Advertisement
ಕಡಬದಲ್ಲಿ ಡಯಾಲಿಸಿಸ್ ಕೇಂದ್ರ ಇಲ್ಲದೆ ಇರುವುದರಿಂದಾಗಿ ಕಡಬ ಭಾಗದ ಜನ ದೂರದ ಪುತ್ತೂರು, ಬೆಳ್ತಂಗಡಿ, ಮಂಗಳೂರಿಗೆ ಡಯಾಲಿಸ್‌ಗಾಗಿ ತೆರಳಬೇಕಾದ ಅನಿವಾರ್ಯ ಇದೆ. ಮೊದಲೇ ಅನಾರೋಗ್ಯದಿಂದ ಕಂಗಾಲಾಗಿರುವ ಬಡ ರೋಗಿಗಳಿಗೆ ದೂರದ ಪ್ರಯಾಣ ಮತ್ತು ಆರ್ಥಿಕ ಹೊರೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರತಿ ರೋಗಿಯ ಡಯಾಲಿಸಿಸ್‌ಗೆ ಕನಿಷ್ಠ 4 ತಾಸು ಬೇಕಾಗಿದ್ದು, ಪುತ್ತೂರು, ಬೆಳ್ತಂಗಡಿ, ಮಂಗಳೂರಿನ ಆಸ್ಪತ್ರೆಗಳಿಗೆ ತೆರಳಿದರೂ ವಾರಕ್ಕೆ 2 ಅಥವಾ 3 ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ರೋಗಿಗಳು ತಮ್ಮ ಸರದಿಗಾಗಿ ತಡರಾತ್ರಿಯವರೆಗೂ ಕಾಯಬೇಕಾದ ಪರಿಸ್ಥಿತಿ ಇದೆ.
ಕಡಬದಲ್ಲಿ ಸುಮಾರು 5 ಕೋಟಿ ರೂ.ಗಳಿಗೂ ಮಿಕ್ಕಿ ಅನುದಾನ ವ್ಯಯಿಸಿ ಸಮುದಾಯ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ ಇಲ್ಲಿಗೆ ಅಗತ್ಯ ತಜ್ಞ ವೈದ್ಯರ ನೇಮಕವಾಗಿಲ್ಲ. ಸಿಬಂದಿ ಕೊರತೆ, ವೈದ್ಯಕೀಯ ಸಲಕರಣೆಗಳ ಕೊರತೆಯಿಂದ ಈ ಆಸ್ಪತ್ರೆ ಕೇವಲ ತಲೆನೋವು, ಜ್ವರ ಹಾಗೂ ಅಪಘಾತ ನಡೆದಾಗ ಪ್ರಥಮ ಚಿಕಿತ್ಸೆ ಮೊದಲಾದ ಸೀಮಿತ ಚಿಕಿತ್ಸೆಗಳಿಗೆ ಮೀಸಲಾಗಿದೆ. ಕಡಬ ಸಮುದಾಯ ಆಸ್ಪತ್ರೆಗೆ ತಜ್ಞ ವೈದ್ಯರು, ವೈದ್ಯಕೀಯ ಸಲಕರಣೆಗಳನ್ನು ನೀಡಿ ಸೌಲಭ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಸೂಕ್ತ ರೀತಿಯಲ್ಲಿ ಪ್ರಯತ್ನಿಸುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಹಲವು ಗ್ರಾಮಗಳ ವ್ಯಾಪ್ತಿ
ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಹೀಗೆ 8 ಗ್ರಾಮಗಳ ವ್ಯಾಪ್ತಿಯನ್ನು ಈ ಆಸ್ಪತ್ರೆ ಹೊಂದಿದೆ. ಆದರೆ ಹತ್ತಿರದ ಕುಂತೂರು, ಆಲಂಕಾರು, ಕೊಂಬಾರು, ಸಿರಿಬಾಗಿಲು, ಐತ್ತೂರು, ಕೊಣಾಜೆ, ಕಾಣಿಯೂರು, ಚಾರ್ವಾಕ, ಸುಬ್ರಹ್ಮಣ್ಯ, ಪಂಜ, ಏನೆಕಲ್, ಬಳ್ಪ, ಕೇನ್ಯ, ಎಡಮಂಗಲ ಪ್ರದೇಶದ ಜನರು ಕೂಡ ಇದೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿರುವುದರಿಂದ ವ್ಯಾಪ್ತಿ ದೊಡ್ಡದಾಗಿ ವಿಸ್ತರಿಸಿದೆ. ಕಡಬ ಸುತ್ತಮುತ್ತಲಿನ ವ್ಯಾಪ್ತಿ ಯಲ್ಲಿ ವಾರಕ್ಕೆರಡು ಬಾರಿ ಡಯಾಲಿಸಿಸ್ ಅಗತ್ಯವಿರುವ ಅಂದಾಜು 30ರಿಂದ 40 ರೋಗಿಗಳಿದ್ದಾರೆ.
Related Articles
ಕಡಬ ಸಮುದಾಯ ಆಸ್ಪತ್ರೆ ಇನ್ನಷ್ಟೇ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇ ರಬೇಕಿದೆ. ಆದರೂ ವಿಶೇಷ ಪ್ರಕರಣ ವೆಂದು ಪರಿಗಣಿಸಿ ಡಯಾಲಿಸಿಸ್ ಕೇಂದ್ರ ತೆರೆಯಬೇಕೆನ್ನುವ ಬೇಡಿಕೆ ಸಚಿವರ ಮುಂದಿಡಲಾಗಿದೆ. ಯಂತ್ರಗಳ ಪೂರೈಕೆಗೆ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ ಮಾತುಕತೆ ನಡೆಸಲಾಗಿದೆ.
-ಎಸ್.ಅಂಗಾರ, ಸುಳ್ಯ ಶಾಸಕರು.
Advertisement
ಕೋವಿಡ್‌ನಿಂದ ನನೆಗುದಿಗೆಪ್ರಸ್ತುತ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ಗಳಿವೆ. ಸಮುದಾಯ ಆಸ್ಪತ್ರೆಗಳಲ್ಲೂ ಆರಂಭಿಸಬೇಕೆನ್ನುವ ಬೇಡಿಕೆ ಮುಂದಿಡ ಲಾಗಿತ್ತು. ರಾಜ್ಯದ 207 ಸಮುದಾಯ ಆರೋಗ್ಯ ಕೇಂದ್ರ ಗಳ ಪೈಕಿ ತೀರಾ ಅಗತ್ಯವಿರುವ ಕಡೆಗಳಲ್ಲಾದರೂ ಡಯಾ ಲಿಸಿಸ್ ಕೇಂದ್ರ ತೆರೆಯುವ ಪ್ರಸ್ತಾವವಿತ್ತು. ಆದರೆ ಕೋವಿಡ್ ಕಾರಣದಿಂದ ಅದು ಕೂಡ ನನೆಗುದಿಗೆ ಬಿದ್ದಿದೆ. -ಡಾ| ರಾಮಚಂದ್ರ ಬಾಯರಿ, ಡಿಎಚ್‌ಒ. ನಾಗರಾಜ್ ಎನ್.ಕೆ.