Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಖಂಡಿ ಕ್ಷೇತ್ರದ ಬಿದರಿ ನಿವಾಸಿಯಾಗಿದ್ದು, ವಿಜಯಪುರದಲ್ಲಿ ಸಿಪಿಇಡಿ ಮುಗಿಸಿದ್ದೇನೆ. ಪ್ರಸಕ್ತ ಬಿದರಿ ಗ್ರಾಮದ ಸ್ವಂತ ಹೊಲದಲ್ಲಿ ಆಶ್ರಮ ನಿರ್ಮಿಸಿ ರೋಗ ರುಜಿನ, ಅಶಾಂತಿಮನಃಸ್ಥಿತಿಯವರಿಗೆ ಸಾಂತ್ವನ ಗುರುವಾಗಿ ನೊಂದವರ ಮೊಗದಲ್ಲಿ ನಗು ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಆಶ್ರಮದಲ್ಲಿ ಆರ್ಯುವೇದ ಗಿಡಮೂಲಿಕೆ ಸಸ್ಯ ಬೆಳೆದು ವಿವಿಧ ರೋಗದಿಂದ ಬಳಲುತ್ತಿರುವರಿಗೆ ಉಚಿತ ಔಷಧ ನೀಡುತ್ತಿದ್ದೇನೆ. ಯಾವುದೇ ಸರ್ಕಾರ, ದಾನಿಗಳ ನೆರವಿಲ್ಲದೆ ಆಶ್ರಮಕ್ಕೆ ಆಗಮಿಸುವ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಪಕ್ಕದ ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಮಠದ ಭಕ್ತರಿದ್ದಾರೆ. 20 ವರ್ಷಗಳಿಂದ ಜನಸಾಮಾನ್ಯರ ಕಷ್ಟ- ಸುಖದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಜನರು ರಾಜಕೀಯಕ್ಕೆ ಬರಲು ಒತ್ತಾಯಿಸುತ್ತಿದ್ದಾರೆ ಎಂದರು.
ಯೋಗಿ ಆದಿತ್ಯನಾಥ ಆಡಳಿತ ದೇಶದ ಜನತೆ ಮನಸೂರೆಗೊಂಡಿದೆ. 20 ವರ್ಷಗಳಿಂದ ಜನಸಾಮಾನ್ಯರ ಕಷ್ಟ- ಸುಖದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಜನರು ರಾಜಕೀಯಕ್ಕೆ ಬರಲು ಒತ್ತಾಯಿಸುತ್ತಿದ್ದಾರೆ ಎಂದರು.