿಕಾರಿಗಳ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸೋಣ ಎಂದು ತೀರ್ಮಾನಿಸಿದರು.