Advertisement
ಮಹಾನಗರದ ಎಲ್ಲ ರಸ್ತೆಗಳು ಶರಣನ ಗುಡಿಯೆಡೆಗೆ ಎನ್ನುವಂತೆ ಭಕ್ತರು ಆಗಮಿಸಿ ದರ್ಶನ ಪಡೆದರು. ಅದರಲ್ಲೂ ಜಿಟಿಜಿಟಿ ಮಳೆ ಲೆಕ್ಕಿಸದೇ ಭಕ್ತರು ಸೋಮವಾರ ಬೆಳಗಿನ ಜಾವದಿಂದಲೇ ಶರಣನ ದರ್ಶನ ಪಡೆಯುತ್ತಿರುವುದು ಅದರಲ್ಲೂ ಉದ್ದನೆ ಸಾಲು ಇದ್ದರೂ ಸರದಿಯಲ್ಲಿ ನಿಂತಿರುವುದು ಕಂಡು ಬಂತ್ತು.
ಆಗಮಿಸಿ ಭಕ್ತಿ ಪರಾಕಾಷ್ಠೆ ಮೆರೆದರು. ಮಹಾನಗರದ ಭಕ್ತರೂ ಮನೆಯಿಂದಲೇ ನೇವೈದ್ಯ ಕಾಯಿ ಕರ್ಪೂರ ತಂದು ಅರ್ಪಿಸಿದರು. ಕೆಲವರು ದೀಡ ನಮಸ್ಕಾರ ಹಾಕಿದರೆ, ಇನ್ನೂ ಕೆಲವರು ತಮ್ಮ ಹರಕೆ ತೀರಿಸಿದರು. ನಡುವಿನ ಸೋಮವಾರ ಹಿನ್ನೆಲೆಯಲ್ಲಿ ಶರಣನ ಸನ್ನಿಧಿಯಲ್ಲಿ ಜಾತ್ರೆಯಂತೆ ವಾತಾವತಣ ಕಂಡು ಬಂತು. ಅಂಗಡಿ ಮುಂಗಟ್ಟುಗಳು, ಮಕ್ಕಳಿಗೆ ಆಟಿಕೆ ಸಾಮಗ್ರಿಗಳು ಎಲ್ಲವು ಇದ್ದವು. ಸಂಜೆ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರ ಸನ್ನಿಧಾನದಲ್ಲಿ ಮಹಾದಾಸೋಹ ಸಂಸ್ಥಾನದಲ್ಲಿ ಶ್ರಾವಣ ಮಾಸದ ಉಪನ್ಯಾಸ ಮಾಲಿಕೆಗಳು ನಡೆದವು.