ದೊಡ್ಡಬಳ್ಳಾಪುರ: ಕೋವಿಡ್-19 ಸೋಂಕು ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಜಾರಿಗೊಳಿಸಿರುವ ಭಾನುವಾರ ಒಂದು ದಿನದ ಲಾಕ್‌ಡೌನ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶನಿವಾರ ರಾತ್ರಿ 8ರಿಂದ ಬೆಳಗ್ಗೆ 5ರವರೆಗೆ ತಾಲೂಕಿ ನಾದ್ಯಂತ ಕಪ್ಯೂ ವಿಧಿಸಲಾಗಿತ್ತು.
ನಗರದ ಕೊಂಗಾಡಿಯಪ್ಪ ಬಸ್ ನಿಲ್ದಾಣ, ತಾಲೂಕು ಕಚೇರಿ ವೃತ್ತ, ಮಾರುಕಟ್ಟೆ ಪ್ರದೇಶ, ಮಹಾತ್ಮ ಗಾಂಧಿ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ, ಬಸವ ಭವನದ ವೃತ್ತ, ಟಿಬಿ ವೃತ್ತ, ಡಿಕ್ರಾಸ್ ವೃತ್ತ ಸೇರಿದಂತೆ ನಗರದ ಬಹು ತೇಕ ಕಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ರಸ್ತೆಯಲ್ಲಿ ಸಂಚಾರ ವಿರಳ ವಾಗಿ, ಸದಾ ವಾಹನ ಸಂಚಾರದಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣ, ಮುಖ್ಯರಸ್ತೆ, ಡಿ.ಕ್ರಾಸ್, ಟಿ. ಬಿ.ವೃತ್ತ, ತಾಲೂಕು ಕಚೇರಿ ವೃತ್ತಗಳಲ್ಲಿ ವಾಹನ ಗಳ ಹಾಗೂ ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು.
ಪ್ರಯಾಣಿಕ ಆಟೋಗಳು ಅಲ್ಲೊಂದು, ಇಲ್ಲೊಂದು ಸಂಚರಿಸುತ್ತಿರುವುದು ಬಿಟ್ಟರೆ ಎಲ್ಲಾ ರೀತಿಯ ಪ್ರಯಾಣಿಕ ವಾಹನ ಸ್ಥಗಿತಗೊಂಡಿದ್ದವು. ಭಾನುವಾರವಾದ್ದರಿಂದ ನಗರದಲ್ಲಿ ನೇಕಾ ರಿಕೆಯೂ ಸಂಪೂರ್ಣ ಸ್ತಬ್ಧವಾಗಿತ್ತು. ಈಗಾಗಲೇ ಮಧ್ಯಾಹ್ನ 2 ಗಂಟೆ ನಂತರ ಅಂಗಡಿಗಳ ಲಾಕ್‌ಡೌನ್ ಇರುವುದರಿಂದ ಮಧ್ಯಾಹ್ನದ ನಂತರ ಇಡೀ ನಗರ ಸ್ತಬ್ಧಗೊಂಡಿತ್ತು. ತಾಲೂಕಿನ ಪ್ರಸಿದಟಛಿ ಘಾಟಿ ಸುಬ್ರಹ್ಮಣ್ಯ ದೇವಾ ಲಯ ಸೇರಿದಂತೆ ಪ್ರಮುಖ ದೇವಾ ಲಯಗಳನ್ನು ಬಂದ್ ಮಾಡಲಾಗಿತ್ತು. ಗುರು ಪೂರ್ಣಿಮಿಯಂದು ದೇವಾಲಯಗಳಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು.
ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ: ತಾಲೂಕಿನಲ್ಲಿ ದಿನೇ ದಿನೆ ಸೋಂಕು ಹೆಚ್ಚಾಗುತ್ತಿದ್ದರೂ, ಮೂಲಭೂತವಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ತಾಲೂಕಿಗೆ ಕೋವಿಡ್ 19 ಕಾಲಿಡುವ ಮುನ್ನ ಇದ್ದಂತ ಕಟ್ಟುನಿಟ್ಟಿನ ವ್ಯವಸ್ಥೆ ಈಗ ಇಲ್ಲವಾಗಿದೆ. ಬ್ಯಾಂಕ್, ಕೆಲವು ಸರ್ಕಾರಿ ಕಚೇರಿ ಬಿಟ್ಟರೆ ಇನ್ನೆಲ್ಲಿಯೂ ನಿಯಮ ಪಾಲನೆಯಾಗುತ್ತಿಲ್ಲ. ಭಾನುವಾರದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ಶನಿವಾರ ಜನಜಂಗುಳಿ ಹೆಚ್ಚಾಗಿತ್ತು.
ಇನ್ನು ನಿತ್ಯ 2 ಗಂಟೆ ನಂತರ ಲಾಕ್‌ಡೌನ್ ಎಂದು ಘೋಷಿಸಿರುವುದರಿಂದ 12 ಗಂಟೆ ನಂತರ ಮಾರುಕಟ್ಟೆ ಪ್ರದೇಶದಲ್ಲಿ ಹೆಚ್ಚು ಜನಸಂದಣಿ ಕಾಣುತ್ತಿದೆ. ರಸ್ತೆ ಮಧ್ಯದಲ್ಲಿಯೇ ತರಕಾರಿ ಅಂಗಡಿ ಇಟ್ಟುಕೊಂಡು ಅಂತರ ಕಾಯ್ದುಕೊಳ್ಳದಿದ್ದರೂ, ಮಾಸ್ಕ್ ಹಾಕದಿದ್ದರೂ ಯಾರೂ ಕೇಳುವವರೇ ಇಲ್ಲವಾಗಿದೆ.ರಕ್ಷಣೆ ನೀಡುವ ಮಾಸ್ಕ್ ಮತ್ತು ಫೇಸ್ ಶೀಲ್ಡ್‌ಗಳನ್ನು ಜನರು ಮುಟ್ಟುವಂತೆ ಧೂಳಿನಲ್ಲಿ ರಾಶಿ ಹಾಕಿಕೊಂಡು ಮಾರಲಾಗುತ್ತಿದೆ. ಜನ ಸಂದಣಿ ಇರುವಲ್ಲಿ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ನಿಯಂತ್ರಣ ಮಾಡದಿದ್ದಲ್ಲಿ ಯಾವ ಲಾಕ್‌ಡೌನ್ ಸಹ ಪ್ರಯೋಜನಕ್ಕೆ ಬಾರದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.