Advertisement

“ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ-ಡ್ರೋನ್‌ ಆವಿಷ್ಕಾರ’

12:08 PM Mar 18, 2017 | |

ಉಡುಪಿ: ಪೈಲಟ್‌, ಮ್ಯಾನುವಲ್‌ ರಿಮೋಟ್‌ ಕಂಟ್ರೋಲರ್‌ ಇಲ್ಲದೆ, ಆಧುನಿಕ, ಸ್ವಯಂನಿಯಂತ್ರಣದಲ್ಲಿಯೇ ಹಾರಾಟ ನಡೆಸಿ ಮೋಡ ಬಿತ್ತನೆ ಕಾರ್ಯ ನಡೆಸುವ ಪರಿಸರ ಸ್ನೇಹಿ ಡ್ರೋನ್‌ ಅಭಿವೃದ್ಧಿಪಡಿಸಲಾಗಿದ್ದು, ಅತೀ ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಬಹುದು ಎಂದು ಡ್ರೋನ್‌ ಯೋಜನೆಯ ನಿರ್ಮಾತೃ ಕರುಣಾಕರ ನಾಯಕ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಸುಮಾರು 15 ವರ್ಷಗಳಿಂದ ಏರೋ ಮಾಡೆಲಿಂಗ್‌, ಮಾಡೆಲ್‌ ಹೆಲಿಕಾಪ್ಟರ್‌ ನಿರ್ಮಾಣದ ಹವ್ಯಾಸದಿಂದ ಹೊಸ ಚಿಂತನೆ ಮೂಡಿ ಡ್ರೋನ್‌ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದೇವೆ. ಡ್ರೋನ್‌ ಯಂತ್ರ ಚಾಲಕ ರಹಿತವಾಗಿದ್ದು, ವಿಮಾನ ನಿಲ್ದಾಣದ ಆವಶ್ಯಕತೆ ಇದಕ್ಕಿಲ್ಲ. ನಿರ್ವಹಣಾ ವೆಚ್ಚ ಬಹಳ ಕಡಿಮೆಯಾಗಿದ್ದು, ಹೆಚ್ಚು ಪ್ರಯೋಜನಕಾರಿಯಾಗಿದೆ. ಈಗಿರುವ ಮೋಡ ಬಿತ್ತನೆ ತಂತ್ರಜ್ಞಾನ ಇಬ್ಬರು ಚಾಲಕರ ಸಹಿತ ನಿರ್ವಹಣಾ ಎಂಜಿನಿಯರ್‌ ಹಾಗೂ ಭಾರೀ ಗಾತ್ರದ ವಿಮಾನವನ್ನೇ ಹೊಂದಿರಬೇಕಾಗಿದೆ. ಮೋಡ ಬಿತ್ತನೆಗಾಗಿ ಬಳಸುವ ಸಿಲ್ವರ್‌ ಅಯೋಧಿಡೈಡ್‌ ಮಿಶ್ರಣ ಕೇವಲ 5ರಿಂದ 10 ಕೆ.ಜಿ. ಆಗಿರುತ್ತದೆ. ಹಾಗಾಗಿ ಇದರ ನಿರ್ವಹಣಾ ವೆಚ್ಚ ತುಂಬಾ ಹೆಚ್ಚಾಗಿರು ವುದರಿಂದ ಅಂತಾ ರಾಷ್ಟ್ರೀಯ ಕಂಪೆನಿಗಳನ್ನು ಅವಲಂಬಿಸಬೇಕಾಗುತ್ತದೆ. ಮೋಡ ಬಿತ್ತನೆಗಾಗಿ ವಿಮಾನ ನಡೆಸುವ ಎಲ್ಲ ಕೆಲಸಗಳನ್ನೂ ಈ ಸಣ್ಣ ಡ್ರೋನ್‌ ನಿರ್ವಹಿಸಲಿದೆ. ಮುಖ್ಯವಾಗಿ ಖರ್ಚು ಕಡಿಮೆಗೊಳಿಸಲು ಡ್ರೋನ್‌ ಸಹಾಯವಾಗುತ್ತದೆ ಎಂದು ಅವರು ಹೇಳಿದರು.

ಇಸ್ರೋದ ನಿವೃತ್ತ ಎಂಜಿನಿಯರ್‌ ಜನಾರ್ದನ ರಾವ್‌, ಯೋಜನೆಯ ಇನ್ನೋರ್ವ ರೂವಾರಿ ಆ್ಯರೋನಾಟಿಕಲ್‌ ಎಂಜಿನಿಯರ್‌ ಪ್ರಜ್ವಲ್‌ ಹೆಗ್ಡೆ ಬೈಲೂರು, ದಿವಾಕರ್‌ ಕಾರ್ಕಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮಾ. 19: ಉಡುಪಿಯಲ್ಲಿ ಪ್ರಾಯೋಗಿಕ ಹಾರಾಟ
ಡ್ರೋನ್‌ನ ಪರೀಕ್ಷಾ ಹಾರಾಟ ನಡೆಸಲಾಗಿದೆ. ಮುಂದಿನ ಹಂತದಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸಿ ಮೋಡ ಬಿತ್ತನೆ ನಡೆಸಧಿಬೇಕಾದರೆ ಸರಕಾರಗಳು ಸಹಕರಿಸಬೇಕಿವೆ. ಮಾ. 19ರ ಸಂಜೆ 5.30ಕ್ಕೆ ಉಡುಪಿ ತಾಲೂಕು ಕ್ರೀಡಾಂಗಣದಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಸಮ್ಮುಖದಲ್ಲಿ ಪ್ರಾಯೋಗಿಕ ಹಾರಾಟವು ನಡೆಯಲಿದೆ 

– ಕರುಣಾಕರ್‌ ನಾಯಕ್‌

“ಸರಕಾರ ಪ್ರೋತ್ಸಾಹಿಸಬೇಕು’
ಮೋಡ ಬಿತ್ತನೆಗೆ ಈ ಹೊಸ ಯೋಜನೆ ಉತ್ತಮವಾಗಿದೆ. ಅಮೆರಿಕ, ಆಸ್ಟ್ರೇಲಿಯಾ, ಯುರೋಪ್‌, ಚೀನ, ಜಪಾನ್‌ ಮೊದಲಾದ ದೇಶಗಳಲ್ಲಿ ಡ್ರೋನ್‌ ಮೂಲಕ ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತಿದೆ. ಇದು ಕಡಿಮೆ ಖರ್ಚಿನಲ್ಲಿ ಆಗುವಂತಹದು. ತಂತ್ರಜ್ಞಾನದ ಬಗ್ಗೆ ನನ್ನಲ್ಲೂ ವಿವರಿಸಿದ್ದಾರೆ. ಯುವಕರದ್ದು ಸವಾಲಿನ ಕೆಲಸ. ಇದಕ್ಕೆ ಸರಕಾರ ಪ್ರೋತ್ಸಾಹಿಸಬೇಕು.

– ಜನಾರ್ದನ ರಾವ್‌, ನಿವೃತ್ತ ವಿಜ್ಞಾನಿ, ಇಸ್ರೋ 
 

Advertisement
Advertisement

Udayavani is now on Telegram. Click here to join our channel and stay updated with the latest news.

Next