Advertisement

ಅಲ್ಪಸಂಖ್ಯಾತರ ಮುತವಲ್ಲಿ ಸಮಾವೇಶಕ್ಕೆ ಸಿಎಂ ಒಪ್ಪಿಗೆ

06:45 AM Aug 10, 2017 | |

ಬೆಂಗಳೂರು: ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ರಕ್ಷಣೆ, ನಿರ್ವಹಣೆ ಮತ್ತು ಅದರ ಸದ್ಬಳಕೆ, ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆ ಹಾಗೂ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಮಟ್ಟದ “ಮುತವಲ್ಲಿಗಳ’ ಸಮಾವೇಶನಡೆಸುವ ಮುಸ್ಲಿಂ ಧಾರ್ಮಿಕ ಮುಖಂಡರ ಇಂಗಿತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.

Advertisement

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಹಜ್‌ ಸಚಿವ ಆರ್‌. ರೋಷನ್‌ ಬೇಗ್‌ ನೇತೃತ್ವದಲ್ಲಿ ಭೇಟಿ ಮಾಡಿದ್ದ ಧಾರ್ಮಿಕ ಮುಖಂಡರ ನಿಯೋಗ, ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರ ಮತ್ತು ಸದಸ್ಯರ ಅಧಿಕಾರಾವಧಿ ಮುಗಿದು ಒಂದೂವರೆ ವರ್ಷ ಆಗಿದೆ.

ಆಡಳಿತಾಧಿಕಾರಿ ಮೂಲಕ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ. ಆದಷ್ಟು ಬೇಗ ಚುನಾವಣೆ ನಡೆಸುವಂತೆ ನಿಯೋಗವು ಮನವಿ ಮಾಡಿತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡರು. ಈ ಬಾರಿ ಗಣೇಶ ಚತುರ್ಥಿ ಹಾಗೂ ಬಕ್ರೀದ್‌ ಹಬ್ಬ ಜೊತೆಯಲ್ಲೇ ಬಂದಿದೆ. ಬಕ್ರೀದ್‌ ಬಲಿ ಅರ್ಪಿಸುವ ಜಾನುವಾರುಗಳ ಸಾಗಾಟ ಸಂದರ್ಭದಲ್ಲಿ ರಕ್ಷಣೆ ನೀಡಬೇಕೆಂದು ನಿಯೋಗ ಕೋರಿತು. ಇದಕ್ಕೆ ಮುಖ್ಯ ಮಂತ್ರಿಯವರು ಒಪ್ಪಿಕೊಂಡರು. ನಿಯೋಗದಲ್ಲಿ ಮುಹಮ್ಮದ್‌ ಅಶ್ರಫ್ ಅಲಿ, ಸೈಯದ್‌ ಮುಹಮ್ಮದ್‌ತನ್ವೀರ್‌ ಹಾಶ್ಮಿ, ಮೌಲಾನ ಹನೀಫ್ ಅಫ‌Õರ್‌ ಅಝೀಝಿ,ಮೌಲಾನ ಮಖೂÕದ್‌ ಇಮ್ರಾನ್‌ ರಶಾದಿ, ಮೌಲಾನ ಝೈನುಲ್‌ ಆಬಿದೀನ್‌ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next