Advertisement
ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ದಿಲ್ಲಿಯ ಮನೆಯಲ್ಲಿ 8.59 ಕೋಟಿ ರೂ. ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆಡಿಕೆಶಿ ಅವರನ್ನು ಶುಕ್ರವಾರ ಸಂಜೆಯಿಂದ ಇಡಿ ಅಧಿಕಾರಿಗಳು ಬೇರೆ ಬೇರೆ ಆಯಾಮಗಳಲ್ಲಿ ವಿಚಾರಣೆಗಳನ್ನು ನಡೆಸಿದ್ದರು.
ಇಡಿ ಅಧಿಕಾರಿಗಳ ಸತತ ವಿಚಾರಣೆಯ ಬಳಿಕ ಮಾತನಾಡಿದ ಡಿ. ಕೆ. ಶಿವಕುಮಾರ್ ನಾಳೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ, ನಾಳೆಯ ವಿಚಾರಣೆಗೆ ನಾನು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದು ಹೇಳಿ ಕರ್ನಾಟಕ ಭವನಕ್ಕೆ ತೆರಳಿದರು. ಶುಕ್ರವಾರದ ಬೆಳವಣಿಗೆ :
ಇತ್ತ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗುತ್ತಿದ್ದಂತೆ, ಡಿ.ಕೆ.ಶಿವಕುಮಾರ್ ಶುಕ್ರವಾರ ಸಂಜೆ ವೇಳೆಗೆ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ದಿಲ್ಲಿಯ ಮನೆಯಲ್ಲಿ 8.59 ಕೋಟಿ ರೂ. ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಶುಕ್ರವಾರ ತಡರಾತ್ರಿಯವರೆಗೂ ವಿಚಾರಣೆ ನಡೆಸಿದರು.ಇಡಿ ಅಧಿಕಾರಿಗಳ ಮುಂದೆ ಹಾಜರಾಗಲು ಅಪರಾಹ್ನ 1 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದಿಲ್ಲಿಗೆ ತೆರಳಿದ ಡಿ.ಕೆ. ಶಿವಕುಮಾರ್, ಸಂಜೆ 6.30ರ ಸುಮಾರಿಗೆ ದಿಲ್ಲಿಯ ಲೋಕನಾಯಕ ಭವನದಲ್ಲಿರುವ ಇ.ಡಿ ಕೇಂದ್ರ ಕಚೇರಿಗೆ ತಮ್ಮ ಕೆಲ ಬೆಂಬಲಿಗರು ಹಾಗೂ ಆಪ್ತರೊಂದಿಗೆ ಆಗಮಿಸಿದರು.