ಧಾರವಾಡ: ರಾಜ್ಯದ 30 ಜಿಲ್ಲೆಗಳಲ್ಲಿ ಧಾರವಾಡ ಜಿಲ್ಲೆಯು ಸಾಕ್ಷರತಾ ಪ್ರಮಾಣದಲ್ಲಿ ಉತ್ತಮ ಸಾಧನೆ ಮಾಡಿದೆ. 2011ರ ಜನಗಣತಿ ಪ್ರಕಾರ ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ.80 ಪ್ರಗತಿ ಸಾಧಿಸಲಾಗಿದೆ.
ಪುರುಷರ ಸಾಕ್ಷರತೆಯ ಪ್ರಮಾಣಶೇ.96.39, ಮಹಿಳೆಯರ ಸಾಕ್ಷರತೆಯ ಪ್ರಮಾಣ ಶೇ.73.46 ಸಾಧಿಸಲಾಗಿದೆ.ಜಿಲ್ಲಾ ಪಂಚಾಯತ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಇಲಾಖೆ 2019-20 ನೇ ಸಾಲಿನಲ್ಲಿ 4742 ಕಲಿಕೆಯ ಗುರಿ ಹೊಂದಿದ್ದು, ವಯಸ್ಕರಿಗೆ ಓದು, ಬರಹ ಹಾಗೂ ಸಾಮಾನ್ಯ ಲೆಕ್ಕಾಚಾರ ಆಸಕ್ತಬೋಧಕರ ಮೂಲಕ ಸಂಜೆ ಅವರವರಬಿಡುವಿನ ವೇಳೆಯಲ್ಲಿ ವಯಸ್ಕರರ ಮನೆಕಟ್ಟೆ ಮೇಲೆ ಇಲಾಖಾ ನಿಯಮಾನುಸಾರ ಕಲಿಸುವ ಪಕ್ರಿಯೆ ನಡೆಯುತ್ತಿದೆ.
2019-20ನೇ ಸಾಲಿನಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನಮಿಶ್ರೀಕೋಟಿ, ಅಣ್ಣಿಗೇರಿ ತಾಲೂಕಿನ ಭದ್ರಾಪುರ ಗ್ರಾಮ, ಮಜ್ಜಿಗುಡ್ಡ, ಸೈದಾಪುರ, ಬಸಾಪುರ, ಹುಬ್ಬಳ್ಳಿ ತಾಲೂಕಿನ ಬೆಳಗಲಿ, ಪಾಳ, ವೀರಾಪುರ, ಕುಂದಗೋಳ ತಾಲೂಕಿನ ಕಡಪಟ್ಟಿ,ಯರಿನಾರಾಯಣಪುರ, ಅಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೇ.100 ಸಾಕ್ಷರತಾ ಪ್ರಮಾಣ ಸಾಧಿಸುವ ಗುರಿ ಹೊಂದಲಾಗಿದೆ.
ಇದಲ್ಲದೇ ಮುಂಬರುವ 2020-21 ನೇ ಸಾಲಿನ ಜನಗಣತಿ ಸಾಕ್ಷರತಾ ಪ್ರಮಾಣದಲ್ಲಿ ಶೇ.90ಕ್ಕಿಂತ ಹೆಚ್ಚು ಸಾಧಿಸುವ ಆಶಯ ಹೊಂದಲಾಗಿದೆ.
ಜಿಲ್ಲೆಯಲ್ಲಿ ಸೇವಾಸಕ್ತರ ಜತೆಗೆ ಸಾಕ್ಷರತಾ ಕಾರ್ಯಕ್ರಮಗಳ ಅರಿವು ಮೂಡಿಸುವ ಹಾಗೂ ಜಿಲ್ಲೆಯಲ್ಲಿ ಸಾಕ್ಷರತಾ ಶೇ.100 ಸಾಧನೆ ಮಾಡುವ ವಿಶ್ವಾಸವಿದೆ. –
ಬಸವರಾಜ ಮಾಯಾಚಾರ್ಯ, ಪ್ರಭಾರಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ