Advertisement
ಕಾಮನಕೇರಿಯಲ್ಲಿ ಅಖೀಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಗ್ರಾಮ ಘಟಕ ಹಾಗೂ ಹಂಡೆವಜೀರ ಕುಲತಿಲಕ ವೀರ ಅರಸ ಹನುಮಪ್ಪ ನಾಯಕನ ವೃತ್ತ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ತಯಾರು ಮಾಡಿ ಇತಿಹಾಸ ಪುಟಗಳಲ್ಲಿ ದಾಖಲೆ ಬರೆಯಲು ಹಂಡೆವಜೀರ ಸಮಾಜದ ಕೊಡುಗೆಂದಿಗೂ ಮರೆಯಲು ಸಾಧ್ಯವಿಲ್ಲ. ಸುಮಾರು 316 ವರ್ಷಗಳ ಕಾಲ ಆಳಿದ ಹಂಡೆ ಪಾಳೆಗಾರರು ಉದಾರ ನೀತಿ ಪರೋಪಕಾರಿ ಕಾರ್ಯಗಳಿಂದ ಈ ಅರಸರು ವೀರಶೈವ ಧರ್ಮದವರಾಗಿದ್ದರೂ ಇತರ ಧರ್ಮಗಳನ್ನು ಗೌರವಿಸಿ ಕರ್ನಾಟಕದ ಪಾಳೆಗಾರರಲ್ಲಿ ಐತಿಹಾಸಿಕ ಕೀರ್ತಿ ಗೌರವಗಳನ್ನು ಗಳಿಸಿದ್ದಾರೆ ಎಂದರು.
Related Articles
Advertisement
ಇಂಗಳೇಶ್ವರದ ವಚನಶಿಲಾ ಮಂಟಪದ ಚನ್ನಬಸವೇಶ್ವರ ಸ್ವಾಮೀಜಿ ಮಾತನಾಡಿ, ಬಸವನಾಡಿನಲ್ಲಿ ಅನೇಕ ಶರಣರು ಸತ್ಪುರುಷರು ಆಗಿ ಹೋಗಿದ್ದಾರೆ. ಅವರು ನಡೆದ ಹಾದಿಯಲ್ಲಿ ನಡೆಯಬೇಕಾಗಿದ್ದು ಮಾತ್ರ ನಮ್ಮ ಕೆಲಸವಾಗಿದೆ. ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಹಂಡೆವಜೀರ ಸಮಾಜದ ಹನುಮಪ್ಪ ನಾಯಕ ಜನಿಸಿ ಅನೇಕ ಚರ್ಕವರ್ತಿಗಳ ಪ್ರೀತಿಗೆ ಪಾತ್ರರಾಗಿ ಕೊಡುಗೈ ದಾನಿಯಾದ ವಿಷಯ ಕೇಳಿ ಅಚ್ಚರಿಗೊಂಡೆ. ನಾಯಕನ ಚರಿತ್ರೆ ಸಮಾಜಕ್ಕೆ ತಿಳಿಸುವ ಕೆಲಸ ಮಾಡುತ್ತಿರುವ ಸಮಾಜದ ಬಂಧುಗಳ ಕಾರ್ಯ ಮೆಚ್ಚಬೇಕು. ಮುಂದಿನ ಪೀಳಿಗೆಗೆ ನಾಯಕನ ಇತಿಹಾಸ ತಲುಪಬೇಕಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ರಾಜುಗೌಡ ಪಾಟೀಲ ಮಾತನಾಡಿದರು. ಕಾಮನಕೇರಿ ಅರಳಚಂಡಿ ಯಲ್ಲಾಲಿಂಗೇಶ್ವರ ಮಠದ ಪರಮಾನಂದ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಗಂಗಾಧರ ಸ್ವಾಮೀಜಿ, ಬಸಯ್ಯ ಕಸ್ತೂರಿಮಠ, ಸುರೇಶಗೌಡಗೌಡ ಪಾಟೀಲ, ಜಿಲ್ಲಾ ಹಂಡೆವಜೀರ ಸಮಾಜದ ಅಧ್ಯಕ್ಷ ಹನುಮಂತರಾಯಗೌಡ ಬಿರಾದಾರ, ಶಂಕರಗೌಡ ಮ್ಯಾಗೇರಿ, ಪರಪ್ಪಗೌಡ ಬಿದಗೊಂಡ, ಎಂ.ಆರ್. ಪಾಟೀಲ, ಬಸಗೊಂಡಗೌಡ ಬಿರಾದಾರ, ಕಸಾಪ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ, ಸಮಾಜದ ತಾಲೂಕಾಧ್ಯಕ್ಷ ಶೇಖರಗೌಡ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಪುಗೌಡ ಪಾಟೀಲ, ಜಿಪಂ ಸದಸ್ಯ ಕಲ್ಲಪ್ಪ ಮಟ್ಟಿ, ಮನೋಹರಗೌಡ ಪಾಟೀಲ, ಶಂಕರಗೌಡ ಪಾಟೀಲ, ಮಲ್ಲಣ್ಣ ಖಾನಾಪುರ, ಚಂದ್ರಾಮ ಕುಂಬಾರ, ಸಾಹಿತಿ ಪ್ರಭಾಕರ ಇದ್ದರು. ಶಿವಣ್ಣ ಬಾಗೇವಾಡಿ ಪ್ರಾಸ್ತಾವಿಕ ಮಾತನಾಡಿದರು. ಮಲಕನಗೌಡ ಪಾಟೀಲ ಸ್ವಾಗತಿಸಿದರು. ಶಿವಕಾಂತ ಬಾಗೇವಾಡಿ ನಿರೂಪಿಸಿದರು. ಅವ್ವನಗೌಡ ಗೋತಗಿ ವಂದಿಸಿದರು.