Advertisement

ಹಾಲು ಉತ್ಪಾದನೆಯಲ್ಲಿ ಜಿಲ್ಲೆ ಸ್ವಾವಲಂಬಿಯಾಗಿ ಯಶಸ್ವಿ

11:19 PM Jun 02, 2019 | sudhir |

ಕಾಸರಗೋಡು: ಹಾಲು ಉತ್ಪಾದನೆ ವಲಯದಲ್ಲಿ ಕಾಸರಗೋಡು ಜಿಲ್ಲೆ ಸ್ವಾವಲಂಬಿಯಾಗಿ ಯಶಸ್ಸು ಕಂಡಿದೆ. ದಿನವೊಂದಕ್ಕೆ ಸರಾಸರಿ 68,127 ಲೀಟರ್‌ ಹಾಲು ಜಿಲ್ಲೆಯಲ್ಲಿ ಉತ್ಪಾದನೆಗೊಳ್ಳುತ್ತಿದೆ.

Advertisement

2016-17ರಲ್ಲಿ ಜಿಲ್ಲೆಯಲ್ಲಿ ಹಾಲು ಉತ್ಪಾದಕ ಸಂಘಗಳ ಮೂಲಕ ಸರಾ ಸರಿ 2,07,75,044 ಲೀಟರ್‌ ಹಾಲು ಉತ್ಪಾದಿಸಲಾಗುತ್ತಿತ್ತು. ಎಂದರೆ ದಿನ ವೊಂದಕ್ಕೆ 56,917 ಲೀ. ಹಾಲು. 2017-18ರಲ್ಲಿ ಸರಾಸರಿ 2,25,91,145 ಲೀ. ಹಾಲು ಉತ್ಪಾದಿಸಲಾಗಿತ್ತು. ಎಂದರೆ ದಿನಕ್ಕೆ 61,893 ಲೀಟರ್‌ ಹಾಲು. 2018-19ರಲ್ಲಿ ಸರಾಸರಿ 2,48,66,568 ಲೀಟರ್‌ ಹಾಲು ಜಿಲ್ಲೆಯಲ್ಲಿ ಉತ್ಪಾದನೆಗೊಳ್ಳುತ್ತಿದೆ. ಎಂದರೆ ದಿನಕ್ಕೆ 68,127 ಲೀಟರ್‌ ಹಾಲು.

ಹಾಲು ಅಭಿವೃದ್ಧಿ ಇಲಾಖೆ ಜಿಲ್ಲೆಯ ಈ ವಲಯದ ಏಳಿಗೆಯ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಹಾಲು ಉತ್ಪಾದನೆ ವಲಯದಲ್ಲಿ ನೂತನ ತಂತ್ರಜ್ಞಾನ ಕುರಿತು ಮಾಹಿತಿ ಒದಗಿಸುವ ಚಟುವಟಿಕೆಗಳು, ಹಾಲು ಉತ್ಪಾದಕ ಸಹಕಾರಿ ಸಂಘಗಳಿಗೆ ಆರ್ಥಿಕ ಸಹಾಯ ಇತ್ಯಾದಿ ಈ ಸಾಲಿಗೆ ಸೇರುತ್ತವೆ. ಹಾಲು ನೀಡುವ ಹಸುಗಳ ಹೆಚ್ಚಳ ಉದ್ದೇಶದಿಂದ ಮಿಲ್ಕ್ ಶೆಡ್‌ ಡೆವೆಲಪ್‌ಮೆಂಟ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ ಪರಪ್ಪ, ನೀಲೇಶ್ವರ, ಕಾಂಞಂಗಾಡ್‌ ಬ್ಲಾಕ್‌ಗಳಲ್ಲಿ ಎಂ.ಎಸ್‌.ಡಿ.ಪಿ. ಡೈರಿ ಝೋನ್‌ ಯೋಜನೆ, 2018-19ನೇ ಆರ್ಥಿಕ ವರ್ಷದಲ್ಲಿ ಪನತ್ತಡಿ ಗ್ರಾಮ ಪಂಚಾಯತ್‌ನಲ್ಲಿ ಹಾಲು ಗ್ರಾಮ ಯೋಜನೆ ಜಾರಿಗೊಳಿಸಲಾಗಿತ್ತು. ಇತರ ರಾಜ್ಯಗಳಿಂದ ಕಳೆದ ಮೂರು ವರ್ಷಗಳಿಂದ 848 ಹಸುಗಳನ್ನು, 365 ಕರುಗಳನ್ನು ಖರೀದಿಸಲಾಗಿದೆ.

ಹಾಲಿನ ಗುಣಮಟ್ಟ ಹೆಚ್ಚಿಸುವಿಕೆ, ಹಾಲು ಉತ್ಪಾದಕ ಸಂಘಗಳಲ್ಲಿ ಗುಣಮಟ್ಟ ತಪಾಸಣೆಯಲ್ಲಿ ನವೀನ ತಂತ್ರಜ್ಞಾನ ಬಳಸುವಿಕೆ, ಶುಚಿಯಾಗಿ ಹಾಲು ಬಳಸಿಕೊಳ್ಳುವ ರೀತಿ, ಕಡಿಮೆ ವೆಚ್ಚದಲ್ಲಿ ಅಧಿಕ ಹಾಲು ಉತ್ಪಾದಿಸುವ ರೀತಿ ಇತ್ಯಾದಿ ಅನುಷ್ಠಾನಗೊಳಿಸಲಾಗುತ್ತಿದೆ. ಸ್ಥಳೀ ಯಾಡಳಿತ ಸಂಸ್ಥೆಗಳ ಮೂಲಕ ಹಾಲು ಉತ್ಪಾದಕ ಸಂಘಗಳಲ್ಲಿ ಹಾಲು ಅಳತೆ ಮಾಡುವ ಕೃಷಿಕರಿಗೆ ಹಾಲಿನ ಮೌಲ್ಯವನ್ನು ಇಂಟೆನ್ಸೀವ್‌ ಆಗಿಯೂ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next