Advertisement

ಪ್ರಾಚೀನ ಆಳುಪರ ಶಾಸನ ಪತ್ತೆ

11:21 PM Aug 15, 2019 | Sriram |

ಕುಂದಾಪುರ: ಹಟ್ಟಿಯಂಗಡಿ – ಕನ್ಯಾನ ಗ್ರಾಮದಲ್ಲಿ ಸುಮಾರು ಕ್ರಿ.ಶ. 7-8ನೇ ಶತಮಾನಕ್ಕೆ ಸಂಬಂಧಪಟ್ಟ ಆಳುಪರ ಕಾಲದ ಶಿಲಾ ಶಾಸನವೊಂದು ಪತ್ತೆಯಾಗಿದೆ.

Advertisement

ಶ್ರೀ ಶಾರದಾ ಕಾಲೇಜಿನ ಉಪನ್ಯಾಸಕ ಪ್ರೊ| ಪುರುಷೋತ್ತಮ ಬಲ್ಯಾಯ, ಪ್ರದೀಪ ಕುಮಾರ್‌ ಬಸ್ರೂರು ಹಾಗೂ ನಿವೃತ್ತ ಉಪನ್ಯಾಸಕ ಪ್ರೊ| ಬಿ.ಭಾಸ್ಕರ್‌ ಶೆಟ್ಟಿ ಶಾಸನವನ್ನು ಪತ್ತೆ ಹಚ್ಚಿದ್ದಾರೆ.

ಎರಡನೇಯ ಆಳುಪ ಅರಸನ ಕಾಲಕ್ಕೆ ಸಂಬಂಧಿಸಿದೆಂದು ತಿಳಿದು ಬಂದಿದೆ. ಈ ಶಾಸನದಲ್ಲಿ ಪಾಂಡ್ಯ ಆಳುಪೇಂದ್ರ ಪಟ್ಟಿಯಪುರಿ (ಹಟ್ಟಿಯಂಗಡಿ) ಹಾಗೂ ಭಟ್ಟರಕ ಎನ್ನುವ ಶಬ್ದಗಳು ಇದರಲ್ಲಿದ್ದು, ಎರಡೂ ಬದಿಗಳಲ್ಲಿ ಬರೆಯಲ್ಪಟ್ಟಿದೆ. ಪಾಂಡ್ಯ ಕುಲ ವಸ್ತುಸ್ಥಿತಿಯ ಕ್ರಿ.ಶ. 8 ನೇ ಶತಮಾನದ ಬೆಳ್ಮಣ್ಣು ತಾಮ್ರ ಶಾಸನ ಹಾಗೂ ಪೊಳಲಿ ಅಮ್ಮುಂಜೆ ಶಾಸನದಲ್ಲಿ ಬಂದಿರುವುದನ್ನು ಗಮನಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next