Advertisement

ವೈದ್ಯರೇ ನನ್ನ ಪಾಲಿನ ದೇವರು

12:59 PM Apr 29, 2020 | mahesh |

ಮಂಡ್ಯ: ಕೋವಿಡ್ ಐಸೋಲೇಷನ್‌ ವಾರ್ಡ್‌ನಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೇ ನಿಜವಾದ ದೇವರು ಎಂದು ಕೋವಿಡ್ ಸೋಂಕಿನಿಂದ ಗುಣಮುಖರಾದ ನಗರದ ಸ್ವರ್ಣಸಂದ್ರ ಬಡಾವಣೆ ನಿವಾಸಿ ಪ್ರಶಂಸನೀಯ ಮಾತುಗಳನ್ನು ಆಡಿದರು. ನನಗೆ ಕೋವಿಡ್ ಬಂದದ್ದು ಅನಿರೀಕ್ಷಿತ. ಕ್ವಾರಂಟೈನ್‌ಗೆ ಒಳಗಾದೆ. ಆರಂಭದಲ್ಲಿ ಇದೊಂದು ವಿಚಿತ್ರ ಅನುಭವದಂತೆ ಕಾಣಿಸಿತು. ನನ್ನ ಜೊತೆ ನನ್ನ ತಂದೆ- ತಾಯಿ, ತಂಗಿ ಹಾಗೂ ಆಕೆಯ ಮಗಳಿಗೂ ಕ್ವಾರಂಟೈನ್‌ ಮಾಡಿದರು. ಸುತ್ತಮುತ್ತಲಿನ ಜನರೂ ತೊಂದರೆಗೊಳಗಾದರು. ಇದೆಲ್ಲವೂ ನನ್ನನ್ನು ಮಾನಸಿಕವಾಗಿ ಕುಗ್ಗಿಸಿದವು. ಐಸೋಲೇಷನ್‌ ವಾರ್ಡ್‌ಗೆ ದಾಖಲಾದ ಸಮಯದಲ್ಲಿ ಅಲ್ಲಿ ವೈದ್ಯರು ಸುರಕ್ಷಾ ಕವಚಗಳನ್ನು ಧರಿಸಿ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದರು. ಮಾನಸಿಕ ತಜ್ಞರು ಸೋಂಕಿತರ ಜೊತೆ ಕೌನ್ಸಿಲಿಂಗ್‌ ನಡೆಸುತ್ತಾ ಆತ್ಮಸ್ಥೈರ್ಯ ತುಂಬಿದರು. ಊಟ, ಚಿಕಿತ್ಸೆ, ಭದ್ರತೆಯಿಂದ ಹಿಡಿದು ನಮಗೆ ಯಾವುದೇ ಕೊರತೆಯಾಗದಂತೆ
ನೋಡಿಕೊಂಡರು.

Advertisement

ಏ.7ರಂದು ನನಗೆ ಕೋವಿಡ್ ಪಾಸಿಟೀವ್‌ ವರದಿ ಬಂತು. ಏ.8ಕ್ಕೆ ಆಸ್ಪತ್ರೆಗೆ ದಾಖಲಾದೆ. ಮರುದಿನದಿಂದ ಚಿಕಿತ್ಸೆ ಆರಂಭಿಸಿದರು. ಅಲ್ಲಿಂದ ಏಳನೇ ದಿನಕ್ಕೆ ರಕ್ತ ಪರೀಕ್ಷಿಸಿದರು. ಏ.20ಕ್ಕೆ ಮಲ- ಮೂತ್ರ, ರಕ್ತ, ಗಂಟಲು ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್‌ ಬಂದಿತು. ಮತ್ತೆ ಏ.23ರಂದು ಮೂಗು ಮತ್ತು ಗಂಟಲಿನ ದ್ರವವನ್ನು ತೆಗೆದು ಪರೀಕ್ಷೆಗೆ ಕಳುಹಿಸಿದರು. 24 ಗಂಟೆಯಲ್ಲಿ ಆ ವರದಿಯೂ ನೆಗೆಟಿವ್‌ ಬಂದಿತು. ಮರು ದಿನವೇ ನನ್ನನ್ನು ಬಿಡುಗಡೆ ಮಾಡಬೇಕಿದ್ದರೂ ಕೆಲವು ನಿಯಮಗಳನ್ನು ಪಾಲಿಸಬೇಕಿದ್ದರಿಂದ ಏ.28ರಂದು ಬಿಡುಗಡೆ ಮಾಡಿಡಿದ್ದಾರೆ. ಈಗ ಸಂಪೂರ್ಣ ಗುಣ ಮುಖನಾಗಿದ್ದೇನೆ ಎಂದರು. ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದ ನನ್ನನ್ನು ನನ್ನ ಬೀದಿಯ ನಿವಾಸಿಗಳು ಹೀರೋ ರೀತಿ ಸ್ವಾಗತಿಸಿದರು. ಬಡಾವಣೆಯ ನಿವಾಸಿಗಳ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ ಎಂದು ಆನಂದ ಬಾಷ್ಪ ಸುರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next