Advertisement

Gadaga ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ಭೇದಿಸಿದ ಜಿಲ್ಲಾ ಪೊಲೀಸರು

03:16 PM Aug 14, 2024 | Team Udayavani |

ಗದಗ: ಕಳೆದ ಜನವರಿಯಿಂದ ಈವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳನ್ನು ಭೇದಿಸಿದ ಜಿಲ್ಲಾ ಪೊಲೀಸರು 30 ವಾಹನ ಕಳ್ಳತನ ಪ್ರಕರಣ, 48 ಮನೆ ಕಳ್ಳತನ ಪ್ರಕರಣ, 7 ಇತರೆ ಕಳ್ಳತನ ಪ್ರಕರಣ, 6 ಮೋಸ ವಂಚನೆ ಪ್ರಕರಣ ಹಾಗೂ ಮೊಬೈಲ್ ಕಳ್ಳತನ ಪ್ರಕರಣ ಸೇರಿ ಒಟ್ಟಾರೆ 91 ಪ್ರಕರಣಗಳನ್ನು ಭೇದಿಸಿದ್ದಾರೆ.

Advertisement

ಈ ಬಗ್ಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಗದಗ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 2.43 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಸಂಬಂಧಪಟ್ಟ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿಸಿದರು.

90 ಲಕ್ಷ ರೂ. ಮೌಲ್ಯದ 2.16 ಕೆಜಿ ಚಿನ್ನ, 5.5 ಲಕ್ಷ ರೂ. ಮೌಲ್ಯದ 8 ಕೆಜಿ ಬೆಳ್ಳಿ, 87 ಸಾಚಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

Advertisement

7.60 ಲಕ್ಷ ರೂ. ಮೌಲ್ಯದ 21 ದ್ವಿಚಕ್ರ ವಾಹನ, 16 ಲಕ್ಷ ರೂ. ಮೌಲ್ಯದ 3 ಟ್ರ್ಯಾಕ್ಟರ್, 7.35 ಲಕ್ಷ ರೂ. ಮೌಲ್ಯದ 5 ಟ್ರ್ಯಾಕ್ಟರ್ ಟ್ರೈಲರ್, 4.5 ಲಕ್ಷ ರೂ. ಮೌಲ್ಯದ ಬೊಲೆರೊ ಗೂಡ್ಸ್ ವಾಹನ ಪತ್ತೆ ಮಾಡಲಾಗಿದೆ ಎಂದರು.

ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಕಳ್ಳತನ ವಸ್ತುಗಳನ್ನು ಮೂಲ ಮಾಲೀಕರಿಗೆ ಮರಳುವಂತೆ ಮಾಡಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿಶೇಷ ಬಹುಮಾನ ಘೋಷಣೆ ಮಾಡಲಾಗಿದ್ದು, 91 ಪ್ರಕರಣಗಳ ಪೈಕಿ 112 ಜನ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next